ಶ್ರೀ ಶಿವಕುಮಾರ ಸ್ವಾಮೀಜಿ ಜಯಂತಿ ಆಚರಣೆ

ಮಳವಳ್ಳಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಬುಧವಾರ ಸರ್ವ ಸಮುದಾಯ ಹಾಗೂ ಸಂಘಟನೆಗಳ ಸಹಯೋಗದಲ್ಲಿ ತ್ರಿವಿಧ ದಾಸೋಹಿ ಲಿಂಗ್ಯಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶ್ರೀಗಳ ಜಯಂತಿ ಆಚರಿಸಲಾಯಿತು. ತೊಟ್ಟಿಮನೆ ಚನ್ನಪ್ಪ, ವಿಶ್ವಾಸ್,  ಗಜೇಂದ್ರ, ಪರಶಿವಮೂರ್ತಿ, ಎವಿಟಿ ಕುಮಾರ್, ಮಲ್ಲೇಶ್, ಕೃಷ್ಣಶೆಟ್ಟಿ, ಸುರೇಶ್, ನಂದೀಶ್ ಇದ್ದರು.
ಮಳವಳ್ಳಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಬುಧವಾರ ಸರ್ವ ಸಮುದಾಯ ಹಾಗೂ ಸಂಘಟನೆಗಳ ಸಹಯೋಗದಲ್ಲಿ ತ್ರಿವಿಧ ದಾಸೋಹಿ ಲಿಂಗ್ಯಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶ್ರೀಗಳ ಜಯಂತಿ ಆಚರಿಸಲಾಯಿತು. ತೊಟ್ಟಿಮನೆ ಚನ್ನಪ್ಪ, ವಿಶ್ವಾಸ್, ಗಜೇಂದ್ರ, ಪರಶಿವಮೂರ್ತಿ, ಎವಿಟಿ ಕುಮಾರ್, ಮಲ್ಲೇಶ್, ಕೃಷ್ಣಶೆಟ್ಟಿ, ಸುರೇಶ್, ನಂದೀಶ್ ಇದ್ದರು.
Published on
ಮಳವಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಬುಧವಾರ ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜಯಂತಿ ಅಂಗವಾಗಿ ಅನ್ನಸಂತರ್ಪಣೆ ಹಾಗೂ ಶ್ರೀಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಆಯೋಜಿಸಲಾಗಿತ್ತು.
ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಸರ್ವ ಸಮುದಾಯ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜನ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಬಸವ ಕೇಂದ್ರದ ತಾಲೂಕು ಅಧ್ಯಕ್ಷ ತೊಟ್ಟಿಮನೆ ಚನ್ನಪ್ಪ ಮಾತನಾಡಿ, 12 ನೇ ಶತಮಾನದ ಬಸವಣ್ಣನ ಸಮಾನತೆ ಹಾಗೂ ಸನ್ಮಾರ್ಗದ ಸಂದೇಶವನ್ನು ಇಂದಿನ ಪೀಳಿಗೆಗೆ ನೀಡಿದವರು ಶ್ರೀ ಶಿವಕುಮಾರ ಸ್ವಾಮೀಜಿ. ಶ್ರೀ ತತ್ವಾದರ್ಶಗಳನ್ನು ಎಲ್ಲ ವರ್ಗದ ಯುವ ಸಮೂಹ ಪಾಲಿಸಿದರೆ ಬದುಕಿಗೊಂದು ಸಾರ್ಥಕತೆ ದೊರೆಯಲು ಸಾಧ್ಯ ಎಂದು ತಿಳಿಸಿದರು.
ಇದೇ ವೇಳೆ ನೆರೆದ ನೂರಾರು ಜನರಿಗೆ ಸಿಹಿ ವಿತರಣೆ ಮತ್ತು ಅನ್ನಸಂತರ್ಪಣೆ ಮಾಡಲಾಯಿತು. ಪೂರಿಗಾಲಿ ಒಡೆಯರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಮನ್‌ಮುಲ್ ನಿರ್ದೇಶಕ ವಿಶ್ವಾಸ್, ವೀರಶೈವ ಮಹಾಸಭಾ ತಾಲೂಕು ನಿರ್ದೇಶಕರಾದ ತೆಂಕಳ್ಳಿ ಮಹೇಶ್, ಕ್ಯಾತನಹಳ್ಳಿ ಅಶೋಕ್, ಗೌಡಗೆರೆ ಕುಮಾರ, ಹಲದಾಸಹಳ್ಳಿ ತಾಂಡವಮೂರ್ತಿ,ಆರ್.ಬಿ.ಹಳ್ಳಿ ನಂದೀಶ್, ವೀರಶೈವ ಯುವ ಬಳಗದ ಅಧ್ಯಕ್ಷ ಎಚ್.ಸಿ.ಮಹೇಶ, ಮುಖಂಡರಾದ ಕುಂದೂರು ಪ್ರಕಾಶ್, ಗಜೇಂದ್ರ, ಮಲ್ಲೇಶ್, ಪರಶಿವಮೂರ್ತಿ, ಎವಿಟಿ ಕುಮಾರ್, ಮಲ್ಲೇಶ್, ಕೃಷ್ಣಶೆಟ್ಟಿ, ಸುರೇಶ್, ನಂದೀಶ್ ಸಾಲುಮರ ನಾಗರಾಜು ಸೇರಿದಂತೆ ಇತರರಿದ್ದರು.
ವಿವಿಧ ಗ್ರಾಮಗಳಲ್ಲಿ ಆಚರಣೆ: ಪಟ್ಟಣದ ಎನ್‌ಇಎಸ್ ಬಡಾವಣೆ ಬಸವೇಶ್ವರ ವೃತ್ತ, ಅನಂತ್ ರಾಮ್ ವೃತ್ತ, ತಾಲೂಕಿನ ರಾಗಿಬೊಮ್ಮನಹಳ್ಳಿ, ಕನ್ನಳ್ಳಿ, ನಾರಾಯಣಪುರ, ಡಿ.ಹಲಸಹಳ್ಳಿ, ಬೆಳಕವಾಡಿ, ಪೂರಿಗಾಲಿ, ಬಿ.ಜಿ.ಪುರ, ನೆಲ್ಲಿಗೆರೆ, ಹಂಗ್ರಾಪುರ, ವೀರಾಜಿಪುರ, ಚಿಕ್ಕಮುಲಗೂಡು, ದುಗ್ಗನಹಳ್ಳಿ, ಕಿರುಗಾವಲು, ಹಲಗೂರು, ಗ್ರಾಮದೇವತೆ ಪುರ ಸೇರಿದಂತೆ ಬಹುತೇಕ ಗ್ರಾಮದಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆ, ಅನ್ನಸಂರ್ತಣೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net