ಈಜು ಸ್ಪರ್ಧೆಯಲ್ಲಿ ಪಿಇಟಿ ಭರ್ಜರಿ ಸಾಧನೆ: ಚಾಂಪಿಯನ್ ಟ್ರೋಫಿ ಗೆದ್ದ ಸಮೃದ್ಧ್

  ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಬಹುಮಾನ ಗೆದ್ದ ಪಿ.ಇ.ಟಿ ಈಜುಕೇಂದ್ರದ ವಿದ್ಯಾರ್ಥಿಗಳು.
ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಬಹುಮಾನ ಗೆದ್ದ ಪಿ.ಇ.ಟಿ ಈಜುಕೇಂದ್ರದ ವಿದ್ಯಾರ್ಥಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆ
  • ಗಮನಾರ್ಹ ಸಾಧನೆ ಮಾಡಿದ ಪಿಇಟಿ ಈಜು ಕೇಂದ್ರದ ವಿದ್ಯಾರ್ಥಿಗಳು
ಮಂಡ್ಯ: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ನಗರದ ಪ್ರತಿಷ್ಠಿತ ಪಿ.ಇ.ಟಿ ಈಜುಪಟುಗಳ ಭರ್ಜರಿ ಸಾಧನೆ ಮಾಡಿದ್ದಾರೆ. ಅಂತೆಯೇ ಸಮೃದ್ಧ್ ವೈಯಕ್ತಿಕ ಚಾಂಪಿಯನ್ ಟ್ರೋಫಿ ಗೆದ್ದಿದ್ದಾರೆ.
ಜನತಾ ಶಿಕ್ಷಣ ಟ್ರಸ್ಟ್‌ನ ಕ್ರೀಡಾ ಸಮುಚ್ಚಯದ ಪಿ.ಇ.ಟಿ ಈಜು ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಈಜು ಪಟುಗಳು ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಈಜು ಸಂಸ್ಥೆ ಹಾಗೂ ಜೈ ಹಿಂದ್ ಈಜು ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿದರು.
ವೈ.ಸಮೃದ್ಧ್ 100 ಮೀ ಫ್ರೀ ಸ್ಟೈಲ್‌ನಲ್ಲಿ(ಪ್ರ), 50 ಮೀ ಬಟರ್ ಫ್ಲೈನಲ್ಲಿ(ಪ್ರ), 50 ಮೀ ಫ್ರೀ ಸ್ಟೈಲ್‌ನಲ್ಲಿ(ದ್ವಿ) ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು. ಅಂತೆಯೇ ಪಾರ್ಥ ಪಿ.ಶೆಟ್ಟಿ 50 ಮೀ ಬೆಸ್ಟ್ ಸ್ಟ್ರೋಕ್‌ನಲ್ಲಿ(ಪ್ರ) ಹಾಗೂ 100 ಮೀ ಫ್ರೀ ಸ್ಟೈಲ್‌ನಲ್ಲಿ(ತೃ), ಯತಿನ್ 50 ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ (ದ್ವಿ), ಆರೋಶ್ ಆರ್.ಗೌಡ 50 ಮೀ ಬಟರ್ ಫ್ಲೈ ಹಾಗೂ 25 ಮೀ ಫ್ರೀ ಸ್ಟೈಲ್ನಲ್ಲಿ(ತೃ), ರಿಷಬ್ 50 ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ(ದ್ವಿ) ಹಾಗೂ 50 ಮೀ ಬೆಸ್ಟ್‌ಸ್ಟ್ರೋಕ್‌ನಲ್ಲಿ(ತೃ), ಮೋಹಿತ್ ಶೆಟ್ಟಿ 50 ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ(ದ್ವಿ), ಕುಶಾಲ್ಗೌಡ 50 ಮೀ ಬೆಸ್ಟ್‌ಸ್ಟ್ರೋಕ್‌ನಲ್ಲಿ(ತೃ) ಸ್ಥಾನ ಪಡೆದಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾದ ಈಜುಪಟುಗಳು, ತರಬೇತುದಾರರು, ಪಾಲಕರು ಹಾಗೂ ಈಜು ಕೇಂದ್ರದ ಸಿಬ್ಬಂದಿಯನ್ನು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅಭಿನಂದಿಸಿ ಮುಂದಿನ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net