ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಚುನಾವಣೆ

ಚುನಾವಣೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು
ಚುನಾವಣೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು
Published on
ಹಲಗೂರು: ಮಾರಗೌಡನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಶಾಲಾ ಶಾಲೆ ಚುನಾವಣೆಯಲ್ಲಿ ಬಿ.ಎಸ್.ಲಿಖಿತ್ ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಎಂ.ಎಸ್.ಲಿಖಿಯಾ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶಕುಂತಲಾ ಘೋಷಣೆ ಮಾಡಿದರು.
ಶಾಲೆಯ ಕನ್ನಡ ಹಾಗೂ ಆಂಗ್ಲ ಮಾಧ್ಯಮದ 50 ವಿದ್ಯಾರ್ಥಿನಿಯರು ಚುನಾವಣೆಯಲ್ಲಿ ಸ್ಪರ್ಧಿಸಿದ್ದು 24 ವಿದ್ಯಾರ್ಥಿನಿಯರು ವಿಜೇತರಾಗಿದ್ದಾರೆ. ಇದರೊಂದಿಗೆ ನಾಲ್ವರನ್ನು ನಾಮನಿರ್ದೇಶನ ಮಾಡಿದ್ದು ಒಟ್ಟು 28 ಜನರು ಮಂತ್ರಿಮಂಡಲದಲ್ಲಿದ್ದಾರೆ. ಎಲ್ಲರಿಗೂ ಖಾತೆಗಳನ್ನು ಹಂಚಿದ ಚುನಾವಣಾಧಿಕಾರಿ ಎಸ್.ಶಕುಂತಲಾ ಎಲ್ಲರಿಗೂ ದೇವರ ಹೆಸರಿನಲ್ಲಿ ಪ್ರಮಾಣವಚನ ಬೋಧಿಸಿದರು.
ಗ್ರಾಮ ಪಂಚಾಯಿತಿಯಿಂದ ಲೋಕಸಭೆ ಚುನಾವಣೆವರೆಗೂ ವಿವಿಧ ಆಯೋಗಗಳು ಹೇಗೆ ಚುನಾವಣೆ ನಡೆಸುತ್ತದೆ ಎಂಬ ಮಾಹಿತಿಯನ್ನು ಶಾಲಾ ಸಂಸತ್ ಚುನಾವಣೆ ಮೂಲಕ ಅರಿವು ಮೂಡಿಸಲು ಈ ಚುನಾವಣೆ ನಡೆಸಲಾಗಿದೆ ಎಂದು ಎಸ್.ಶಕುಂತಲಾ ಹೇಳಿದರು.
ಜಿ.ಸಿ.ಅರ್ಚನಾ, ಕೆ.ಸತೀಶ್ ಕುಮಾರ್, ಎನ್.ಡಿ.ಹನುಮಯ್ಯ, ಎಸ್.ಶಕುಂತಲಾ, ಎನ್.ಆರ್.ದಿವ್ಯಾ ಇದ್ದರು.
2ಡಿ1 ಚಿತ್ರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net