ದೇವಾಲಯ ಮುಂಭಾಗ ಮುಂಜಾನೆ 4ಗಂಟೆಗೆ ಧನುರ್ಮಾಸ ಹಾಗೂ ತ್ರಿರಂಗ ದರ್ಶನ ಸಂಕಲ್ಪ ಹೊತ್ತ ಭಕ್ತರು ಜಿಲ್ಲೆ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ಕೇರಳದಿಂದ ಸಹಸ್ರಾರು ಭಕ್ತರು ಶುಕ್ರವಾರ ರಾತ್ರಿಯೇ ಆಗಮಿಸಿದ್ದರು. ಶನಿವಾರ ಮುಂಜಾನೆ ಕಾವೇರಿಯಲ್ಲಿ ಮಿಂದು ಸ್ವಾಮಿಯ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದರು. ಬ್ರಾಹ್ಮಿ ಮುಹೂರ್ತದಲ್ಲಿ ದರ್ಶನ ಪಡೆದರು.