ಮಳೆ ಬಂದು ರೈತಾಪಿ ವರ್ಗದ ಮೊಗದಲ್ಲಿ ಸಂತಸ ತರಲಿ ಎಂದು ಪ್ರಾರ್ಥಿಸಿ ತಾಲೂಕಿನ ಕೊಪ್ಪ ಹೋಬಳಿಯ ಗೊಲ್ಲರದೊಡ್ಡಿ ಗಾಮಸ್ಥರು ದೈತಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಶೋಕ್, ಚನ್ನಮ್ಮ, ಮುರಳಿ, ಮರಿಸ್ವಾಮಿ, ಸಂತೋಷ್, ನಾಗರಾಜು, ಉಮೇಶ್, ರಮೇಶ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಗೊಲ್ಲರದೊಡ್ಡಿ ಗ್ರಾಮದಲ್ಲಿ ಧಾರ್ಮಿಕ ಕೈಂಕರ್ಯ
ಮಳೆ ಸುರಿದು ಬೆಳೆ ಉಳಿಸಲು ಪ್ರಾರ್ಥನೆ
ಮದ್ದೂರು: ಮಳೆ ಬಂದು ರೈತಾಪಿ ವರ್ಗದ ಮೊಗದಲ್ಲಿ ಸಂತಸ ತರಲಿ, ಬರ ಹೋಗಿ ಸಮೃದ್ಧಿ ತರಲಿ ಎಂದು ಪ್ರಾರ್ಥಿಸಿ ತಾಲೂಕಿನ ಕೊಪ್ಪ ಹೋಬಳಿಯ ಗೊಲ್ಲರದೊಡ್ಡಿ ಗಾಮಸ್ಥರು ಬುಧವಾರ ದೈತಮ್ಮಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪ್ರಸಕ್ತ ಹಂಗಾಮಿನಲ್ಲಿ ಮಳೆ ಕ್ಷೀಣಿಸಿದೆ. ಕೆಆರ್‌ಎಸ್ ಅಣೆಕಟ್ಟೆಯಲ್ಲೂ ನೀರು ಖಾಲಿಯಾಗಿದೆ. ಕಳೆದ ವರ್ಷ ಈ ವೇಳೆಗೆ ಕಟ್ಟೆ ಸಂಪೂರ್ಣ ತುಂಬಿ ರೈತರ ಮೊಗದಲ್ಲಿ ಸಂತೋಷ ಮೂಡಿತ್ತು. ಆದರೆ, ಈ ಬಾರಿ ವರುಣ ಕೃಪೆ ತೋರಿಲ್ಲ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದರು.
ಮಳೆ ಬಾರದ ಕಾರಣ ರೈತರು ವರ್ಷ ಪೂರ್ತಿ ಕಷ್ಟ ಪಟ್ಟು ಬೆಳೆದ ಕಬ್ಬು, ಭತ್ತ, ರಾಗಿ, ರೇಷ್ಮೆ ಸೇರಿದಂತೆ ಇನ್ನಿತರ ಬೆಳೆಗಳು ಒಣಗುವ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಜನ ಜಾನುವಾರುಗಳು ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಮಳೆ ಬಂದು ರೈತರ ಮೊಗದಲ್ಲಿ ನಗು ತರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಮಳೆ ಬರಲಿ ಎಂಬ ಉದ್ದೇಶದಿಂದ ಗ್ರಾಮಸ್ಥರು ದೈತಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಿ ಕೋಳಿ ಹಾಗೂ ಹಂದಿ ಬಲಿ ನೀಡಿ, ಗ್ರಾಮದ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿ ತಂಬಿಟ್ಟಿನಾರತಿ ಮಾಡಿ ಮಳೆ ಬರುವಂತೆ ದೇವರಲ್ಲಿ ಮನವಿ ಮಾಡಿದರು.
ದೇವರಿಗೆ ಕೋಳಿ ಹಾಗೂ ಹಂದಿ ಬಲಿ ಕೊಡುವ ಜತೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಮೆರವಣಿಗೆ ಮಾಡಿ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ರೀತಿ ಮಾಡಿದರೆ ಉತ್ತಮ ಮಳೆ ಬಂದು ರೈತರಿಗೆ ದೇವಿ ಅನುಗ್ರಹಿಸುತ್ತಾಳೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.
ಪೂಜೆ ಕಾರ್ಯಕ್ರಮದ ನೇತೃತ್ವವನ್ನು ದೇಗುಲದ ಅರ್ಚಕರಾದ ಚನ್ನಮ್ಮ ವಹಿಸಿದ್ದರು. ಗ್ರಾಮದ ಮುಖಂಡರಾದ ಮುರಳಿ, ಮರಿಸ್ವಾಮಿ, ಸಂತೋಷ್, ನಾಗರಾಜು, ಉಮೇಶ್, ರಮೇಶ್, ಪುಟ್ಟತಾಯಮ್ಮ, ಭಾರತಿ, ವಿಜಿ, ಜ್ಯೋತಿ, ವಾಣಿ, ಗೌರಮ್ಮ ಸೇರಿದಂತೆ ಇತರರು ಹಾಜರಿದ್ದರು.