ಶ್ರೀರಂಗಪಟ್ಣಣ-ಚನ್ನರಾಯಪಟ್ಟಣ ಮಾರ್ಗ ಅಭಿವೃದ್ಧಿ ಶೀಘ್ರ

ಕಿಕ್ಕೇರಿ ಪ್ರವಾಸಿ ಮಂದಿರ ಆವರಣದಲ್ಲಿ ಕಿಕ್ಕೇರಮ್ಮ ಗ್ರಾಮಾಂತರ ಕ್ರೀಡಾ ಸಂಘದ ಶ್ರೀಮತಿ ಜಯಲಕ್ಷ್ಮೀ ಹಾಗೂ ದಿ. ಶ್ರೀ ಫೈಲ್ವಾನ್ ಚನ್ನೇಗೌಡ ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಂಗಣವನ್ನು ಎನ್. ಚಲುವರಾಯಸ್ವಾಮಿ ಬ್ಯಾಡ್ಮಿಂಟನ್ ಆಡುವ ಮೂಲಕ ಚಾಲನೆ ನೀಡಿದರು. ಸುರೇಶ್, ದಿನೇಶ್ ಗೂಳೀಗೌಡ, ಬಿ. ನಾಗೇಂದ್ರಕುಮಾರ್, ಎಂ.ಡಿ. ಕೃಷ್ಣಮೂರ್ತಿ, ಬಿ.ಎಲ್. ದೇವರಾಜು, ಆರ್‌ಟಿಒ ಮಲ್ಲಿಕಾರ್ಜುನ ಮತ್ತಿತರರಿದ್ದರು.
ಕಿಕ್ಕೇರಿ ಪ್ರವಾಸಿ ಮಂದಿರ ಆವರಣದಲ್ಲಿ ಕಿಕ್ಕೇರಮ್ಮ ಗ್ರಾಮಾಂತರ ಕ್ರೀಡಾ ಸಂಘದ ಶ್ರೀಮತಿ ಜಯಲಕ್ಷ್ಮೀ ಹಾಗೂ ದಿ. ಶ್ರೀ ಫೈಲ್ವಾನ್ ಚನ್ನೇಗೌಡ ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಂಗಣವನ್ನು ಎನ್. ಚಲುವರಾಯಸ್ವಾಮಿ ಬ್ಯಾಡ್ಮಿಂಟನ್ ಆಡುವ ಮೂಲಕ ಚಾಲನೆ ನೀಡಿದರು. ಸುರೇಶ್, ದಿನೇಶ್ ಗೂಳೀಗೌಡ, ಬಿ. ನಾಗೇಂದ್ರಕುಮಾರ್, ಎಂ.ಡಿ. ಕೃಷ್ಣಮೂರ್ತಿ, ಬಿ.ಎಲ್. ದೇವರಾಜು, ಆರ್‌ಟಿಒ ಮಲ್ಲಿಕಾರ್ಜುನ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಭರವಸೆ
ಕಿಕ್ಕೇರಿ : ಶ್ರೀರಂಗಪಟ್ಣಣ-ಚನ್ನರಾಯಪಟ್ಟಣ ಮಾರ್ಗದವರೆಗೆ ಹದಗೆಟ್ಟಿರುವ ರಾಜ್ಯ ಹೆದ್ದಾರಿಯನ್ನು 500 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಗೊಳಿಸುವ ಯೋಜನೆ ಶೀಘ್ರವೇ ಆರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಇಲ್ಲಿನ ಕಿಕ್ಕೇರಮ್ಮ ಗ್ರಾಮಾಂತರ ಕ್ರೀಡಾ ಸಂಘದಿಂದ ನಿರ್ಮಾಣ ಮಾಡಿರುವ ಶ್ರೀಮತಿ ಜಯಲಕ್ಷ್ಮೀ ಹಾಗೂ ದಿ. ಶ್ರೀ ಫೈಲ್ವಾನ್ ಚನ್ನೇಗೌಡ ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಂಗಣವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ವೃತ್ತಿ ಬದುಕಿನ ಮೊದಲು ನನಗೂ, ಕಿಕ್ಕೇರಿಗೂ ಅವಿನಾಭಾವ ನಂಟಿದೆ. ನಾನು ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ಅಭಿಮಾನಿ ಆಗಿದ್ದು, ಇಲ್ಲಿನ ಕೆರೆಗೆ ಕೆಎಸ್‌ನ ಸರೋವರ, ವಾಕಿಂಗ್, ಜಾಗಿಂಗ್ ಪಾಥ್, ಸ್ಮಾರಕ, ಸ್ವಾಗತ ಕಮಾನು ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ತಾಲೂಕಿನ ಅಭಿವೃದ್ಧಿಗೆ ಅನುದಾನ ನೀಡಿಲ್ಲ ಎನ್ನುವ ಈ ಕ್ಷೇತ್ರದ ಶಾಸಕರ ಟೀಕೆ ಸರಿಯಲ್ಲ. ಎಲ್ಲ ಕ್ಷೇತ್ರಕ್ಕೆ ನೀಡಿರುವಂತೆ ಅನುದಾನ ನೀಡಲಾಗಿದೆ. ಜನರ ಮನಸ್ಸನ್ನು ಕೆಡಿಸುವುದು ತರವಲ್ಲ. 5ವರ್ಷಗಳ ಹಿಂದೆ ವಿರೋಧ ಪಕ್ಷ ಜಿಲ್ಲೆಗೆ ಕೊಟ್ಟಿರುವ ಕೊಡುಗೆಯಾದರೂ ಏನಿದೆ. 1939ರಲ್ಲಿ ಮೈಸೂರು ಮಹಾರಾಜರು ಮಂಡ್ಯದಲ್ಲಿ ವಿ.ಸಿ. ಫಾರ್ಮ್ ಸ್ಥಾಪಿಸಿದರು. ನಮ್ಮ ಸರ್ಕಾರ ಕೃಷಿ ವಿಶ್ವವಿದ್ಯಾಲಯವನ್ನು ಕೃಷಿಕರಿಗಾಗಿ ಕೊಟ್ಟಿದೆ. ಸರ್ಕಾರಿ ಸ್ವಾಮ್ಯದ ಮೈಶುಗರ್ ಕಾರ್ಖಾನೆ ಉಳಿವಿಗಾಗಿ ಅನುದಾನ ನೀಡಿದ್ದು, ಕಾರ್ಖಾನೆ ಶಾಶ್ವತ ನೆಲೆಗೆ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಕುಟುಕಿದರು.
