ಮಳವಳ್ಳಿ ಪಟ್ಟಣದ ರೋಟರಿ ಶಾಲೆಯಲ್ಲಿ ಆಯೋಜಿಸಿದ್ದ ಅಧ್ಯಕ್ಷ- ಕಾರ್ಯದರ್ಶಿ ಪದಗ್ರಹಣ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಆರೀಫ್ ಪಾಷ ಹಾಗೂ ಕಾರ್ಯದರ್ಶಿ ಟಿ.ಎಸ್.ಪ್ರಕಾಶ್ ಅವರನ್ನು ಅಭಿನಂದಿಸಲಾಯಿತು. ಮೊಹಮದ್ ಜಬಿ ಉಲ್ಲಾ, ಆರ್.ಜಿ.ಮಹದೇವಸ್ವಾಮಿ, ಅಕ್ಷರಾ ವೆಂಕಟೇಶ್, ಧರ್ಮರಾಜು, ಚಂದ್ರೇಶ್, ಎಂ.ಸಿ.ಶಿವಕುಮಾರ್, ಎಂ.ಜೆ.ಸುರೇಶ್, ಘನಶ್ಯಾಮ್ ದಾಸ್, ರಂಗಸ್ವಾಮಿ ಇದ್ದರು
ಮಳವಳ್ಳಿ;ರೋಟರಿ ಸಂಸ್ಥೆಯೂ ಅಮೂಲ್ಯವಾದ ಸೇವಾಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಜನ ಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುತ್ತಿದೆ ಎಂದು ನೂತನ ರೋಟರಿ ಅಧ್ಯಕ್ಷ ಮೊಹಮದ್ ಜಬೀ ಉಲ್ಲಾ ತಿಳಿಸಿದರು.
ಪಟ್ಟಣದ ರೋಟರಿ ಶಾಲೆಯಲ್ಲಿ ಭಾನುವಾರ ಸಂಜೆ ಹಮಿಕೊಂಡಿದ್ದ 2026-27 ಸಾಲಿನ ಅಧ್ಯಕ್ಷ- ಕಾರ್ಯದರ್ಶಿ ಪದಗ್ರಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಸಮಾಜದಲ್ಲಿನ ಹಿಂದುಳಿದ ಜನರ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣದ ಜತೆಗೆ ಆರೋಗ್ಯ, ಸ್ವಚ್ಛತೆಯ ಬಗ್ಗೆ ಯೋಜನೆಗಳನ್ನು ಹಮ್ಮಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.
ಇದೇ ವೇಳೆ ರೋ. ಆರ್.ಜಿ.ಮಹದೇವಸ್ವಾಮಿ ಕಾರ್ಯದರ್ಶಿಯಾಗಿ ಪದವಿ ಸ್ವೀಕರಿಸಿದರು.
ನಿಕಟಪೂರ್ವ ಅಧ್ಯಕ್ಷ ಆರೀಫ್ ಪಾಷ ಹಾಗೂ ಕಾರ್ಯದರ್ಶಿ ಟಿ.ಎಸ್.ಪ್ರಕಾಶ್ ಅವರನ್ನು ಅಭಿನಂದಿಸಲಾಯಿತು.
ಅಕ್ಷರಾ ವೆಂಕಟೇಶ್, ಧರ್ಮರಾಜು, ಚಂದ್ರೇಶ್, ಎಂ.ಸಿ.ಶಿವಕುಮಾರ್, ಎಂ.ಜೆ.ಸುರೇಶ್, ಘನಶ್ಯಾಮ್ ದಾಸ್, ರಂಗಸ್ವಾಮಿ ಇತರರು ಇದ್ದರು.