ಪಾರಂಪರಿಕ ತಾಣಗಳ ಸಂರಕ್ಷಣೆಗೆ ಮುಂದಾಗಿ

 ಹಲಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಎನ್.ಎಸ್.ಶಂಕರೇಗೌಡ, ಶ್ರೀನಿವಾಸ್, ಅರುಣ್ ಕುಮಾರ್, ಲಕ್ಷ್ಮೀ, ವಿನುತಾ, ಶಿವಶಂಕರ್ ಇತರರಿದ್ದರು.
ಹಲಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಎನ್.ಎಸ್.ಶಂಕರೇಗೌಡ, ಶ್ರೀನಿವಾಸ್, ಅರುಣ್ ಕುಮಾರ್, ಲಕ್ಷ್ಮೀ, ವಿನುತಾ, ಶಿವಶಂಕರ್ ಇತರರಿದ್ದರು.
Published on
ಹಲಗೂರು: ಪಾರಂಪರಿಕ ತಾಣಗಳು, ಸ್ಥಳೀಯ ಸಂಸ್ಕೃತಿ ಸಂರಕ್ಷಿಸುವಲ್ಲಿ ಯುವಜನರು ಹಾಗೂ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಪ್ರಾಂಶುಪಾಲ ಎನ್.ಎಸ್.ಶಂಕರೇಗೌಡ ಸಲಹೆ ನೀಡಿದರು.
ಹಲಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಇತಿಹಾಸ ವಿಭಾಗ, ಐಕ್ಯೂಎಸಿ, ಅಜೀಂ ಪ್ರೇಮ್ ಜೀ ಫೌಂಡೇಷನ್ ವತಿಯಿಂದ ಬುಧವಾರ ಆಯೋಜಿಸಿದ್ದ ‘ಮಂಡ್ಯ ಜಿಲ್ಲೆಯ ಪರಂಪರೆ ಮತ್ತು ಹಲಗೂರು ಐತಿಹಾಸಿಕ ಮಹತ್ವ’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು. ಭೂತ, ವರ್ತಮಾನ ತಿಳಿದುಕೊಂಡವರು ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಇತಿಹಾಸ ಸಹಕಾರಿಯಾಗಲಿದೆ. ಇತಿಹಾಸವನ್ನು ಶೋಧಿಸುತ್ತಾ ಹೋದಂತೆ ರೋಚಕ ಕ್ಷಣಗಳು ನಮ್ಮನ್ನು ಆವರಿಸಿಕೊಳ್ಳಲಿದೆ. ವಿದ್ಯಾರ್ಥಿಗಳು ಇತಿಹಾಸದ ಬೆನ್ನು ಹತ್ತಿದರೆ ಮಾಹಿತಿ ಕಣಜವೇ ಸಿಗಲಿದೆ ಎಂದರು.
ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ನಾವು ವಾಸಿಸುವ ನೆಲದ ಹಿನ್ನೆಲೆ ಮತ್ತು ಮಹತ್ವ ಅರಿಯಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ. ಮನುಷ್ಯನ ಪ್ರತಿ ಹಂತದಲ್ಲಿ ಇತಿಹಾಸ ಮುಖ್ಯ ವಿಷಯವಾಗಿದೆ ಎಂದರು.
ಮಂಡ್ಯ ಜಿಲ್ಲೆಯ ಪ್ರಾಚೀನ ಶಾಸನಗಳು, ಕೋಟೆಗಳು, ಪ್ರಸಿದ್ಧ ಅಣೆಕಟ್ಟು, ವಿದ್ಯುತ್ ಉತ್ಪಾದನಾ ಘಟಕ, ವಿವಿಧ ದೇವಾಲಯಗಳ ನಿರ್ಮಾಣ ಮತ್ತು ಮಹತ್ವ, ಜೈನ ಬಸದಿಗಳು, ಸ್ಮಾರಕಗಳು, ಶಾಸನಗಳು ಕುರಿತ ಇತಿಹಾಸದಲ್ಲಿ ದಾಖಲಾಗಿರುವ ಮಾಹಿತಿ ಸಹಿತ ಚಿತ್ರಪಟಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಅಜೀಂ ಪ್ರೇಮ್ ಜೀ ಫೌಂಡೇಷನ್ ಸಂಪನ್ಮೂಲ ವ್ಯಕ್ತಿಗಳಾದ ಅರುಣ್ ಕುಮಾರ್, ಲಕ್ಷ್ಮೀ, ವಿನುತಾ, ಶಿವಶಂಕರ್, ಎಸ್‌ಬಿಐ ಸಿಬ್ಬಂದಿ ಅಂಜು ಪ್ರಸಾದ್, ಐಕ್ಯೂಎಸಿ ಸಂಚಾಲಕಿ ತಾರಾ ಜಯಲಕ್ಷ್ಮೀ, ಶ್ರೀನಿವಾಸ್, ಪ್ರೊ.ಸೀಮಾ ಕೌಸರ್, ಗುರುಪ್ರಸಾದ್, ಎಂ.ಎಚ್.ಮೂರ್ತಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net