ಹೊರವಲಯದಲ್ಲಿರುವ ಸ್ಮಶಾನ, ಮಾಂಸದ ಅಂಗಡಿ, ಹೋಟೆಲ್, ಬೇಕರಿಗಳು ನಾಯಿಗಳ ತಂಗುದಾಣವಾಗಿ ಮಾರ್ಪಟ್ಟಿದೆ. ಗ್ರಾಮದ ಮಂದಗೆರೆ ರಸ್ತೆ, ಬಿಎಂ ರಸ್ತೆಯಲ್ಲಿ ಮಿಲ್ಟ್ರಿ ಹೋಟೆಲ್‌ಗಳಿವೆ. ಜತೆಗೆ ಡಾಬಾ, ಸಣ್ಣಪುಟ್ಟ ಬಿರಿಯಾನಿ, ಕಬಾಬು ಆಂಗಡಿಗಳು ಸಾಕಷ್ಟಿದ್ದು, ಈ ಸ್ಥಳದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಿದೆ. ಮಾಂಸ, ಮೂಳೆ ಚೂರು ತಿನ್ನಲು ನಾಯಿಗಳು ಕಚ್ಚಾಡಿ ಗ್ರಾಹಕರನ್ನೂ ಕಚ್ಚಿರುವ ಉದಾಹರಣೆಗಳು ಇವೆ.