ಮಹಿಳೆಯರಿಗೆ ಟೈಲರಿಂಗ್ ಕಸುಬು ವರದಾನ

ಕಿಕ್ಕೇರಿ ಗ್ರಾಪಂ. ವತಿಯಿಂದ ಎಸ್‌ಸಿ, ಎಸ್‌ಟಿ ಅರ್ಹ ಫಲಾನುಭವಿಗಳಿಗೆ ಸೋಮವಾರ ಹೊಲಿಗೆ ಯಂತ್ರ ವಿತರಿಸಲಾಯಿತು. ಕೆ.ಬಿ. ಚಂದ್ರಶೇಖರ್, ರೇಣುಕಮ್ಮ, ಸಿ. ಚಲುವರಾಜು, ಸದಸ್ಯರು ಹಾಜರಿದ್ದರು.
ಕಿಕ್ಕೇರಿ ಗ್ರಾಪಂ. ವತಿಯಿಂದ ಎಸ್‌ಸಿ, ಎಸ್‌ಟಿ ಅರ್ಹ ಫಲಾನುಭವಿಗಳಿಗೆ ಸೋಮವಾರ ಹೊಲಿಗೆ ಯಂತ್ರ ವಿತರಿಸಲಾಯಿತು. ಕೆ.ಬಿ. ಚಂದ್ರಶೇಖರ್, ರೇಣುಕಮ್ಮ, ಸಿ. ಚಲುವರಾಜು, ಸದಸ್ಯರು ಹಾಜರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಪಂ ಸ್ಥಳೀಯ ಸಂಪನ್ಮೂಲ ಅನುದಾನ
ಕಿಕ್ಕೇರಿ : ಮಹಿಳೆಯರು ಸ್ವಾವಲಂಬನೆ ಸಾಧಿಸಲು ಟೈಲರಿಂಗ್ ಕಸುಬು ವರದಾನವಾಗಿದೆ ಎಂದು ಗ್ರಾಪಂ. ಪಿಡಿಒ ಸಿ. ಚಲುವರಾಜು ತಿಳಿಸಿದರು.
ಇಲ್ಲಿನ ಗ್ರಾಪಂ ಸ್ಥಳೀಯ ಸಂಪನ್ಮೂಲ ಅನುದಾನದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಸೋಮವಾರ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿದರು. ಹೊಲಿಗೆ ಯಂತ್ರಗಳನ್ನು ಸದುಪಯೋಗಪಡಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಸಮಸ್ಯೆ ಇದೆ ಎಂದು ಮಾರಾಟ ಮಾಡಬಾರದು. ಇದು ತಮ್ಮ ಕೌಟುಂಬಿಕ ಬದುಕು, ಜೀವನ ನಿರ್ವಹಣೆಗೆ ಆಸರೆಯಾಗಿದೆ ಎಂಬುದನ್ನು ಮರೆಯಬಾರದು ಎಂದರು. 
ಗ್ರಾಪಂ ಅಧ್ಯಕ್ಷ ಕೆ.ಬಿ. ಚಂದ್ರಶೇಖರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಜೀವನ ನಿರ್ವಹಣೆ ಕಷ್ಟವಿದೆ. ಕೆಳಸ್ತರದ ಸಮುದಾಯವಾದ ಎಸ್‌ಸಿ, ಎಸ್‌ಟಿ ಸಮುದಾಯವರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಈ ಯೋಜನೆ ರೂಪಿಸಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಭಿಗಳಾಗಲು ಪ್ರಯತ್ನಿಸಿ ಎಂದು ಮನವಿ ಮಾಡಿದರು.
ಅರ್ಹ 16ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಉಪಾಧ್ಯಕ್ಷೆ ರೇಣುಕಮ್ಮ, ಸದಸ್ಯರಾದ ಪುಟ್ಟೇಗೌಡ, ಕೆ.ಆರ್. ಕೃಷ್ಣ, ತೇಜಸ್ವಿಕುಮಾರ್, ಕೆ.ಆರ್. ರಾಜೇಶ್, ಯೋಗೇಶ್, ಕೆ.ಪಿ. ಪುಟ್ಟರಾಜು, ಸುನೀತಾ, ಜ್ಯೋತಿ, ಸರಸ್ವತಿ, ಜಯಲಕ್ಷ್ಮೀ ಸದಸ್ಯರು, ಕಾರ್ಯದರ್ಶಿ ಪಾಪೇಗೌಡ, ಲೆಕ್ಕ ಸಹಾಯಕ ವಾಸು, ದಯಾನಂದ್, ಅರುಣಿ, ಗೋವಿಂದರಾಜು ಮತ್ತಿತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net