ಹಂತ ಹಂತವಾಗಿ ರಾಸಾಯನಿಕ ಕೃಷಿಯಿಂದ ಮುಕ್ತರಾಗಿ

ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿಪೂಜೆ ನೆರವೇರಿಸಿದರು. ಕೆ.ಟಿ.ಗೋವಿಂದೇಗೌಡ, ಮಂಜುನಾಥ್,  ಕೆ.ಎಸ್.ದಯಾನಂದ, ರೂಪಾ ನಿತಿನ್, ಸುನಂದಾ ಮರಿದೇವೇಗೌಡ, ಸ್ವಾಮೀಗೌಡ ಇತರರಿದ್ದರು.
ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿಪೂಜೆ ನೆರವೇರಿಸಿದರು. ಕೆ.ಟಿ.ಗೋವಿಂದೇಗೌಡ, ಮಂಜುನಾಥ್, ಕೆ.ಎಸ್.ದಯಾನಂದ, ರೂಪಾ ನಿತಿನ್, ಸುನಂದಾ ಮರಿದೇವೇಗೌಡ, ಸ್ವಾಮೀಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಲಹೆ
ಪಾಂಡವಪುರ: ತಾಲೂಕಿನ ಚಂದ್ರೆ ಗ್ರಾಮದಲ್ಲಿ 1.50 ಕೋಟಿ ರೂ.ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೋಮವಾರ ಭೂಮಿಪೂಜೆ ಸಲ್ಲಿಸಿದರು.
ಪಾಂಡವಪುರ ತಾಲೂಕನ್ನು ರಾಜ್ಯ ಸರ್ಕಾರ ಸಾವಯವ ಕೃಷಿ ತಾಲೂಕಾಗಿ ಘೋಷಿಸಿದೆ. ಶೀಘ್ರ ಅಧಿಕಾರಿಗಳು ಜನರಿಗೆ ಅರಿವು ಮೂಡಿಸಲಿದ್ದಾರೆ. ಹಾಗಾಗಿ ಪ್ರತಿಯೊಬ್ಬರೂ ರಾಸಾಯನಿಕ ಬಳಸದೆ ತಿಪ್ಪೆಗೊಬ್ಬರ ಬಳಕೆ ಮಾಡುವ ಮೂಲಕ ಸಾವಯವ ಕೃಷಿ ಮಾಡಬೇಕು. ಹಂತ ಹಂತವಾಗಿ ರಾಸಾಯನಿಕ ಕೃಷಿಯಿಂದ ವಿಮುಕ್ತರಾಗಬೇಕು. ಜತೆಗೆ ರೈತರ ಬೆಳೆಯನ್ನು ಸೊಸೈಟಿ ಹಂತದಲ್ಲಿ ಖರೀದಿಸಲು ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಚಂದ್ರೆ ಗ್ರಾಮದಲ್ಲಿ 1.50 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅಲ್ಲದೆ ಈ ಪಂಚಾಯಿತಿಗೆ 8.50 ಕೋಟಿ ರೂ.ಗೂ ಹೆಚ್ಚು ಅನುದಾನ ನೀಡಲಾಗಿದೆ. ಇದರ ಜತೆಗೆ ಪಟ್ಟಣಗೇರಿ-ಶಂಕಹಳ್ಳಿ ರಸ್ತೆಗೂ ಶೀಘ್ರ ಭೂಮಿಪೂಜೆ ಮಾಡಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ನಡುಯುವಾಗ ಎದುರಾಗುವ ಸಣ್ಣಪುಟ್ಟ ಸಮಸ್ಯೆಗಳನ್ನು ಗ್ರಾಮಸ್ಥರೇ ಬಗೆಹರಿಸಿಕೊಂಡು ಅಭಿವೃದ್ಧಿ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ಮುಖಂಡ ಕೆ.ಟಿ.ಗೋವಿಂದೇಗೌಡ ಮಾತನಾಡಿ, ನಾಗರಿಕ ಸಮಾಜದಲ್ಲಿ ವಾಸಿಸುತ್ತಿರುವ ನಮಗೆ ಸೌಕರ್ಯಗಳನ್ನು ಒದಗಿಸಿ ಕೊಡಬೇಕು. ಕಾಮಗಾರಿ ನಡೆಸುವ ಗುತ್ತಿಗೆದಾರು ಗುಣಮಟ್ಟದ ಕಾಮಗಾರಿಯನ್ನು ಮಾಡುವ ಜತೆಗೆ ಗ್ರಾಮಸ್ಥರಿಗೆ ಅನನೂಕೂಲ ಉಂಟು ಮಾಡದೆ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ಅಧ್ಯಕ್ಷ ಮಂಜುನಾಥ್, ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಕೆ.ಎಸ್.ದಯಾನಂದ, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ನಿತಿನ್, ಟಿಎಪಿಸಿಎಂಎಸ್ ನಿರ್ದೇಶಕಿ ಸುನಂದಾ ಮರಿದೇವೇಗೌಡ, ಸ್ವಾಮೀಗೌಡ ನ್ಯಾಯಬೆಲೆ ಅಂಗಡಿ, ಆರ್.ಮರಿದೇ ವೇಗೌಡ, ಕಾಂತರಾಜು, ಡಿ.ವೆಂಕಟೇಶ್, ಅರುಣ್ ಕುಮಾರ್, ರಮೇಶ, ಸೋಮೇಗೌಡ, ಚರಣ್, ರಾಮಕೃಷ್ಣೇಗೌಡ ಸೇರಿದಂತೆ ಹಲವರು ಹಾಜರಿದ್ದರು
ಚಿತ್ರ-3
ಪುರಸಭೆಗೆ ಬಾಕಿ ತೆರಿಗೆ ಪಾವತಿ ಮಾಡಲು ತೀರ್ಮಾನ
* ಶ್ರೀರಾಮಾಂಜನೇಯ ಸೇವಾ ಸಮಿತಿಯ ವಾರ್ಷಿಕ ಮಹಾಸಭೆ
ವಿಜಯವಾಣಿ ಸುದ್ದಿಜಾಲ ಪಾಂಡವಪುರ
ಪಟ್ಟಣದ ಹಿರೋಡೆ ಬೀದಿಯಲ್ಲಿರುವ ಒಕ್ಕಲಿಗ ಜನಾಂಗದ ಶ್ರೀರಾಮಾಂಜನೇಯ ಸೇವಾ ಸಮಿತಿಯ 2025ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷ ಪಿ.ರಮೇಶ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಲಾಗಿತ್ತು.
