ಇನ್ನು ಮಕರ ಸಂಕ್ರಾಂತಿ ದಿನದ ಪೂರ್ವ ಸಿದ್ಧತೆಗಾಗಿ ಹಿಂದಿನ ದಿನದಿಂದಲೇ ಲಕ್ಷಾಂತರ ದೀಪಗಳನ್ನು ಸಾಲಾಗಿ ಜೋಡಿಸಲು ಅವಶ್ಯವಿರುವ ಹಸುವಿನ ಸಗಣಿ ಸಂಗ್ರಹಿದ್ದು, ಇವುಗಳ ಮೇಲೆ ಇಡುವ ದೀಪಗಳನ್ನು ಬೆಳಗಲು ಶ್ರೀರಂಗನ ಭಕ್ತರು, ದಾನಿಗಳು ಹಾಗೂ ಪುರಜನರು ಸ್ವಯಂಪ್ರೇರಣೆ ಸಹಾಯದಿಂದ ನೀಡಿದ ಲಕ್ಷಗಟ್ಟಲೆ ದೀಪಗಳು ಹಾಗೂ ಬೇಕಾಗುವ 75ಟಿನ್ (80 ಸಾವಿರ ಲೀಟರ್‌ನಷ್ಟು) ದೀಪದ ಎಣ್ಣೆಯನ್ನು ತರಲಾಗಿದೆ. ಈ ಬಾರಿ ವೇದಬ್ರಹ್ಮ ಲಕ್ಷ್ಮೀಶ ಶರ್ಮ ಅವರಿಂದಲೇ 20 ಸಾವಿರ ಹೊಸ ಮಣ್ಣಿನ ದೀಪಗಳನ್ನು ತರಲಾಗಿದ್ದು, ಅವುಗಳನ್ನು ಸಾಲಾಗಿ ಜೋಡಿಸುವ ಹಾಗೂ ಎಣ್ಣೆ ಹಾಕುವ ಪ್ರಕ್ರಿಯೆ ಮತ್ತು ನಿರ್ವಹಣೆಗೆ ಲಕ್ಷದೀಪೋತ್ಸವ ಸಮಿತಿ ಮುಖ್ಯಸ್ಥ ಇಡ್ಲಿ ವೆಂಕಟೇಶ್ ಹಾಗೂ ವೈದಿಕ ಲಕ್ಷ್ಮೀಶ ಶರ್ಮ ನೇತೃತ್ವದಲ್ಲಿ ಸಮಿತಿ ಸದಸ್ಯರು, ಅಭಿನವ ಭಾರತ್, ವಿದ್ಯಾಭಾರತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಪುರಜನರನ್ನು ಒಳಗೊಂಡ ಸ್ವಯಂ ಸೇವಕರ ತಂಡ ಬುಧವಾರ ಆಗಮಿಸಿದೆ.