ದೇಶ ಕಂಡ ಅದ್ವಿತೀಯ ರಾಜಕಾರಣಿ ಎಸ್.ಎಂ.ಕೃಷ್ಣ

ಮದ್ದೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಂ.ಉದಯ್ ಅವರಿಗೆ ಎಸ್.ಎಂ.ಕೃಷ್ಣ ಆಡಳಿತ  ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ನಿಶ್ಚಲಾನಂದನಾಥಸ್ವಾಮೀಜಿ, ದಿನೇಶ್ ಗೂಳಿಗೌಡ, ಜಯಪ್ರಕಾಶ್ ಗೌಡ, ಪ್ರೊ.ಕೃಷ್ಣ, ತೈಲೂರು ವೆಂಕಟಕೃಷ್ಣ, ರವಿಕುಮಾರ್, ಶಂಕರಗೌಡ, ಕಂಠಿ ಸುರೇಶ್, ಎಂ.ಡಿ.ಮಹಾಲಿಂಗಯ್ಯ ಇದ್ದರು.
ಮದ್ದೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಂ.ಉದಯ್ ಅವರಿಗೆ ಎಸ್.ಎಂ.ಕೃಷ್ಣ ಆಡಳಿತ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ನಿಶ್ಚಲಾನಂದನಾಥಸ್ವಾಮೀಜಿ, ದಿನೇಶ್ ಗೂಳಿಗೌಡ, ಜಯಪ್ರಕಾಶ್ ಗೌಡ, ಪ್ರೊ.ಕೃಷ್ಣ, ತೈಲೂರು ವೆಂಕಟಕೃಷ್ಣ, ರವಿಕುಮಾರ್, ಶಂಕರಗೌಡ, ಕಂಠಿ ಸುರೇಶ್, ಎಂ.ಡಿ.ಮಹಾಲಿಂಗಯ್ಯ ಇದ್ದರು.
Published on
ಮದ್ದೂರು: ಮಾಜಿ ಮುಖ್ಯಮಂತ್ರಿ ದಿ.ಎಸ್.ಎಂ.ಕೃಷ್ಣ ಅವರು ಈ ನಾಡು, ದೇಶ ಕಂಡ ಅದ್ವಿತೀಯ ರಾಜಕಾರಣಿಯಾಗಿದ್ದರು. ಕೇಂದ್ರ ವಿದೇಶಾಂಗ ಸಚಿವರೂ ಆಗಿದ್ದ ಅವರಿಗೆ ಪ್ರಧಾನಿ ಸ್ಥಾನ ತಪ್ಪಿದ ನೋವು ಇಂದಿಗೂ ಕಾಡುತ್ತಿದೆ ಎಂದು ಕೆಂಗೇ ರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ಸರ್ಕಾರಿ ಮಹಿಳಾ ಕಾಲೇಜಿನ ಆವರಣದಲ್ಲಿ ಬುಧವಾರ ಚುಂಚಶ್ರೀ ಗೆಳೆಯರ ಬಳಗ, ನಾಡಪ್ರಭು ಕೆಂಪೇಗೌಡರ ಒಕ್ಕಲಿಗರ ಸಂಘದ ವತಿಯಿಂದ ನಡೆದ ಎಸ್.ಎಂ.ಕೃಷ್ಣ ಅವರ 94ನೇ ಜನ್ಮ ದಿನೋತ್ಸವ ಮತ್ತು ಸಂಸ್ಮರಣೆ ಹಾಗೂ ಎಸ್.ಎಂ.ಕೃಷ್ಣ ಆಡಳಿತ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಎಸ್.ಎಂ.