ಒಳಮೀಸಲಾತಿ ಹೆಸರಿನಲ್ಲಿ ಕಾಂಗ್ರೆಸ್ ಒಡೆದು ಹಾಳುವ ನೀತಿ

ಮಳವಳ್ಳಿ ಪಟ್ಟಣದಲ್ಲಿ ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾನ್ಸಿರಾಮ್ ಜೀ ರವರ ಜನ್ಮದಿನದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಬಹುಜನ ದಿವಸ್ ಜಾಗೃತಿ ಸಮಾವೇಶವನ್ನು  ಬಿಎಸ್‌ಪಿ ಪಕ್ಷದ ರಾಜ್ಯಾಧ್ಯಕ್ಷ  ಎಂ.ಕೃಷ್ಣಮೂರ್ತಿ ಉದ್ಘಾಟಿಸಿದರು. ಹ.ರಾ.ಮಹೇಶ್, ಗಂಗಾಧರ್ ಬಹುಜನ್, ಜಾಕೀರ್ ಹುಸೇನ್, ಎಸ್. ಶಿವಶಂಕರ್, ವೀರಭದ್ರಯ್ಯ, ನಂಜುಂಡಸ್ವಾಮಿ, ಸುಧಾಕರ್,  ದೇವರಾಜು, ಲೋಕೇಶ್‌ಗೌಡ, ರಾಜೇಂದ್ರ, ತಮ್ಮಯ್ಯ, ಮಹೇಶ್ ಇದ್ದರು.
ಮಳವಳ್ಳಿ ಪಟ್ಟಣದಲ್ಲಿ ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾನ್ಸಿರಾಮ್ ಜೀ ರವರ ಜನ್ಮದಿನದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಬಹುಜನ ದಿವಸ್ ಜಾಗೃತಿ ಸಮಾವೇಶವನ್ನು ಬಿಎಸ್‌ಪಿ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಉದ್ಘಾಟಿಸಿದರು. ಹ.ರಾ.ಮಹೇಶ್, ಗಂಗಾಧರ್ ಬಹುಜನ್, ಜಾಕೀರ್ ಹುಸೇನ್, ಎಸ್. ಶಿವಶಂಕರ್, ವೀರಭದ್ರಯ್ಯ, ನಂಜುಂಡಸ್ವಾಮಿ, ಸುಧಾಕರ್, ದೇವರಾಜು, ಲೋಕೇಶ್‌ಗೌಡ, ರಾಜೇಂದ್ರ, ತಮ್ಮಯ್ಯ, ಮಹೇಶ್ ಇದ್ದರು.
Published on

ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಆರೋಪ

ಮಳವಳ್ಳಿ: ಒಳ ಮೀಸಲಾತಿ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿಗಳನ್ನು ಒಡೆದು ಹಾಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಡಾ.ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾನ್ಸಿರಾಮ್ ಜೀ ರವರ ಜನ್ಮದಿನದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಬಹುಜನ ದಿವಸ್ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯ ಒಂದು ಪಂಗಡ ಒಳ ಮೀಸಲಾತಿಗಾಗಿ 35 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿತ್ತು. ಒಳಮೀಸಲಾತಿ ಕಲ್ಪಿಸುವ ವಿಚಾರವಾಗಿ ಈ ಹಿಂದೆ ಕಾಂಗ್ರೆಸ್ ಸರ್ಕಾರ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಮತ್ತೆ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಒಳಮೀಸಲಾತಿ ಜಾರಿ ಮಾಡಿ ಅವೈಜ್ಞಾನಿಕ ರೋಸ್ಟರ್ ಬಿಂದುವನ್ನು ಅಳವಡಿಸಿ ಪರಿಶಿಷ್ಟ ಜಾತಿಗಳನ್ನು ಬೀದಿಯಲ್ಲಿ ನಿಲ್ಲಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಸಿ-ಎಸ್ಟಿಗಳ 53 ಸಾವಿರ ಕೋಟಿ ರೂ. ಬೇರೆ ಯೋಜನೆಗೆ ದುರ್ಬಳಕೆಯಾಗುತ್ತಿದ್ದು,  ಇದರ ಬಗ್ಗೆ ಮಳವಳ್ಳಿ ಕ್ಷೇತ್ರದ ಶಾಸಕ ನರೇಂದ್ರಸ್ವಾಮಿ ಸೇರಿದಂತೆ ಯಾವೊಬ್ಬ ದಲಿತ ಶಾಸಕ ಮಾತನಾಡುತ್ತಿಲ್ಲ. ಇಂತಹ ದಲಿತ ವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕು ಎಂದರು. 
ಡಾ.ಅಂಬೇಡ್ಕರ್ ನಂತರ ಈ ದೇಶದಲ್ಲಿ ಶೋಷಿತರನ್ನು ಜಾಗೃತಿ ಮೂಡಿಸುವ ಮೂಲಕ ಅವರಿಗೆ ರಾಜಕೀಯ ಅಧಿಕಾರವನ್ನು ದೊರಕಿಸಿಕೊಂಡವರು ದಾದಾ ಸಾಹೇಬ್ ಕಾನ್ಸಿರಾಂ ಜೀ. ಅವರು ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಬಿಎಸ್ಪಿ ಪಕ್ಷವನ್ನು ಕಟ್ಟಿ ಸ್ವತಂತ್ರವಾಗಿ ಅಧಿಕಾರಕ್ಕೆ ತಂದು ಮಾಯಾವತಿ ಅವರನ್ನು ನಾಲ್ಕು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿ ತೋರಿಸಿದ್ದಾರೆ ಎಂದರು. 
ಬಿಎಸ್ಪಿ ಪಕ್ಷದ ರಾಜ್ಯ ಉಸ್ತುವಾರಿಗಳಾದ ಹ.ರಾ.ಮಹೇಶ್, ಗಂಗಾಧರ್ ಬಹುಜನ್, ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್, ಮಂಡ್ಯ ಜಿಲ್ಲಾಧ್ಯಕ್ಷ ಎಸ್.ಶಿವಶಂಕರ್, ಉಸ್ತುವಾರಿ  ಎಚ್.ಎನ್.ವೀರಭದ್ರಯ್ಯ, ತಾಲೂಕು ಅಧ್ಯಕ್ಷ ವಿ.ನಂಜುಂಡಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಚ್.ಎಂ.ಸುಧಾಕರ್ ಮುಖಂಡರಾದ ಉಮೇಶ್ ಮೌರ್ಯ, ಎನ್.ದೇವರಾಜು, ಲೋಕೇಶ್‌ಗೌಡ, ರಾಜೇಂದ್ರ, ತಮ್ಮಯ್ಯ, ಮಹೇಶ್ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net