ರೈತರಿಗಾಗಿ ಕ್ಷಿಪ್ರಗತಿಯಲ್ಲಿ ಪೌತಿ ಖಾತೆ, ಪೋಡಿ ಆಂದೋಲನ ಹಮ್ಮಿಕೊಂಡಿದೆ. ಪ್ರಾಕೃತಿಕ ವಿಕೋಪಕ್ಕೆ ಹಾನಿಯಾಗದಂತೆ ಬೆಳೆ ಬೆಳೆಯಲು ಹೊಸತಳಿ ಅಭಿವೃದ್ಧಿಗೆ ಉತ್ತೇಜಿಸಿದೆ. ಪಂಚ ಗ್ಯಾರಂಟಿಗಳನ್ನು ತಮ್ಮ ಸರ್ಕಾರ ನೀಡಿದೆ. ಒಂದು ಕುಟುಂಬಕ್ಕೆ ಸುಮಾರು 54 ಸಾವಿರ ರೂ. ತಲುಪಿಸಿದೆ. ಅನ್ಯ ರಾಜ್ಯಗಳು ಗ್ಯಾರಂಟಿ ನೀಡದೆ ಬಸವಳಿದಿವೆ ಎಂದರು.
ಮನವಿ: ಹೇಮಾವತಿ ನಾಲಾ ನಂ. 47 ರಿಂದ 54ರವರೆಗೆ ನಾಲೆ ಆಧುನೀಕರಣ ಮಾಡಬೇಕಿದೆ. ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಘೊಷಣೆ ಮಾಡಬೇಕು. ಸೆಸ್ಕ್‌ನ ಸಬ್ ಡಿವಿಷನ್ ಮಾಡಿ, ಪ್ರೇಮಕವಿ ಕೆಎಸ್‌ನ ಟ್ರಸ್ಟ್‌ನ ಬೇಡಿಕೆಗಳನ್ನು ತ್ವರಿತವಾಗಿ ಪೂರೈಸಿಕೊಡುವಂತೆ ಕೆಪಿಸಿಸಿ ಸದಸ್ಯ ಸುರೇಶ್ ಮನವಿ ಮಾಡಿದರು.
ವಿವಿಧ ಕ್ಷೇತ್ರದ ಗಣ್ಯರಾದ ಆರ್‌ಟಿಒ ಮಲ್ಲಿಕಾರ್ಜುನ, ಅಂತಾರಾಷ್ಟ್ರೀಯ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ, ನಗರ ಶ್ರೀನಿವಾಸ ಉಡುಪ, ಡಿವೈಎಸ್‌ಪಿ ಬಿ.ಬಿ. ಲಕ್ಷ್ಮೇಗೌಡ, ಪತ್ರಕರ್ತ ಬಳ್ಳೇಕೆರೆ ಮಂಜುನಾಥ್, ಹರಿಚರಣ ತಿಲಕ್, ಕೆ.ಆರ್. ನೀಲಕಂಠ, ಪ್ರಸನ್ನ ದೇವನೂರು, ಧರ್ಮೇಂದ್ರ ಕುಮಾರ್, ರಂಗಸ್ವಾಮಿ, ಎಲ್.ಎಸ್. ಕಿಕ್ಕೇರಿಗೌಡ, ರಾಜಶೇಖರ್, ಹನುಮಂತಶೆಟ್ಟಿ, ಚಂದ್ರಮೋಹನ್, ಜಾನೇಗೌಡ ಮತ್ತಿತರರನ್ನು ಗೌರವಿಸಲಾಯಿತು.
ಸುಗಮ ಸಂಗೀತ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ, ನಗರ ಶ್ರೀನಿವಾಸ ಉಡುಪ ಕೆಎಸ್‌ನ ಗೀತೆಗಳನ್ನು ಹಾಡಿ ರಂಜಿಸಿದರು. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳೀಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಅಶೋಕ್, ಕೆಪಿಸಿಸಿ ಸದಸ್ಯ ಸುರೇಶ್, ರಾಜ್ಯ ಯುವ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಕೆಂಪರಾಜು, ಕಾಂಗ್ರೆಸ್ ಮುಖಂಡರಾದ ಬಿ.ಎಲ್. ದೇವರಾಜು, ಪ್ರಕಾಶ್, ಬಿ. ನಾಗೇಂದ್ರಕುಮಾರ್, ಎಂ.ಡಿ. ಕೃಷ್ಣಮೂರ್ತಿ, ಎಲ್. ದೇವರಾಜು, ವಿಜಯರಾಮೇಗೌಡ, ಎಂ.ಬಿ. ಹರೀಶ್, ಡಿ. ಪ್ರೇಮಕುಮಾರ್, ಚಂದ್ರೇಗೌಡ, ಈರಪ್ಪ, ಶಿವಣ್ಣ. ಎಲ್.ಪಿ. ನಂಜಪ್ಪ, ಕೆ.ವಿ. ಅರುಣಕುಮಾರ್, ಪುರುಷೋತ್ತಮ್, ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net