ಮತ್ತೆ ಚಿಮ್ಮಿದ ಕೆಆರ್‌ಎಸ್ ಬೃಂದಾವನದ ಕಾರಂಜಿಗಳು

ಕೃಷ್ಣ ರಾಜಸಾಗರ ಅಣೆಕಟ್ಟೆ ಯಲ್ಲಿ ಸ್ಥಗಿತಗೊಂಡ ನೀರಿನ ಕಾರಂಜಿಗಳು ಚಾಲನೆಯಾಗಿರುವ ಚಿತ್ರಗಳು.
ಕೃಷ್ಣ ರಾಜಸಾಗರ ಅಣೆಕಟ್ಟೆ ಯಲ್ಲಿ ಸ್ಥಗಿತಗೊಂಡ ನೀರಿನ ಕಾರಂಜಿಗಳು ಚಾಲನೆಯಾಗಿರುವ ಚಿತ್ರಗಳು.
Published on
ಕೆ.ಆರ್.ಸಾಗರ: ಕೃಷ್ಣರಾಜಸಾಗರ ಅಣೆಕಟ್ಟೆಯ ವಿಶ್ವ ವಿಖ್ಯಾತ ಬೃಂದಾವನದಲ್ಲಿ ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ನೀರಿನ ಕಾರಂಜಿಗಳು ಮತ್ತೆ ಚಿಮ್ಮ ತೊಡಗಿದ್ದು, ಮತ್ತೆ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಮಂಗಳವಾರ ‘100 ರೂ. ತೆತ್ತರೂ ಇಲ್ಲ ಕಾರಂಜಿ ಸಂಭ್ರಮ’ ಎಂಬ ಶೀರ್ಷಿಕೆಯಡಿ ವಿಜಯವಾಣಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತ ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳು ಮಂಗಳವಾರ ಬೆಳಗ್ಗೆಯಿಂದಲೇ ಬೃಂದಾವನದ ನೀರಿನ ಕಾರಂಜಿಗಳಿಗೆ ಅಣೆಕಟ್ಟೆಯಿಂದ ಪೂರೈಕೆ ಮಾಡುವ ತೊಟ್ಟಿಯಿಂದ ಪಂಪ್ ಅಳವಡಿಸಿ ನೀರು ಪೂರೈಸಿದರ ಪರಿಣಾಮ ಬುಧವಾರ ಮಧ್ಯಾಹ್ನದ ವೇಳೆಗೆ ಕಾರಂಜಿಗಳು ಚಿಮ್ಮತೊಡಗಿದವು.
ನೀರಿನ ಕಾರಂಜಿಗಳನ್ನು ಸ್ವಚ್ಛಗೊಳಿಸಲಾಗಿದ್ದು, ಸಂಜೆ ದೀಪಾಲಂಕಾರ ಚಾಲನೆಗೊಂಡಿದೆ. ನೀರಿನ ಕಾರಂಜಿಗಳು ವಿವಿಧ ಬಣ್ಣದ ದೀಪದ ನಡುವೆ ಚಿಮ್ಮುತ್ತಿದೆ. ಕೊನೆಗೂ ಪ್ರವಾಸಿಗರಿಗೆ ಕೊಟ್ಟ 100 ರೂ. ಪ್ರವೇಶ ದರಕ್ಕೆ ನೀರಿನ ಕಾರಂಜಿ ವೀಕ್ಷಣೆ ಭಾಗ್ಯ ಸಿಕ್ಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net