ವಿಪ್ರ ಮಹಿಳಾ ಮಂಡಳಿಯ 25ನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ನೆಹರು ನಗರದ ಶಂಕರ ಮಠದ ಆವರಣದಲ್ಲಿ ಆಯೋಜಿಸಿದ್ದ ಶ್ರೀ ಲಕ್ಷ್ಮೀನರಸಿಂಹ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಂಟು ವರ್ಷದ ಹಿಂದೆ ಮಂಡ್ಯದಲ್ಲಿ ನಡೆದ ಶ್ರೀ ಶ್ರೀನಿವಾಸಸ್ವಾಮಿಯ ಕಲ್ಯಾಣೋತ್ಸವದಿಂದಾಗಿ 80 ವರ್ಷದಿಂದ ನನೆಗುದಿಗೆ ಬಿದ್ದಿದ್ದ ಕಾವೇರಿ ತೀರ್ಪು ನಮ್ಮ ಪರವಾಗಿ ಬಂದಿತ್ತು. ಇದರಿಂದ ದೇವರ ಶಕ್ತಿ ಎಷ್ಟಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.