ಸಮಿತಿ ಆವರಣದಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ, ಸಂಘದಲ್ಲಿ ನಡೆದಿರುವ ಹಣಕಾಸಿನ ಆಡಿಟ್ ವರದಿ ಹಾಗೂ ಸಂಸದರು, ಶಾಸಕರ ಅನುದಾನ ಎಷ್ಟು ಬಿಡುಗಡೆಯಾಗಿದೆ, ಅನುದಾನ ಖರ್ಚು ಮಾಡಲಾಗಿರುವ ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ನೀಡುವಂತೆ ಸದಸ್ಯ ಪಿ.ಎಲ್.ಆದರ್ಶ, ಗಿರೀಶ್ ಆಡಳಿತ ಮಂಡಳಿಯನ್ನು ಪ್ರಶ್ನಿಸಿದರು.
ಪುರಸಭೆಗೆ ಕಟ್ಟಬೇಕಿರುವ ಸಂಘದ ಆಸ್ತಿಯ ತೆರಿಗೆ ಕಳೆದ ಮೂರು ವರ್ಷದಿಂದ ಬಾಕಿ ಉಳಿದಿದೆ. ಸಂಘದಲ್ಲಿ ವ್ಯವಹಾರಿಕವಾಗಿ ಅಭಿವೃದ್ಧಿ ಕೆಲಸಗಳು ನಡೆಯಬೇಕಾದರೆ ಮೊದಲು ಸಂಘದ ಬಾಕಿ ತೆರಿಗೆಯನ್ನು ಪಾವತಿಸಿವಂತೆ ಸಭೆಯಲ್ಲಿ ಷೇರುದಾರ ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಪುರಸಭೆಗೆ ಬಾಕಿ ತೆರಿಗೆ ಪಾವತಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಂಘದ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಕ್ರಮವಹಿಸುವುದರ ಜತೆಗೆ ಸಂಘದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಲು ಆಡಳಿತ ಮಂಡಳಿ ಮುಂದಾಗಬೇಕು. ಸಂಘದ ಆವರಣದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ವಹಿಸುವ ಕುರಿತು ಚರ್ಚಿಸಲಾಯಿತು.
ಅಧ್ಯಕ್ಷ ಪಿ.ರಮೇಶ್ ಮಾತನಾಡಿ, ಒಕ್ಕಲಿಗ ಜನಾಂಗದ ಶ್ರೀ ರಾಮಾಂಜನೇಯ ಸೇವಾ ಸಮಿತಿಯ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ಎಲ್ಲರ ಜತೆಗೂಡಿ, ಷೇರುದಾರರ ಸಹಕಾರದೊಂದಿಗೆ ಸಂಘವನ್ನು ಅಭಿವೃದ್ಧಿ ಪಡಿಸುವ ಜತೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು.
ಸಭೆಯಲ್ಲಿ ಗೌರವಾಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಕೆ.ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಆರ್.ಚನ್ನಕೇಶವ, ನಿರ್ದೇಶಕರಾದ ಕೆ.ವೆಂಕಟರಮಣೇಗೌಡ, ನರಸಿಂಹೇಗೌಡ, ಕೆ.ಪ್ರಸಾದ್, ಎಚ್.ಪಿ.ನವೀನ್‌ಕುಮಾರ್, ಚಂದ್ರೇಗೌಡ, ಆರ್.ಕೋದಂಡ, ಎನ್.ದಿಲೀಪ್, ಎಸ್.ಚಂದ್ರಶೇಖರ್, ವಿ.ಗಿರೀಶ್, ಎಸ್.ಚಂದ್ರಶೇಖರ್, ಸೋಮಶೇಖರ್, ಪಿ.ಎಲ್.ಹರ್ಷ ಹಲವರು ಇದ್ದರು.
ಚಿತ್ರ-4
ಪಾಂಡವಪುರದ ಹಿರೋಡೆ ಬೀದಿಯ ಒಕ್ಕಲಿಗ ಜನಾಂಗದ ಶ್ರೀರಾಮಾಂಜನೇಯ ಸೇವಾ ಸಮಿತಿ ಆವರಣದಲ್ಲಿ ಆಯೋಜಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಪಿ.ರಮೇಶ್ ಮಾತನಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net