ಮಂಡ್ಯ: ನಗರದ ಗಾಂಧಿಭವನದಲ್ಲಿ ಜಿಲ್ಲಾ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದಿಂದ 170ನೇ ಆಧ್ಯಾತ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮನೆ ಮನೆಗೆ ಸೌಹಾರ್ದ ಬಸವ ಜ್ಯೋತಿ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಮುಡುಕನಪುರ ಮಠದ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ನಿಯಮಿತದ ಅಧ್ಯಕ್ಷ ಎಸ್.ನಾಗರಾಜು ಧಾರ್ಮಿಕ ನುಡಿಗಳನ್ನಾಡಿದರು. ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ವೀರಶೈವ ಸಮಾಜದ ಭಕ್ತರು ದೀಪವನ್ನು ಹಚ್ಚುವುದರ ಮೂಲಕ ಕಾರ್ಯಕ್ರಮವನ್ನು ಸಡಗರ ಸಂಭ್ರಮದಿಂದ ನಡೆಸಿದರು.
ನಿಯಮಿತದ ಉಪಾಧ್ಯಕ್ಷ ಡಿ.ದ್ಯಾವಣ್ಣ, ಹಿರಿಯ ಮುಖಂಡರಾದ ರುದ್ರಸ್ವಾಮಿ, ಮಹದೇವಸ್ವಾಮಿ, ಸತೀಶ, ಶಿವಕುಮಾರ್, ಮಹೇಶ್, ಮಧುಸೂದನ್, ಮಂಜು, ಎನ್.ಎಸ್.ದೇವರಾಜು, ದೇವನೂರು ಜಗದೀಶ್, ಕೆಂಪಯ್ಯ ಇತರರಿದ್ದರು. ಇದೇ ವೇಳೆ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.