ಆದರ್ಶ ಜೀವನ ಸಾಗಿಸಲು ಮಠಗಳ ಪಾತ್ರ ಮುಖ್ಯ

ಮಳವಳ್ಳಿ ತಾಲೂಕಿನ ಬೆಳಕವಾಡಿ ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮವನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಸಿದ್ಧಮಲ್ಲ ಸ್ವಾಮೀಜಿ, ಶ್ರೀ ಚಂದ್ರಶೇಖರ ಸ್ವಾಮೀಜಿ, ಶರತ್‌ಚಂದ್ರ ಸ್ವಾಮೀಜಿ ಇದ್ದರು.
ಮಳವಳ್ಳಿ ತಾಲೂಕಿನ ಬೆಳಕವಾಡಿ ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮವನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಸಿದ್ಧಮಲ್ಲ ಸ್ವಾಮೀಜಿ, ಶ್ರೀ ಚಂದ್ರಶೇಖರ ಸ್ವಾಮೀಜಿ, ಶರತ್‌ಚಂದ್ರ ಸ್ವಾಮೀಜಿ ಇದ್ದರು.
Published on
ಮಳವಳ್ಳಿ: ಶರಣರ ತತ್ತ್ವ, ಆದರ್ಶಗಳ ಮೇಲೆ ನಂಬುಗೆ ಹೊಂದಿರುವ ಜನರ ಶಾಂತಿ, ನೆಮ್ಮದಿ ಹಾಗೂ ಆದರ್ಶ ಜೀವನ ಸಾಗಿಸಲು ಅವಕಾಶ ಕಲ್ಪಿಸುವುದರಲ್ಲಿ ನಾಡಿನ ಮಠಗಳ ಪಾತ್ರ ಮುಖ್ಯವಾಗಿದೆ ಎಂದು ಸುತ್ತೂರು ವೀರ ಸಿಂಹಾಸನ ಮಠದ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಬೆಳಕವಾಡಿ ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡದ ಅವರು, ಅನಾದಿ ಕಾಲದಿಂದಲೂ ಶಿವ ಶರಣರು ಮತ್ತು ದಾರ್ಶನಿಕರು ಜನರಲ್ಲಿ ದೈವ ಭಕ್ತಿ ಹಾಗೂ ಸಮಾಜದಲ್ಲಿ ಸಮಾನತೆಯ ಬದುಕು ನಡೆಸುವ ಸನ್ಮಾರ್ಗ ವಿಚಾರಗಳನ್ನು ತಿಳಿಸಿ ಹೋಗಿದ್ದಾರೆ. ಆ ಧಾರ್ಮಿಕ ಭಾವನೆಗಳನ್ನು ಸಮೂಹದ ಮನದಲ್ಲಿ ಮಾಸದಂತೆ ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸುವ ಮೂಲಕ ಹಸಿರಾಗಿಸಿಕೊಂಡು ಜನರಿಗೆ ಸಹಬಾಳ್ವೆ ಸಂದೇಶಗಳನ್ನು ನೀಡುತ್ತಿರುವುದು ಮಠಗಳು ಎಂದು ಹೇಳಿದರು.
ಹೊಸಹಳ್ಳಿ ಗ್ರಾಮದಲ್ಲಿ 1930ರಲ್ಲಿ ಮಠ ಪ್ರಾರಂಭಿಸಿ ಗ್ರಾಮವೂ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಹಿಂದಿನ ಲಿಂಗೈಕ್ಯ ಶ್ರೀಗಳು ಧರ್ಮ ಪ್ರಚಾರ ನಡೆಸಿದ್ದರು. ಆ ಪರಂಪರೆಯನ್ನು ಮಠದ ಉಸ್ತವಾರಿ ನಿರ್ವಹಿಸುತ್ತಿರುವ ಓಂಕಾರೇಶ್ವರ ಸ್ವಾಮೀಜಿ ಮುಂದುವರಿಸುವುದರ ಜತೆಗೆ ಭಕ್ತರ ಸಹಕಾರದಿಂದ ಮಠದ ಕಟ್ಟಡ ಹಾಗೂ ಪ್ರಾರ್ಥನಾ ಮಂದಿರ ನಿರ್ಮಾಣ ಮಾಡಿಸಿದ್ದಾರೆ. ಈ ಉತ್ತಮ ಕಾರ್ಯವನ್ನು ಮಾಡಲು ಗುರು ಪರಂಪರೆಯ ಮೇಲೆ ಗ್ರಾಮಸ್ಥರಿಗೆ ಇರುವ ಭಕ್ತಿಯ ಶ್ರದ್ಧೆ ಕಾಣಿಸುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮಠದ ಪ್ರಾರ್ಥನಾ ಮಂದಿರವನ್ನು ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ನೂತನ ಮಠದ ಕಟ್ಟಡವನ್ನು ಸೋಮನಹಳ್ಳಿ ವೀರ ಸಿಂಹಾಸನ ಶಿಲಾಮಠದ ಶ್ರೀ ಸಿದ್ಧಮಲ್ಲ ಸ್ವಾಮೀಜಿ ಉದ್ಘಾಟಿಸಿದರು.
ಬಿ.ಜಿ.ಪುರ ಹೊರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಮೈಸೂರು ಕುಂದೂರು ಮಠದ ಶರತ್‌ಚಂದ್ರ ಸ್ವಾಮೀಜಿ, ಶ್ರೀ ಎಂ.ಎಲ್.ಹುಂಡಿ ಮಠದ ಶ್ರೀ ಗೌರಿಶಂಕರ ಸ್ವಾಮೀಜಿ, ಮಹದೇಶ್ವರ ಬೆಟ್ಟ ಸಾಲೂರು ಬೃಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಬೆಂಗಳೂರು ಗುರುವಣ್ಣ ದೇವರ ಮಠದ ಶ್ರೀ ನಂಜುಂಡ ಸ್ವಾಮೀಜಿ, ಶ್ರೀ ನೀಲಕಂಠ ಸ್ವಾಮೀಜಿ ಮಠದ ಸಭಾ ಭವನದಲ್ಲಿ ನಿರ್ಮಿಸಲಾಗಿರುವ ವಿವಿಧ ದಾರ್ಶನಿಕರ ಪುತ್ಥಳಿ ಅನಾವರಣಗೊಳಿಸಿದರು.
ಮಾಜಿ ಸಚಿವ ಬಿ.ಸೋಮಶೇಖರ್, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ವಿವಿಧ ಮಠಾಧೀಶರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net