ಇಂಗ್ಲಿಷ್ ಕಗ್ಗಂಟು ಬಿಡಿಸಿದ ಶಿಕ್ಷಕ ಎಸ್.ಸಿದ್ದೇಗೌಡ

ಕಿಕ್ಕೇರಿಯ ಕೆಪಿಎಸ್ ಶಾಲೆಯಲ್ಲಿ ಗುರುವಾರ ಅಗಲಿದ ನಿವೃತ್ತ ಇಂಗ್ಲಿಷ್ ಶಿಕ್ಷಕ ಎಸ್.ಸಿದ್ದೇಗೌಡರ ಸಂಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಂ.ಆರ್. ಸಹದೇವ್, ಕಿಕ್ಕೇರಿ ಕೃಷ್ಣಮೂರ್ತಿ, ಕೃಷ್ಣೇಗೌಡ, ಎಸ್.ಎಂ.ಬಸವರಾಜು ಇತರರಿದ್ದರು.
ಕಿಕ್ಕೇರಿಯ ಕೆಪಿಎಸ್ ಶಾಲೆಯಲ್ಲಿ ಗುರುವಾರ ಅಗಲಿದ ನಿವೃತ್ತ ಇಂಗ್ಲಿಷ್ ಶಿಕ್ಷಕ ಎಸ್.ಸಿದ್ದೇಗೌಡರ ಸಂಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಂ.ಆರ್. ಸಹದೇವ್, ಕಿಕ್ಕೇರಿ ಕೃಷ್ಣಮೂರ್ತಿ, ಕೃಷ್ಣೇಗೌಡ, ಎಸ್.ಎಂ.ಬಸವರಾಜು ಇತರರಿದ್ದರು.
Published on

ಕಿಕ್ಕೇರಿ:

ಹಳ್ಳಿಗಾಡಿನ ಮಕ್ಕಳಲ್ಲಿ ಇಂಗ್ಲಿಷ್ ಸುಲಲಿತವಾಗಿ ಕಲಿಯುವಂತೆ ಮಾಡಿದ ಶಿಕ್ಷಕರು ಎಸ್.ಸಿದ್ದೇಗೌಡ ಮಾಸ್ಟರ್ ಎಂದು ಉದ್ಯಮಿ, ಕನ್ನಡಪರ ಹೋರಾಟಗಾರ ಮಹೇಂದ್ರಗೌಡ ತಿಳಿಸಿದರು.

ಇಲ್ಲಿನ ಕೆಪಿಎಸ್ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಎಸ್.ಸಿದ್ದೇಗೌಡ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಎಸ್‌ಎಸ್‌ಜಿ ಎಂದೇ ಪರಿಚಿತರಾಗಿದ್ದರು. ಅಂದಿನ ಗುರುವಿನ ಭಯದಲ್ಲಿ ಭಕ್ತಿ, ಭವಿಷ್ಯದ ಗುರಿ ಇತ್ತು. ಸರಳ ರೀತಿಯಲ್ಲಿ ಇಂಗ್ಲಿಷ್ ಕಲಿಸಿಕೊಟ್ಟ ಗುರುಗಳು ಇಂದು ಇಲ್ಲವಾಗಿರುವುದು ಶಿಷ್ಯಕೋಟಿಗೆ ಅಪಾರ ನಷ್ಟ ಎಂದು ಭಾವುಕರಾದರು.
ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ಇಲ್ಲಿನ ಕೆಪಿಎಸ್ ಶಾಲೆ ಅಂದು ಸರ್ಕಾರಿ ಪ್ರೌಢಶಾಲೆಯಾಗಿತ್ತು. 40ವರ್ಷಗಳ ಹಿಂದೆ ನಾನು ಇದೇ ಶಾಲೆಯಲ್ಲಿ ಓದಿದೆ. ತನ್ನ ನೆಚ್ಚಿನ ಗುರು ಎಸ್‌ಎಸ್‌ಜಿ ನಡೆದಾಡುವ ಇಂಗ್ಲಿಷ್ ನಿಘಂಟುವಾಗಿದ್ದರು. ವೃತ್ತಿಯಲ್ಲಿ ನಿವೃತ್ತರಾದರೂ ತಮ್ಮ 95ನೇ ವಯಸ್ಸಿನಲ್ಲಿಯೂ ಇಂಗ್ಲಿಷ್ ಗ್ರಾಮರ್ ಉಚಿತವಾಗಿ ಮಕ್ಕಳಿಗೆ ಹೇಳಿಕೊಡುತ್ತಿದ್ದರು. ಇಂತಹ ಅಪರೂಪದ ಮೇಷ್ಟ್ರು ಇಂದಿಲ್ಲವಾಗಿದ್ದಾರೆ ಎಂದು ಕಂಬನಿ ಮಿಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ಮಾತನಾಡಿದರು.
ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ, ಗುರುವಿನ ಗುಲಾಮನಾಗುವ ತನಕ ದೊರೆಯಣ್ಣ ಮುಕುತಿ..., ತನುವು ನಿನ್ನದು ಮನವು ನಿನ್ನದು..., ಜಯದೇವ ಗುರುದೇವ ನಮಿಪೆ ನಿಮಗೆ ಎಂದು ಗೀತೆಗಳ ಮೂಲಕ ಗುರು ನಮನ ಸಮರ್ಪಿಸಿದರು.
ಅಗಲಿದ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಗೀತೆಗಳ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು ಸ್ಮರಿಸಿದರು.
ಪ್ರಾಂಶುಪಾಲ ಎಂ.ಆರ್. ಸಹದೇವ್, ಎನ್‌ಸಿಸಿ ಯೋಜನಾಧಿಕಾರಿ ಎಸ್.ಎಂ.ಬಸವರಾಜು, ಕುಮಾರಸ್ವಾಮಿ, ಶಿಕ್ಷಕರಾದ ಬಿ.ಎನ್.ಪರಶಿವಮೂರ್ತಿ, ದೀಪಕ್, ಗಿರೀಶ್, ವೆಂಕಟರಮಣ ಹೆಗಡೆ, ಕೃಷ್ಣಪ್ಪ, ರಿಜ್ವಿ, ನಂದಿನಿ, ಚಂದ್ರೇಗೌಡ, ಕೆ.ವಿ. ನಾಗರತ್ನಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net