ಗಣಪತಿ ವಿಸರ್ಜನೆ ವೇಳೆ ಅರ್ಧದಷ್ಟು ಮುಳುಗಿದ ತೆಪ್ಪ

ಕೊಳದಲ್ಲಿ ತಪ್ಪಿದ ಭಾರೀ ಅನಾಹುತ
UTSAVA
ನಾಗಮಂಗಲದ ಹಂಪೆಅರಸನ ಕೊಳದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಮುಳುಗುತ್ತಿದ್ದ ತೆಪ್ಪ.GANESH
Published on: 

ನಾಗಮಂಗಲ : ಪಟ್ಟಣದಲ್ಲಿ ಶ್ರೀ ಕೋಟೆ ವಿದ್ಯಾಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಹಂಪೆ ಅರಸನಕೊಳದಲ್ಲಿ ಶುಕ್ರವಾರ ತಡರಾತ್ರಿ ನಡೆದ ತೆಪ್ಪೋತ್ಸವದ ವೇಳೆ ತೆಪ್ಪ ಒಂದು ಭಾಗ ಮುಳುಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಈ ವೇಳೆ ಕೆಲವರು ನೀರಿನೊಳಗೆ ಧುಮುಕಿ ದ್ದಾರೆ. ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ.

ಇತಿಹಾಸ ಪ್ರಸಿದ್ಧ ಹಂಪೆ ಅರಸನಕೊಳದಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲು ತೆಪ್ಪದ ವ್ಯವಸ್ಥೆ ಮಾಡಲಾಗಿದೆ. ತೆಪ್ಪವನ್ನು ವಿಶೇಷವಾಗಿ ಶೃಂಗಾರಗೊಳಿಸಿ ಅದರಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಕೊಳದಲ್ಲಿ ಮೂರು ಸುತ್ತು ಸುತ್ತಿಸಿ, ಗಣೇಶ ವಿಸರ್ಜನೆ ಮಾಡುವ ಪದ್ದತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಈ ಬಾರಿ ಹೆಚ್ಚಿನ ಯುವಕರು ತೆಪ್ಪದಲ್ಲಿ ಕುಳಿತ ಪರಿಣಾಮ ತೆಪ್ಪ ಮುಳುಗುವ ಸ್ಥಿತಿ ತಲುಪಿ, ಅರ್ಧ ಭಾಗಕ್ಕೂ ಹೆಚ್ಚು ಮುಳುಗಿತು. ಆಗ ಒಂದಿಷ್ಟು ಯುವಕರು ನೀರಿಗೆ ಹಾರಿದರು, ಇದರಿಂದಾಗಿ ಮುಳುಗುವ ಹಂತ ತಲುಪಿದ ತೆಪ್ಪ ತೇಲುವ ಸ್ಥಿತಿ ತಲುಪಿತು. ಇದರಿಂದಾಗಿ ದೊಡ್ಡ ಘಟನೆಯಿಂದ ಪಾರಾದಂತಾಯಿತು.