ತಾಲೂಕು ಯೋಜನಾಧಿಕಾರಿ ಹಾಲಪ್ಪ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳಲ್ಲಿ ವಾತ್ಸಲ್ಯ ಕಾರ್ಯಕ್ರಮವೂ ಒಂದು. ಇದು ಮಾತೃಶ್ರೀ ಅವರ ಪ್ರೀತಿಯ ಕಾರ್ಯಕ್ರಮವಾಗಿದ್ದು, ತನ್ನವರೆಂದು ಯಾರೂ ಇಲ್ಲದೆ, ದುಡಿದು ತಿನ್ನಲು ಅಸಹಾಯಕವಾದ ಜೀವಗಳಿಗೆ ಜೀವನ ನಿರ್ವಹಣೆಗಾಗಿ ಮಾಸಾಶನ ಸೌಲಭ್ಯವನ್ನು ನೀಡಿ ಮೂಲ ಸೌಕರ್ಯಗಳಿಂದ ವಂಚಿತರಾದ ಫಲಾನುಭವಿಗಳಿಗೆ ವಾತ್ಸಲ್ಯಮನೆ, ಬೆಳಕಿನ ವ್ಯವಸ್ಥೆಗಾಗಿ ಸೋಲಾರ್, ನೀರಿನ ವ್ಯವಸ್ಥೆ ಶೌಚಗೃಹ, ಸ್ನಾನಗೃಹ ಹೀಗೆ ಹಲವಾರು ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.