ವಿಶ್ವಕ್ಕೆ ಮಾದರಿ ಶ್ರೀಶಿವಕುಮಾರ ಸ್ವಾಮೀಜಿ

 ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಅಹಿಂದ ಸಂರಕ್ಷಣಾ ವೇದಿಕೆ ವತಿಯಿಂದ ಡಾ. ಶ್ರೀ ಶಿವಕುಮಾರ್ ಸ್ವಾಮೀಜಿ ಅವರ 199ನೇ ಜನ್ಮದಿನವನ್ನು ಆಚರಿಸಲಾಯಿತು. ಕೆ.ಟಿ.ಶಿವಕುಮಾರ್, ಶಿವಮಲ್ಲಯ್ಯ, ಶಿವಣ್ಣ, ಪಿ.ಶಶಿಕುಮಾರ್, ಮಹದೇವಯ್ಯ ಇದ್ದರು.
ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಅಹಿಂದ ಸಂರಕ್ಷಣಾ ವೇದಿಕೆ ವತಿಯಿಂದ ಡಾ. ಶ್ರೀ ಶಿವಕುಮಾರ್ ಸ್ವಾಮೀಜಿ ಅವರ 199ನೇ ಜನ್ಮದಿನವನ್ನು ಆಚರಿಸಲಾಯಿತು. ಕೆ.ಟಿ.ಶಿವಕುಮಾರ್, ಶಿವಮಲ್ಲಯ್ಯ, ಶಿವಣ್ಣ, ಪಿ.ಶಶಿಕುಮಾರ್, ಮಹದೇವಯ್ಯ ಇದ್ದರು.
Published on
ಮದ್ದೂರು: ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಅಹಿಂದ ಸಂರಕ್ಷಣಾ ವೇದಿಕೆ ವತಿಯಿಂದ ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 199ನೇ ಜನ್ಮದಿನ ಆಚರಿಸಲಾಯಿತು.
ಶಿವಕುಮಾರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ತಾಲೂಕು ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಟಿ.ಶಿವಕುಮಾರ್, ತುಮಕೂರಿನಲ್ಲಿ ಸಿದ್ಧಗಂಗಾ ಮಠವನ್ನು ಸ್ಥಾಪಿಸಿದ ಶ್ರೀ ಶಿವಕುಮಾರ ಸ್ವಾಮೀಜಿ ಯಾವುದೇ ಜಾತಿ, ಮತ, ಧರ್ಮ ಎನ್ನದೇ ಎಲ್ಲ ವರ್ಗದ ಮಕ್ಕಳಿಗೆ ಅಕ್ಷರ, ಅನ್ನ ದಾಸೋಹ, ವಸತಿ ಸೌಲಭ್ಯ ಹೀಗೆ ಹಲವಾರು ರೀತಿ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದರು ಎಂದು ಬಣ್ಣಿಸಿದರು.
ಕುಂಬಾರ ಶ್ರೀ ಸರ್ವಜ್ಞ ಸಂಘದ ತಾಲೂಕು ಅಧ್ಯಕ್ಷ ಶಿವಣ್ಣ ಮಾತನಾಡಿ, ಶ್ರೀ ಶಿವಕುಮಾರ ಸ್ವಾಮೀಜಿಗಳ ಸಮಾಜ ಸೇವೆ, ಅವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಅವರ ಸೇವೆ ರಾಜ್ಯಕ್ಕೆ ಮಾದರಿ ಎಂದು ಪ್ರಶಂಸಿಸಿದರು.
ವೀರಶೈವ ಲಿಂಗಾಯತ ಸಂಘಟನೆಯ ಶಿವಮಲ್ಲಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ, ಅಹಿಂದ ಸಂರಕ್ಷಣಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ಪಿ.ಶಶಿಕುಮಾರ್, ಸಂಚಾಲಕರಾದ ಆಶಿಷ್ ಪಾಷಾ, ದಾಕ್ಷಾಯಿಣಿ ವೆಂಕಟೇಶ್, ಪುಟ್ಟಲಿಂಗಯ್ಯ, ರವಿ, ಮಹಿಳಾ ಸಂಘಟನೆಯ ಚಿಕ್ಕಮ್ಮ, ಸುನೀತಾ, ರುಕ್ಮಿಣಿ, ಮಹಮದ್‌ಗೌಸ್, ಕದಸಂಸ ರಾಮಾನಂದ, ಮುಖಂಡರಾದ ಬಸವಾಚಾರಿ, ಮಹದೇವಯ್ಯ ರಾಚಯ್ಯ, ಧನಂಜಯ , ನೀಲಕಂಠಹಳ್ಳಿ ಪ್ರಸನ್ನ, ನಾಗರಾಜ್, ಅರಮುಂಗಮ್, ಗಿರೀಶ್, ರಾಘು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net