ಶಿಕ್ಷಣ ಚಿಂತಕ ಎಸ್.ಬಿ.ಶಂಕರಗೌಡ ಮಾತನಾಡಿ, ಜೆ.ಪಾಪೇಗೌಡರನ್ನು ಹತ್ತಿರದಿಂದ ನೋಡಿದ್ದೇನೆ. ಒಬ್ಬ ಒಳ್ಳೆಯ ಆಡಳಿತಗಾರ, ವೃತ್ತಿ ಕ್ಷೇತ್ರದಲ್ಲಿ ಶಿಸ್ತಿನಿಂದ ಮೌನವಾಗಿ ನಡೆದ ಉತ್ತಮ ವ್ಯಕ್ತಿ. ಪ್ರೊ.ಜಯಪ್ರಕಾಶಗೌಡ ಅವರು ಪಾಪೇಗೌಡರಿಂದ ಕಲಿಯಬೇಕಾದ ವಿಷಯಗಳು ಸಾಕಷ್ಟಿವೆ. ಏಕೆಂದರೆ ಪಾಪೇಗೌಡರನ್ನು ಆಯಾ ಕಾಲೇಜಿನ ಉಪನ್ಯಾಸಕರಾಗಲಿ ಅಥವಾ ಆಡಳಿತವರ್ಗವೇ ಇರಲಿ, ಅವರು ಬಂದರೆ ಮೌನವಾಗಿ ಗೌರವ ಸಲ್ಲಿಸುತ್ತಿದ್ದ ಸನ್ನಿವೇಶಗಳು ಹೆಚ್ಚಿದ್ದವು ಎಂದು ತಿಳಿಸಿದರು.