ಇದಕ್ಕೂ ಮೊದಲು ಶ್ರೀ ಚಂದ್ರಮೌಳೇಶ್ವರನಿಗೆ ಮುಂಜಾನೆ 4.30ರಿಂದ ಜಲಾಭಿಷೇಕ, ರುದ್ರಾಭಿಷೇಕ, ರುದ್ರಪಾರಾಯಣ ನೇರವೇರಿಸಿ ವಿವಿಧ ಬಗೆಯ ವಿಶೇಷ ಹೂವುಗಳಿಂದ ಅಲಂಕರಿಸಿದ್ದು, ಸೂರ್ಯರಶ್ಮಿ ಸ್ಪರ್ಶದ ಬಳಿಕ ವಿಶೇಷ ಪೂಜೆ, ಮಹಾಮಂಗಳಾರತಿ ಸಲ್ಲಿಸಿದ ಶ್ರೀಗಳು ಮಠದ ಭಕ್ತರೊಂದಿಗೆ ಹೊರಭಾಗದಲ್ಲಿ ಗೋ ಪೂಜೆಯೊಂದಿಗೆ ಗೋವುಗಳಿಗೆ ಪ್ರಸಾದ ಅರ್ಪಿಸಿದರು. ಬಳಿಕ ದೇಗುಲದಲ್ಲಿ ಮುಂಜಾನೆಯಿಂದ ನೆರೆದು ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಂಡ ಭಕ್ತರಿಗೆ ಹೂವು-ತೀರ್ಥದೊಂದಿಗೆ ಎಳ್ಳು-ಬೆಲ್ಲ ತಿನ್ನಲು ನೀಡಿ ಶುಭನುಡಿಗಳೊಂದಿಗೆ ಹಾರೈಸಿದರು.