ಮತದಾರರಿಗೆ ಬಿಜೆಪಿ ಯೋಜನೆಗಳ ಅರಿವು ಮೂಡಿಸಿ

ಶ್ರೀರಂಗಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ಮಾತನಾಡಿದರು. ನಂದೀಶ್, ಮಂಜುನಾಥ್ ಇತರರು ಇದ್ದರು.
ಶ್ರೀರಂಗಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ಮಾತನಾಡಿದರು. ನಂದೀಶ್, ಮಂಜುನಾಥ್ ಇತರರು ಇದ್ದರು.
Published on
ಶ್ರೀರಂಗಪಟ್ಟಣ: ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ ನೀಡಿ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಫಲರಾದ ವಿಶ್ವನಾಯಕರಾಗಿದ್ದು, ಅವರ ಸೇವೆಗೆ ಕಾರ್ಯಕರ್ತರು ಸಾಮಾಜಿಕ ಸೇವೆಗಳ ಮೂಲಕ ಅಭಿನಂದಿಸಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ತಿಳಿಸಿದರು.
ಪಟ್ಟಣದ ಬಿಜೆಪಿ ಪಕ್ಷದ ಕಚೇರಿಯಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕರ್ತರ ವಿಶೇಷ ಸಂಘಟನಾ ಸಭೆ ಹಾಗೂ ಸ್ವಚ್ಛತಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ದೇಶವನ್ನು ಸುಭದ್ರತೆಯನ್ನಾಗಿಸುವಲ್ಲಿ ಮೋದಿ ಪಾತ್ರ ಅಪಾರ. ಸಾಮಾಜಿಕ, ಶೈಕ್ಷಣಿಕ ಹಾಗೂ ಸುಸ್ಥಿರ ಆರ್ಥಿಕತೆಯನ್ನು ಜನರಿಗೆ ನೀಡಿದ ಪ್ರಧಾನಿಯಾಗಿ ಗುರುತಿಸಿಕೊಂಡಿದ್ದಾರೆ. ದೇಶವಾಸಿಗಳಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೀಡಿರುವ ಯೋಜನೆಗಳನ್ನು ಬೂತ್ ಮಟ್ಟದ ಮತದಾರರಿಗೆ ಮನಮುಟ್ಟುವಂತೆ ಅರಿವು ಮೂಡಿಸಬೇಕು. ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡಲು ಪ್ರೋತ್ಸಾಹಿಸಬೇಕು. ಜತೆಗೆ ಪ್ರಧಾನಿ ತಾಯಿ ಸ್ಮರಣಾರ್ಥ 15 ದಿನಗಳ ಕಾಲ ಸ್ಥಳೀಯ ದೇವಾಲಯಗಳ ಸ್ವಚ್ಛತಾ ಆಂದೋಲನ, ಸಸಿಗಳ ನೆಡುವಿಕೆ, ಯೋಗಾಭ್ಯಾಸ ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಪಟ್ಟಣದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧೆಡೆ ಸ್ವಚ್ಛತಾ ಕಾರ್ಯದ ಜತೆಗೆ ಸಸಿ ನೆಡಲಾಯಿತು. ಪ್ರಧಾನ ಕಾರ್ಯದರ್ಶಿ ನಂದೀಶ್, ಜಿಲ್ಲಾ ಒಬಿಸಿ ಘಟಕಾ ಕಾರ್ಯದರ್ಶಿ ಮಂಜುನಾಥ್, ಕೊತ್ತತ್ತಿ ಹೋಬಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜೈಶಂಕರ್, ಪದಾಧಿಕಾರಿಗಳಾದ ಉಮೇಶ್ ಕುಮಾರ್, ಮಹಾಲಿಂಗು, ಮುಖಂಡರಾದ ಟೈಲರ್ ಮೋಹನ್, ಕಿರಣ್ ಕುಮಾರ್ ಸಿಂಗ್, ಮಹಿಳಾ ಮೋರ್ಚಾ ಸದಸ್ಯೆ ಶಕುಂತಲಾ, ಫಾತಿಮಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net