ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ 2026-27ನೇ ಸಾಲಿನ ಆಯ-ವ್ಯಯ ಕುರಿತ ಪೂರ್ವಭಾವಿ ಸಭೆಯಲ್ಲಿ ಪುರಸಭಾ ಮಾಜಿ ಅಧ್ಯಕ್ಷ ದೊಡ್ಡಯ್ಯ, ಗಂಗರಾಜು ಅರಸ್, ಮಾಜಿ ಉಪಾಧ್ಯಕ್ಷ ನಂದಕುಮಾರ್, ನಂಜುಂಡಸ್ವಾಮಿ ಸಾರ್ವಜನಿಕ ರುದ್ರಭೂಮಿಯಲ್ಲಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಪಟ್ಟಣದ ಬಹುತೇಕ ವರ್ಗದ ಜನರು ಶವಸಂಸ್ಕಾರಕ್ಕೆ ಮೂಲ ಸೌಲಭ್ಯಗಳಿಲ್ಲ. ಇಲ್ಲಿನ ಸ್ಮಶಾನದ ಅಭಿವೃದ್ಧಿಗೆ ಪ್ರತಿ ವರ್ಷದ ಬಜೆಟ್‌ನಲ್ಲಿ ಹಣ ಮೀಸಲಿಡಲಾಗುತ್ತಿದೆ. ಆದರೂ ಇಂದಿನವರೆಗೂ ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂದು ಆಕ್ಷೇಪಿಸಿದರು.