ಕೃಷ್ಣ ಅವರು ಬೆಂಗಳೂರನ್ನು ಜಾಗತಿಕ, ಆರ್ಥಿಕವಾಗಿ ಹೆಚ್ಚು ಬಲಿಷ್ಠಗೊಳಿಸಿದವರು. ರಾಜ್ಯ, ದೇಶ ಅಷ್ಟೇ ಅಲ್ಲದೆ ದೇಶದಾಚೆಗೂ ಜ್ಞಾನ ಹಾಗೂ ಆಡಳಿತ ವೈಖರಿಯಿಂದ ಹೆಸರು ಗಳಿಸಿದ್ದರು. ಅವರ ಕೀರ್ತಿ ಹಾಗೂ ಆಡಳಿತದಲ್ಲಿನ ಸಾಧನೆಗಳನ್ನು ನೆನಪಿನಲ್ಲಿಡುವ ನಿಟ್ಟಿನಲ್ಲಿ ಚುಂಚಶ್ರೀ ಗೆಳೆಯರ ಬಳಗದ ವತಿಯಿಂದ ಕೊಡಮಾಡುವ ಎಸ್.ಎಂ.ಕೃಷ್ಣ ಆಡಳಿತ ಸೇವಾ ರತ್ನ ಪ್ರಶಸ್ತಿಯನ್ನು ಅತ್ಯಂತ ಕ್ರಿಯಾಶೀಲ ಶಾಸಕರೆಂದು ಹೆಸರು ಗಳಿಸಿರುವ ಕೆ.ಎಂ.ಉದಯ್ ಅವರಿಗೆ ನೀಡುತ್ತಿರುವುದು ಪ್ರಶಂಶನೀಯವೆಂದರು.
ಮುಂದಿನ ನ.1ರೊಳಗೆ ದಿ.ಎಸ್.ಎಂ.ಕೃಷ್ಣ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಜ್ಯ ಸರ್ಕಾರವು ನೀಡಬೇಕು. ಈ ದಿಸೆಯಲ್ಲಿ ಮದ್ದೂರಿನ ಶಾಸಕರು ಸರ್ಕಾರದ ಗಮನ ಸೆಳೆಯಬೇಕು ಹಾಗೂ ಅವರ ಪ್ರತಿಮೆಯನ್ನು ವಿಧಾನಸೌಧ ಅಥವಾ ವಿಕಾಸ ಸೌಧದ ಎದುರು ನಿರ್ಮಿಸುವಂತಾಗಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ದಿ.ಎಸ್.ಎಂ.ಕೃಷ್ಣ ಅವರು ಮಂಡ್ಯ ಜಿಲ್ಲೆಯು ಕಂಡ ಮಹಾನ್ ನಾಯಕರಾಗಿದ್ದು, ಪ್ರಧಾನಮಂತ್ರಿ ಸ್ಥಾನವನ್ನು ಬಿಟ್ಟರೆ ಮುಖ್ಯಮಂತ್ರಿಗಳಾಗಿ, ರಾಜ್ಯಸಭಾ ಸದಸ್ಯ, ಲೋಕಸಭಾ ಸದಸ್ಯರಾಗಿ, ವಿದೇಶಾಂಗ ಸಚಿವರಾಗಿ ಅಜಾತ ಶತ್ರು ಎನಿಸಿಕೊಂಡವರು. ಮುಖ್ಯಮಂತ್ರಿಗಳಾಗಿದ್ದಾಗ ನೀರಾವರಿ, ಕೈಗಾರಿಕಾ ಕ್ಷೇತ್ರ ಸೇರಿದಂತೆ ಬೆಂಗಳೂರಿನಲ್ಲಿ ಐಟಿ, ಬಿಟಿ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ, ರಾಜ್ಯದಲ್ಲಿ ಮೊದಲ ಬಾರಿಗೆ ಪಹಣಿ, ಯಶಸ್ವಿನಿ ಯೋಜನೆ ಜಾರಿ, ಮೈಸೂರು-ಬೆಂಗಳೂರು ಹೆದ್ದಾರಿಯ ಆಧುನೀಕರಣ, ತವರು ಕ್ಷೇತ್ರವಾದ ಮದ್ದೂರಿನ ಅಭಿವೃದ್ಧಿಗೂ ಹೆಚ್ಚು ಅನುದಾನ ನೀಡುವುದರ ಮೂಲಕ ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡ, ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಹತ್ತು ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದರು.
ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಮೂಲಕ ಬಡವರ ಹಾಗೂ ನೊಂದವರಿಗೆ ಸಹಾಯಗಳನ್ನು ಮಾಡುತ್ತಾ ನಂತರ ನವ ಮದ್ದೂರಿನ ಕನಸನ್ನು ಕಾಣುತ್ತಿರುವ ಶಾಸಕರು ಕೆಮ್ಮಣ್ಣು ನಾಲಾ ಅಭಿವೃದ್ಧಿ, ಸೂಳೆಕೆರೆ ಅಭಿವೃದ್ಧಿ, ನಗರದ ಪೇಟೆ ಬೀದಿಯ ಆಗಲೀಕರಣ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಎಸ್.ಎಂ.ಕೃಷ್ಣ ಅವರ ಹಾದಿಯಲ್ಲೇ ಅಭಿವೃದ್ಧಿ ಪಥದಲ್ಲಿ ಸಾಗಿದ್ದಾರೆ ಎಂದರು.
ಎಸ್.ಎಂ.ಕೃಷ್ಣ ಆಡಳಿತ ಸೇವಾ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿ ಶಾಸಕ ಕೆ.ಎಂ.ಉದಯ್ ಮಾತನಾಡಿ, ಎಸ್.ಎಂ.ಕೃಷ್ಣ ಅವರು ಪ್ರಧಾನಿಯಾಗಿದ್ದರೆ ಅಭಿವೃದ್ಧಿಯ ವಿಷಯದಲ್ಲಿ ಕನಿಷ್ಠ 20 ವರ್ಷವಾದರೂ ದೇಶ ಮುಂದೆ ಹೋಗುತ್ತಿತ್ತು. ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಪಡೆದಿರುವುದರಿಂದ ನನಗೆ ಇನ್ನಷ್ಟು ಜವಾಬ್ದಾರಿ ಹೆಚ್ಚಾಗಿದೆ. ಎಸ್.ಎಂ.ಕೃಷ್ಣ ಅವರು ಮಿತವಾಗಿ ಮಾತನಾಡಿ, ಹೆಚ್ಚು ಸಾಧನೆಯನ್ನು ಮಾಡುತ್ತಿದ್ದರು, ಅವರ ಮೇರು ವ್ಯಕ್ತಿತ್ವಕ್ಕೆ ಅವರೇ ಸಾಟಿ. ಅವರ ಶಿಸ್ತು, ಸಮಯಪ್ರಜ್ಞೆಯನ್ನು ನಾವುಗಳು ಅನುಸರಿಸಬೇಕು, ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ನಾನು ಶಾಸಕನ್ನಾಗಿದ್ದೇನೆ ಎಂಬುದೇ ನನಗೆ ಹೆಮ್ಮೆ ಎಂದರು.
ಮದ್ದೂರಿನ ತಾಲೂಕಿನ ಚುನಾಯಿತ ಜನಪ್ರತಿನಿಧಿಗಳು ಹಾಗೂ ಶಿಕ್ಷಣದ ಮುನ್ನೋಟ ಗ್ರಂಥವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಚುಂಚಶ್ರೀ ಗೆಳೆಯರ ಬಳಗದ ಅಧ್ಯಕ್ಷ ಪ್ರೊ.ಕೃಷ್ಣ, ಹಿರಿಯ ಸಾಹಿತಿಗಳಾದ ಜಯಪ್ರಕಾಶ್ ಗೌಡ, ತೈಲೂರು ವೆಂಕಟಕೃಷ್ಣ, ಮಂಡ್ಯದ ನಿವೃತ್ತ ಪ್ರಾಂಶುಪಾಲ ಶಂಕರಗೌಡ, ಜಿ.ಪಂ.ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಕೆಂಪೇಗೌಡರ ಒಕ್ಕಲಿಗರ ಸಂಘದ ಅಧ್ಯಕ್ಷ ರವಿಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net