ಮದ್ದೂರು ನಗರದ ಎಚ್.ಕೆ.ವೀರಣ್ಣಗೌಡ ಪದವಿಪೂರ್ವ ಕಾಲೇಜಿನಲ್ಲಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಸನ್ನ ಕುಮಾರ್ ಅವರಿಗೆ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು. ಸಿ.ಅಪೂರ್ವ ಚಂದ್ರ, ಎಸ್.ಶಿವಕುಮಾರ್, ಸುರೇಂದ್ರ, ಜಿ.ಎಸ್.ನಂದಿನಿ, ಸುಚಿತ್ರಾ, ರಕ್ಷಿತಾ, ಸಿದ್ದರಾಜು ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಿಡಿಪಿಯು ಪ್ರಸನ್ನಕುಮಾರ್ ಅಭಿಮತ
ಮದ್ದೂರು:
ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ಕೊಡುವಲ್ಲಿ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಸನ್ನ ಕುಮಾರ್ ತಿಳಿಸಿದರು.
ನಗರದ ಎಚ್.ಕೆ.ವೀರಣ್ಣಗೌಡ ಪದವಿಪೂರ್ವ ಕಾಲೇಜಿಗೆ ಪರಿಶೀಲನೆ ಸಂಬಂಧ ಬುಧವಾರ ಭೇಟಿ ನೀಡಿ ಮಾತನಾಡಿದ ಅವರು ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಗ್ರಾಮೀಣ ಪ್ರದೇಶ ಮಕ್ಕಳಿಗೆ ಹಾಗೂ ಹೆಣ್ಣು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಸಂಬಂಧ ಖಾಸಗಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಸರ್ಕಾರದೊಂದಿಗೆ ಶಿಕ್ಷಣ ನೀಡಲು ಕೈಜೋಡಿಸಿದ ಮಹನೀಯರ ಸೇವೆಯನ್ನು ಸದಾ ಸ್ಮರಿಸಬೇಕಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳು ಕೇವಲ ಸಾಕ್ಷರತೆ ನೀಡುವುದಲ್ಲದೆ ಸಾಮಾಜಿಕ ಬದಲಾವಣೆ ಆರ್ಥಿಕ ಸಬಲೀಕರಣ ಮತ್ತು ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿರುವುದು ನಮ್ಮ ನಾಗರಿಕ ಸಮಾಜದ ಹೆಮ್ಮೆ ಎಂದರು.
ಶಿಕ್ಷಣ ಸಂಸ್ಥೆಗಳು ಸಾಂಪ್ರದಾಯಿಕ ಶಿಕ್ಷಣಕ್ಕೆ ಸೀಮಿತವಾಗಿರದೆ ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳಿಗೆ ಸ್ಥಳೀಯ ಉದ್ಯೋಗ ಗಳಿಸಲು ಪೂರಕ ಕೌಶಲ ತರಬೇತಿಯನ್ನು ನೀಡುವ ಮೂಲಕ ಗ್ರಾಮೀಣ ಪ್ರದೇಶದ ಯುವಕ, ಯುವತಿಯರು ಉತ್ತಮ ಉದ್ಯೋಗ ಅವಕಾಶ ಪಡೆದುಕೊಂಡು ಸ್ವಾವಲಂಬಿಗಳಾಗುವಂತೆ ತರಬೇತುಗೊಳಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆ ಕಾರ್ಯದರ್ಶಿ ಸಿ.ಅಪೂರ್ವ ಚಂದ್ರ, ಪ್ರಾಂಶುಪಾಲ ಯು. ಎಸ್.ಶಿವಕುಮಾರ್, ಉಸನ್ಯಾಸಕರಾದ ಜಿ. ಸುರೇಂದ್ರ, ಜಿ.ಎಸ್.ನಂದಿನಿ, ನಂದಿನಿ, ಸುಚಿತ್ರಾ, ರಕ್ಷಿತಾ, ಪ್ರಥಮ ದರ್ಜೆ ಸಹಾಯಕ ಸಿದ್ದರಾಜು, ನಾಗರಾಜು, ವರಲಕ್ಷ್ಮೀ ಇತರರು ಇದ್ದರು.