ಕಲಾವಿದರನ್ನು ಮುಖ್ಯವಾಹಿನಿಗೆ ತರುವುದೇ ಸಂಘದ ಉದ್ದೇಶ

 ಮದ್ದೂರು ನಗರದಲ್ಲಿ ಕಲಾವಿದರ ಸಂಘದ ವತಿಯಿಂದ ರಾಜ್ಯ ಸಾಮಾಜಿಕ ನಾಟಕ ನಿರ್ದೇಶಕ ಸಂಘದ ರಾಜ್ಯಾಧ್ಯಕ್ಷ ಎಚ್.ಮಲ್ಲಿಗೆರೆ ಬಿ.ರಾಮಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಕೆ.ಎಲ್.ರವಿ, ಸಿ.ಕೆ.ಅಪ್ಪಾಜಿಗೌಡ, ಪೂಜಾರಿ ಮಹೇಶ್, ಸಂತೋಷ್, ಮಾಸ್ಟರ್ ಪುಟ್ಟಸ್ವಾಮಿ ಇದ್ದರು.
ಮದ್ದೂರು ನಗರದಲ್ಲಿ ಕಲಾವಿದರ ಸಂಘದ ವತಿಯಿಂದ ರಾಜ್ಯ ಸಾಮಾಜಿಕ ನಾಟಕ ನಿರ್ದೇಶಕ ಸಂಘದ ರಾಜ್ಯಾಧ್ಯಕ್ಷ ಎಚ್.ಮಲ್ಲಿಗೆರೆ ಬಿ.ರಾಮಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಕೆ.ಎಲ್.ರವಿ, ಸಿ.ಕೆ.ಅಪ್ಪಾಜಿಗೌಡ, ಪೂಜಾರಿ ಮಹೇಶ್, ಸಂತೋಷ್, ಮಾಸ್ಟರ್ ಪುಟ್ಟಸ್ವಾಮಿ ಇದ್ದರು.
Published on

ರಾಜ್ಯ ಸಾಮಾಜಿಕ ನಾಟಕ ನಿರ್ದೇಶಕರ ಸಂಘದ ಅಧ್ಯಕ್ಷ ಎಚ್.ಮಲ್ಲಿಗೆರೆ ಬಿ.ರಾಮಕೃಷ್ಣ ಅಭಿಮತ

ಆರ್ಥಿಕವಾಗಿ ಹಿಂದುಳಿದ ಕಲಾವಿದರನ್ನು ಹಾಗೂ ನಿರ್ದೇಶಕರನ್ನು ಸಮಾಜದ ಮುಖ್ಯವಾಹಿನಿಗೆ ತರುವುದೇ ಸಂಘದ ಮುಖ್ಯ ಧ್ಯೇಯವಾಗಿದೆ ಎಂದು ರಾಜ್ಯ ಸಾಮಾಜಿಕ ನಾಟಕ ನಿರ್ದೇಶಕರ ಸಂಘದ ಅಧ್ಯಕ್ಷ ಎಚ್.ಮಲ್ಲಿಗೆರೆ ಬಿ.ರಾಮಕೃಷ್ಣ ತಿಳಿಸಿದರು.

ನಗರದಲ್ಲಿ ಶುಕ್ರವಾರ ಕಲಾವಿದರಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಾಕಷ್ಟು ಕಲಾವಿದರು, ನಿರ್ದೇಶಕರು ಆರ್ಥಿಕ ಸಂಕಷ್ಟದಲ್ಲಿದ್ದು, ಇಂತವರಿಗೆ ಸಂಕಷ್ಟದ ಸಮಯದಲ್ಲಿ ನೆರವಾಗುವುದು ಸಂಘದ ಮುಖ್ಯ ಗುರಿಯಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ರಂಗ ಕಲೆ ನಶಿಸುವ ಸ್ಥಿತಿಗೆ ಬಂದಿರುವುದರಿಂದ ಕಲಾವಿದರು ಹಾಗೂ ನಿರ್ದೇಶಕರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಯುವ ಜನತೆ ಮತ್ತು ಸಾರ್ವಜನಿಕರು ನಾಟಕಗಳನ್ನು ನೋಡುವ ಮೂಲಕ ಕಲಾವಿದರನ್ನು ಹಾಗೂ ನಿರ್ದೇಶಕರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕೆಂದರು.
ರಂಗಕಲೆಯು ಪ್ರೇಕ್ಷಕರ ಸಮ್ಮುಖದಲ್ಲಿ ನೇರ ಪ್ರದರ್ಶನದ ಮೂಲಕ ಕಥೆಗಳು, ಭಾವನೆಗಳು ಮತ್ತು ವಿಚಾರಗಳನ್ನು ಅಭಿವ್ಯಕ್ತಿಗೊಳಿಸುವ ಒಂದು ಜೀವಂತ ಕಲಾ ಪ್ರಕಾರವಾಗಿದೆ. ಇದರಲ್ಲಿ ಅಭಿನಯ, ಸಂಗೀತ, ನೃತ್ಯ, ಸಂಭಾಷಣೆ, ವೇಷಭೂಷಣ ಮತ್ತು ರಂಗಪರಿಕರಗಳು ಒಟ್ಟಾಗಿ ಸೇರಿರುತ್ತವೆ ಇಂತಹ ಕಲೆಯನ್ನು ಜೀವಂತವಾಗಿರಿಸುವುದಕ್ಕೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯವೆಂದರು.
ಕಲಾವಿದ ಕೆ.ಎಲ್.ರವಿ ಕಬ್ಬಾರೆ ಮಾತನಾಡಿ, ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳಲ್ಲಿ ಅದ್ಭುತವಾಗಿ ಅಭಿನಯಿಸುವ ಕಲಾವಿದರಿದ್ದು, ಇಂತಹ ಕಲಾವಿದದರನ್ನು ಪ್ರೋತ್ಸಾಹಿಸುವ ಕೆಲಸವನ್ನು ಸರ್ಕಾರ ಹಾಗೂ ಸಂಘ, ಸಂಸ್ಥೆಗಳು ಮಾಡಬೇಕಿದೆ ಎಂದು ಮನವಿ ಮಾಡಿದರು.
ಕಲಾವಿದರಾದ ಕೆ.ಎಲ್.ರವಿ ಕಬ್ಬಾರೆ, ಸಿ.ಕೆ.ಅಪ್ಪಾಜಿಗೌಡ, ಪೂಜಾರಿ ಮಹೇಶ್, ನಾಗೇಶ್, ಮಧು, ಎಂ.ಎಸ್.ಕುಮಾರಸ್ವಾಮಿ, ಪುಟ್ಟಸ್ವಾಮಿ, ಸಂತೋಷ್, ಪೂಜಾರಿ ಮಹೇಶ್, ಚನ್ನಯ್ಯ, ಮಾಸ್ಟರ್ ಪುಟ್ಟಸ್ವಾಮಿ, ಕೆ.ಪಿ.ಲಿಂಗಯ್ಯ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net