ಗಮನ ಸೆಳೆದ ಕಬ್ಬು ಗಣಪ

ಕೆ.ಎಂ.ದೊಡ್ಡಿಯ ಚಾಂಶುಗರ್ಸ್‌ ಕಾಖಾನೆಯ ಶ್ರೀ ಚಾಮುಂಡೇಶ್ವರಿ ದೇವಾಲಯದ ಪ್ರಾಂಗಣದಲ್ಲಿ ಕಬ್ಬಿನ ಗಣಪ ಮೂಡಿರುವುದು.
ಕೆ.ಎಂ.ದೊಡ್ಡಿಯ ಚಾಂಶುಗರ್ಸ್‌ ಕಾಖಾನೆಯ ಶ್ರೀ ಚಾಮುಂಡೇಶ್ವರಿ ದೇವಾಲಯದ ಪ್ರಾಂಗಣದಲ್ಲಿ ಕಬ್ಬಿನ ಗಣಪ ಮೂಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಚಾಂಶುಗರ್ಸ್‌ ಕಾರ್ಖಾನೆಯಿಂದ ಮಾದರಿ ಕಾರ್ಯ
  • ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದ ವಿಶಿಷ್ಟ ವಿನಾಯಕ
ಕೆ.ಎಂ.ದೊಡ್ಡಿ: ಗೌರಿ - ಗಣೇಶ ಹಬ್ಬದ ಅಂಗವಾಗಿ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ವತಿಯಿಂದ ಶ್ರೀ ಚಾಮುಂಡೇಶ್ವರಿ ದೇವಾಲಯದ ಪ್ರಾಂಗಣದಲ್ಲಿ ಒಂದು ಟನ್ ಕಬ್ಬು ಬಳಸಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ಸಾರ್ವಜನಿಕರ ಗಮನ ಸೆಳೆದಿದೆ.
ಚಾಮುಂಡೇಶ್ವರಿ ದೇವಾಲಯ ಸ್ಥಾಪನೆ ಆರಂಭದಿಂದಲೂ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪಿಸಲಾಗುತ್ತಿತ್ತು. ರೈತರಿಗೆ ವಿಶೇಷ ಗೌರವ ನೀಡುವ ಸಲುವಾಗಿ ಕಾರ್ಖಾನೆ ವತಿಯಿಂದ ಕಬ್ಬಿನಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ಪರಿಸರ ಸ್ನೇಹಿಯಾಗಿರುವುದರಿಂದ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದರಿಂದ ಕಾರ್ಖಾನೆ ಆಡಳಿತ ಮಂಡಳಿಯ ಬಗ್ಗೆ ಪ್ರಶಂಸೆಯೂ ವ್ಯಕ್ತವಾಗಿದೆ.
10 ಅಡಿ ಎತ್ತರ, 5 ಅಗಲ ಇರುವ ವಿಶೇಷ ವಿನಾಯಕನ ನಿರ್ಮಾಣಕ್ಕೆ ಮುರುಗೇಶ್ ಎಂಬುವವರು ಪ್ರೇಂ ತಯಾರು ಮಾಡಿದ್ದರು. ಆ ಪ್ರೇಂಗೆ ಒಂದು ಟನ್ ಕಬ್ಬು ಬಳಸಿ ಓಂಕಾರಮೂರ್ತಿ, ಮಂಜುನಾಥ್ ಅವರು ವಕ್ರತುಂಡನ ಮೂರ್ತಿ ಸಿದ್ಧಪಡಿಸಿದ್ದಾರೆ. ರೈತರು ಸೇರಿದಂತೆ ಹಲವು ಜನತೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net