ಸಹಕಾರ ತತ್ವ ಡೇರಿಗೆ ಆಸರೆ

ಕಿಕ್ಕೇರಿ ಸಮೀಪದ ಮಾರೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಡಾಲು ರವಿ, ವಿಮಲಾ, ನೇತ್ರಾವತಿ, ಪ್ರೇಮಾ, ಲಕ್ಷ್ಮಮ್ಮ ಮತ್ತಿತರರಿದ್ದರು.
ಕಿಕ್ಕೇರಿ ಸಮೀಪದ ಮಾರೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಡಾಲು ರವಿ, ವಿಮಲಾ, ನೇತ್ರಾವತಿ, ಪ್ರೇಮಾ, ಲಕ್ಷ್ಮಮ್ಮ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮನ್ ಮುಲ್ ನಿದೇರ್ಶಕ ಡಾಲು ರವಿ ಅಭಿಪ್ರಾಯ
  • ವಾರ್ಷಿಕ ಮಹಾಸಭೆ
ಕಿಕ್ಕೇರಿ: ಹಾಲು ಉತ್ಪಾದಕರ ಸಹಕಾರ ಸಂಘದ ಶ್ರೇಯಸ್ಸಿಗೆ ಪರಸ್ಪರ ಸ್ನೇಹಪೂರ್ವ ಸಹಕಾರ ತತ್ವ ಅವಶ್ಯವಿದೆ ಎಂದು ಮನ್‌ಮುಲ್ ನಿರ್ದೇಶಕ ಡಾಲು ರವಿ ತಿಳಿಸಿದರು.
ಸಮೀಪದ ಮಾರೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಇತ್ತೀಚೆಗೆ ಜರುಗಿದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.
ಗುಣಮಟ್ಟದ ಹಾಲು ವಿತರಣೆಯಿಂದ ಸಂಘ ಹಾಗೂ ಹಾಲು ಉತ್ಪಾದಕರು ಲಾಭ ಪಡೆಯಬಹುದು. ಹಾಲು ಉತ್ಪಾದಕರೇ ಸಂಘದ ಜೀವಾಳ. ಒಕ್ಕೂಟದಿಂದ ಶಿಕ್ಷಣ, ಮರಣ ನಿಧಿ, ಆಪತ್ ನಿಧಿಯಂತಹ 9 ನಿಧಿಗಳಿದ್ದು, ಇವುಗಳಿಂದ ಗ್ರಾಹಕರ ಕುಟುಂಬದ ಅಭಿವೃದ್ಧಿಗೆ ವಿವಿಧ ಯೋಜನೆಗಳ ಅನುದಾನ ಬಳಕೆ ಮಾಡಿಕೊಳ್ಳಬಹುದಾಗಿದೆ. ಸಂಘ ಸುಮಾರ 7,ಲಕ್ಷ ರೂ.ಗಳಷ್ಟು ಆದಾಯದಲ್ಲಿದೆ. ಮತ್ತಷ್ಟು ಅಭಿವೃದ್ಧಿಗಾಗಿ ಹಾಲು ಉತ್ಪಾದಕರ, ಸ್ಥಳೀಯ ಮುಖಂಡರ ಸಹಕಾರ ಪಡೆಯಿರಿ ಎಂದರು.
ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿ. ಅಕಾಲಿಕ ಮರಣ ಸಂಭವಿಸುವುದರಿಂದ ಆರ್ಥಿಕ ಸಂಕಷ್ಟ ತಂದುಕೊಳ್ಳದಿರಿ. ವಿಮೆ ತಮ್ಮ ಹೈನುಗಾರಿಕೆ ಕಸುಬಿಗೆ ಆಸರೆಯಾಗಲಿದೆ. ರಾಸುಗಳ ಆರೈಕೆ, ಆರೋಗ್ಯ ತಪಾಸಣೆಯಲ್ಲಿ ಉದಾಸೀನ ಬೇಡ. ಹಾಲಿನಲ್ಲಿ ಡಿಗ್ರಿ ಬರಲಿ ಎಂದು ರಾಸಾಯನಿಕ, ಸಕ್ಕರೆ ಮಿಶ್ರಣ ಮಾಡದಿರಿ. ಇದು ಸಂಘ, ವ್ಯೆಯಕ್ತಿಕವಾಗಿ ಕೆಟ್ಟ ಹೆಸರು ಬರಲಿದೆ. ರೈತ ಅನ್ನದಾತ ಜತೆಗೆ ಆರೋಗ್ಯವನ್ನು ಹಾಲಿನ ಮೂಲಕ ನೀಡುವ ಆರೋಗ್ಯದಾತ. ಗುಣಮಟ್ಟದ ಪೌಷ್ಟಿಕಾಂಶ ಭರಿತ ಆಹಾರ ತಮ್ಮ ಡೇರಿಯಲ್ಲಿ ಸಿಗಲಿದ್ದು ಸದ್ಭಳಕೆ ಮಾಡಿಕೊಳ್ಳಿ. ಹಾಲು ಉತ್ಪಾದಕರ ಮಕ್ಕಳ ವ್ಯಾಸಂಗಕ್ಕೆ ಒಕ್ಕೂಟ ಸದಾ ಆಸರೆಯಾಗಿದೆ ಎಂದು ಮಾಹಿತಿ ನೀಡಿದರು.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ಮಕ್ಕಳಿಗೆ ಗೌರವಿಸಲಾಯಿತು.
ಸಂಘದ ಅಧ್ಯಕ್ಷೆ ವಿಮಲಾ, ಉಪಾಧ್ಯಕ್ಷೆ ನೇತ್ರಾವತಿ, ನಿರ್ದೇಶಕರಾದ ಪ್ರೇಮಾ, ಲಕ್ಷ್ಮಮ್ಮ, ಭಾಗ್ಯಮ್ಮ, ಪಾರ್ವತಿ, ಲಕ್ಷ್ಮಮ್ಮಾ, ಮೀನಾಕ್ಷಿ, ವಸಂತಾ, ಮಮತಾ, ಸುಂದರಮ್ಮ, ಶೋಭಾ, ಗೀತಾ, ಮುಖಂಡರಾದ ಮಂಜು, ನಾಗೇಶ್, ಶಂಕರೇಗೌಡ, ಹರೀಶ್, ಕೃಷ್ಣ, ರಘು, ಬಸವರಾಜು, ವಿರೂಪಾಕ್ಷ, ಸೋಮಶೇಖರ್, ಶಿವಶಂಕರ, ಧರ್ಮೇಶ್, ದಿನೇಶ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net