ತಮಿಳುನಾಡಿಗೆ ಕಾವೇರಿ ಹರಿವು ನಿಲ್ಲಿಸಿ

ಕೆ.ಆರ್.ಸಾಗರ ಅಣೆಕಟ್ಟೆಯಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ ಒತ್ತಾಯಿಸಿ ಕೆ.ಆರ್.ಸಾಗರದ ಕಾವೇರಿ ನೀರವಾರಿ ನಿಗಮದ ಕಾರ್ಯಪಾಲಕ ಅಭಿಯಂತ ಕಚೇರಿ ಮುಂದೆ ಭೂಮಿ ತಾಯಿ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು. ಕೆ.ಎಸ್.ನಂಜುಂಡೇಗೌಡ, ಬಿ.ಸಿ.ಕೃಷ್ಣೇಗೌಡ, ಮಹದೇವು ಇತರರು ಇದ್ದರು.
ಕೆ.ಆರ್.ಸಾಗರ ಅಣೆಕಟ್ಟೆಯಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ ಒತ್ತಾಯಿಸಿ ಕೆ.ಆರ್.ಸಾಗರದ ಕಾವೇರಿ ನೀರವಾರಿ ನಿಗಮದ ಕಾರ್ಯಪಾಲಕ ಅಭಿಯಂತ ಕಚೇರಿ ಮುಂದೆ ಭೂಮಿ ತಾಯಿ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು. ಕೆ.ಎಸ್.ನಂಜುಂಡೇಗೌಡ, ಬಿ.ಸಿ.ಕೃಷ್ಣೇಗೌಡ, ಮಹದೇವು ಇತರರು ಇದ್ದರು.
Published on
ಕೆ.ಆರ್.ಸಾಗರ: ಕೆ.ಆರ್.ಸಾಗರ ಅಣೆಕಟ್ಟೆಯಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿ ಬುಧವಾರ ಕೆ.ಆರ್.ಸಾಗರದ ಕಾವೇರಿ ನೀರವಾರಿ ನಿಗಮದ ಕಾರ್ಯಪಾಲಕ ಅಭಿಯಂತ ಕಚೇರಿ ಮುಂಭಾಗದಲ್ಲಿ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಭೂಮಿ ತಾಯಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮೈಸೂರು ಮಹಾರಾಜರು ಮಂಡ್ಯ-ಮೈಸೂರು ಜಿಲ್ಲೆಯ ರೈತರ ಹಿತಕ್ಕಾಗಿ ಅಣೆಕಟ್ಟೆ ಕಟ್ಟಿಸಿದ್ದು, ಅದರಿಂದಲೇ ಜೀವನ ನಡೆಸುತ್ತಿದ್ದೇವೆ. ಆದರೆ, ರೈತರ ಸಮಸ್ಯೆಗಳನ್ನು ಕಾವೇರಿ ನಿರ್ವಹಣಾ ಮಂಡಳಿ ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್ ಮುಂದೆ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಪದೇ ಪದೆ ತಮಿಳುನಾಡಿಗೆ ನೀರು ಬಿಡಬೇಕಾಗಿದ್ದು, ನಮ್ಮ ಜನಪ್ರತಿನಿಧಿಗಳುರೈತರ ಹಿತ ಕಾಪಡಲು ವಿಫಲರಾಗಿದ್ದಾರೆ ಎಂದು ದೂರಿದರು.
ಕಾವೇರಿ ವಿಚಾರವಾಗಿ ಮುಖ್ಯಮಂತ್ರಿ ನಿರ್ಲಕ್ಷೃ ತೋರಿದ್ದು, ಕೇವಲ ರಾಜಕೀಯಕ್ಕೆ ಕಾವೇರಿ ಬಳಸಿಕೊಳ್ಳುತ್ತಿದ್ದಾರೆ. ಜತೆಗೆ ಮಂಡ್ಯ ಜಿಲ್ಲೆಯವರೇ ಜಲಸಂಪನ್ಮೂಲ ಸಚಿವರಾಗಿದ್ದರೂ ಬೆಳೆಗಳಿಗೆ ನೀರು ಹರಿಸಲು ವಿಫಲರಾಗಿದ್ದಾರೆ. ರೈತರ ಬದುಕಿಗೆ ಬೆಂಕಿ ಇಡುವ ಸರ್ಕಾರವಾಗಿದೆ. ಪದೇ ಪದೆ ತಮಿಳುನಾಡಿಗೆ ಕೆ.ಆರ್.ಸಾಗರ ಅಣೆಕಟ್ಟೆಯಿಂದ ಬಿಡುತ್ತಿರುವುದನ್ನು ನಿಲ್ಲಿಸಬೇಕು, ರೈತರನ್ನು ಕಾಪಾಡಬೇಕು. ಕಾವೇರಿ ಪ್ರಾಂತ್ಯದ ರೈತರ ಹಿತಕಾಪಾಡುವಲ್ಲಿ ವಿಫಲರಾಗಿ, ರೈತರಿಗೆ ಅನ್ಯಾಯ ಮಾಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಕೂಡಲೇ ರಾಜೀನಾಮೆ ನೀಡಬೇಕು ಎಂದು ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಆಗ್ರಹಿಸಿದರು.
ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ ಮಾತನಾಡಿ, ಈ ಹಿಂದೆ 110 ಅಡಿ ಇದ್ದಾಗ ಭತ್ತ ಹಾಗೂ ಕಬ್ಬಿಗೆ ನೀರು ಹರಿಸಲಾಗಿತ್ತು. ಆದೀ ಈಗಿನ ಸರ್ಕಾರ ತಮಿಳುನಾಡಿನ ಕೈಗೊಂಬೆಯಂತೆ ಇದ್ದು, ರೈತರಿಗೆ ಬೆಳೆ ಬೆಳೆಯದಂತೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ತಕ್ಷಣ ಭತ್ತದ ಬೆಳೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೆಆರ್‌ಎಸ್ ಮಹದೇವು, ದರ್ಶನ್, ಎಂ.ವಿ.ಕೃಷ್ಣ, ರಾಮಚಂದ್ರು, ಸುರೇಶ್, ವಸಂತಕುಮಾರ್, ಚಾಮರಾಜು, ರಾಮಕೃಷ್ಣ, ಕಿರಂಗೂರು ಮಹದೇವು, ಪುಟ್ಟಪ್ಪ, ವಿಷಕಂಠ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net