ಜನರ ಅಭ್ಯುದಯವೇ ನನ್ನ ಗುರಿ

ಶ್ರಿರಂಗಪಟ್ಟಣ ತಾಲೂಕಿನ ಚಿಕ್ಕ ಅಂಕನಹಳ್ಳಿ ಗ್ರಾಮದಲ್ಲಿ ಶನಿವಾರ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಭೂಮಿಪೂಜೆ ನೆರವೇರಿಸಿದರು. ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಗಿರೀಶ್ ಬೆಟ್ಟೇಗೌಡ ಇತರರು ಇದ್ದರು.
ಶ್ರಿರಂಗಪಟ್ಟಣ ತಾಲೂಕಿನ ಚಿಕ್ಕ ಅಂಕನಹಳ್ಳಿ ಗ್ರಾಮದಲ್ಲಿ ಶನಿವಾರ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಭೂಮಿಪೂಜೆ ನೆರವೇರಿಸಿದರು. ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಗಿರೀಶ್ ಬೆಟ್ಟೇಗೌಡ ಇತರರು ಇದ್ದರು.
Published on
ಶ್ರೀರಂಗಪಟ್ಟಣ: ರಾಜ್ಯ ಕಾಂಗ್ರೆಸ್ ಸರ್ಕಾರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವು ರೀತಿಯ ಕಾಮಗಾರಿಗಳಿಗೆ ನಿರಂತರ ಚಾಲನೆ ನೀಡಲಾಗುತ್ತಿದ್ದು, ಜನರ ಅಭ್ಯುದಯವೇ ನನ್ನ ಗುರಿಯಾಗಿದೆ ಎಂದು ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ತಾಲೂಕಿನಲ್ಲಿ ಶನಿವಾರ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 1.5 ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು.
ತಾಲೂಕಿನ ಮಹದೇವಪುರ ಬೋರೆ ಬಳಿ ಇರುವ ಹಕ್ಕಿಪಿಕ್ಕಿ ಜನಾಂಗದ ಅನೂಕೂಲಕ್ಕಾಗಿ, ಅಲೆಮಾರಿ ಸಮುದಾಯದ ಜನರ ಅನೂಕೂಲಕ್ಕಾಗಿ ಟಾರ್ಪಲ್ ವಿತರಣೆ ಮಾಡಲಾಗುತ್ತಿದೆ. ಅಂತೆಯೇ ಚಿಕ್ಕ ಅಂಕನಹಳ್ಳಿ ಗ್ರಾಮದಲ್ಲಿನ ಮಕ್ಕಳ ಅನುಸಾರ 20ಲಕ್ಷ ರೂ.ವೆಚ್ಚದಲ್ಲಿ 3ನೇ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ, ಗ್ರಾಮದ ಪರಿಶಿಷ್ಟ ಸಮುದಾಯದ ಕಾಲನಿಯಲ್ಲಿ 25 ಲಕ್ಷ ರೂ.ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಹಾಗೂ ಕೊಕ್ಕರೆಹುಂಡಿ ಗ್ರಾಮದಲ್ಲೂ 10ಲಕ್ಷ ರೂ.ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿಗಳಿಗೆ ಚಾಲನೆ ಜನರ ಬೇಡಿಕೆಗಳಿಗೆ ಸ್ಪಂದಿಸಲಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಗಿರೀಶ್ ಬೆಟ್ಟೇಗೌಡ, ಮುಖಂಡರಾದ ಅಭಿಷೇಕ್, ಹುರುಳಿಕ್ಯಾತನಹಳ್ಳಿ ಶಿವಕುಮಾರ್, ಸುಗ್ಗನಹಳ್ಳಿ ಕೃಷ್ಣ, ಬೊಂತಗಹಳ್ಳಿಹುಂಡಿ ಶಿವಸ್ವಾಮಿ, ಚಿಕ್ಕಣ್ಣ, ಕೊಕ್ಕರೆಹುಂಡಿ ನಂಜುಂಡಸ್ವಾಮಿ, ಚಂದ್ರು, ಕೃಷ್ಣ ಇತರರು ಇದ್ದರು.
ಇದಾದ ಬಳಿಕ ತಾಲೂಕಿನ ಬೆಳಗೊಳ ಹೋಬಳಿಯ ಪಿ.ಹೊಸಹಳ್ಳಿ ಗ್ರಾಮದಲ್ಲಿ 50ಲಕ್ಷ ರೂ.ವೆಚ್ಚದಲ್ಲಿ ಸೆಸ್ಕ್‌ನಿಂದ ಮಾದರಿ ಗ್ರಾಮ ಯೋಜನೆ ಅನುಷ್ಠಾನಕ್ಕೆ ತರಲಾಗಿದ್ದು, ಜನರಿಗೆ ವಿದ್ಯುತ್ ಪೂರೈಕೆಯಲ್ಲಿ ಎದುರಾಗುತ್ತಿದ್ದ ಸಮಸ್ಯೆಗಳು ಹಾಗೂ ಜನ-ಜಾನುವಾರುಗಳ ಪ್ರಾಣ ಹಾನಿ ತಪ್ಪಿಸಲು ಸಹಕಾರಿಯಾಗಲಿದೆ. ಜತೆಗೆ ಶಿಥಿಲಗೊಂಡ ಕಂಬಗಳ ಬದಲಾವಣೆ, ಹೊಸ ಪರಿವರ್ತಕ ಅಳವಡಿಕೆಯೊಂದಿಗೆ ವಿದ್ಯುತ್ ಗುಣಮಟ್ಟವನ್ನು ಹೆಚ್ಚಿಸಲು ಇದು ನೆರವಾಗಲಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಲುವರಾಜು,ಉಪಾಧ್ಯಕ್ಷೆ ಸುಮಿತ್ರಾ, ಸದಸ್ಯ ಸಾಗರ್, ಶ್ರೀಕಂಠ, ಕೃಷ್ಣಾನಂದ, ರಾಣಿ, ಉಮಾ, ಮಾಜಿ ಅಧ್ಯಕ್ಷ ಸತೀಶ್, ಕಾಂಗ್ರೆಸ್ ಮುಖಂಡ ಪುಟ್ಟರಾಜು, ಕೃಷ್ಣಮೂರ್ತಿ, ಸೆಸ್ಕ್ ಇಇ ವಿನುತಾ, ಎಇಇ ಮಂಜುನಾಥ್ ಪ್ರಸಾದ್, ಜೆಇ ನವೀನ್, ಅರುಣ್ ಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net