ಪಟ್ಟಣದ ಎ.ರಾಮಣ್ಣ ಬೀದಿಯ ಶ್ರೀ ಪಟ್ಟಾಭಿರಾಮ ಮಂದಿರದಲ್ಲಿ ಶ್ರೀ ರಾಮಚಂದ್ರ ಸ್ವಾಮಿಗೆ ಜ್ಯೋತಿಷಿ ಡಾ.ವಿ.ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ 9 ದಿನಗಳ ಕಾಲ ವಿಶೇಷ ಪೂಜಾ ಕಾರ್ಯಗಳು, ಕಲ್ಯಾಣೋತ್ಸವ ಮತ್ತು ಪಟ್ಟಾಭಿಷೇಕ ಸೇರಿದಂತೆ ಪುಷ್ಪಾಲಂಕಾರ ಸಮೇತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಿತ್ಯವೂ ವೈಭವದ ಉತ್ಸವ ನೆರವೇರಿಸಲಾಗಿತ್ತು. ನವಮಿಯ ಅಂತಿಮ ದಿನವಾದ ಸೋಮವಾರ ಅರಿಶಿಣ-ಕುಂಕುಮ ಮತ್ತು ಸುಣ್ಣ ಮಿಶ್ರಿತ ಜಲದ ತೀರ್ಥದೋಂದಿಗೆ ಭರತ, ಲಕ್ಷ್ಮಣ ಹನುಮ ಮೂರ್ತಿಗಳ ಸಮೇತ ಶ್ರೀ ಸೀತಾ ರಾಮಚಂದ್ರಸ್ವಾಮಿ ದೇವರ ಪಂಚಲೋಹದ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿರಿಸಿ ಶ್ರೀರಾಮನ ಕೀರ್ತನೆಗಳೊಂದಿಗೆ ಜೀವನದಿ ಕಾವೇರಿ ಸ್ನಾನಘಟ್ಟದ ನೀರಲ್ಲಿ ವಿಶೇಷ ಪೂಜಾ ಕಾರ್ಯಗಳೊಂದಿಗೆ ರಾಜ ಬೀದಿಗಳಲ್ಲಿ ಓಕುಳಿ ಆಡುವ ಮೂಲಕ ಸಂಭ್ರಮಿಸಿದರು. ಬಳಿಕ ಜನರಿಗೆ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.