ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಹಂಚಿಕೆ: ಆದ್ಯತೆ ಮೇರೆಗೆ ಸಂಸ್ಥೆಗಳಿಗೆ ಅವಕಾಶ

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಕಚೇರಿ ಹೊರನೋಟ.
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಕಚೇರಿ ಹೊರನೋಟ.
Published on

ಪ್ರಮುಖ ಮುಖ್ಯಾಂಶಗಳು

  • ಮುಡಾದಿಂದ ನಿವೇಶನ ಹಂಚಿಕೆ
  • ಮಾರುಕಟ್ಟೆ ಬೆಲೆಯ ಶೇ.50ರಷ್ಟು ದರ ನಿಗದಿ
  • ಸರ್ಕಾರಿ ಕಚೇರಿ, ನಿಗಮ ಮಂಡಳಿ, ಕನ್ನಡ ಶೈಕ್ಷಣಿಕ ಸಂಸ್ಥೆ, ಅಂಗವಿಕಲರ ಸಂಸ್ಥೆ, ವೃದ್ದಾಶ್ರಮಕ್ಕೆ ಆದ್ಯತೆ
ಮಂಡ್ಯ: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ವಿವೇಕಾನಂದನಗರ, ಸಾತನೂರು ಬಡಾವಣೆ ಹಾಗೂ ಖಾಸಗಿ ವಸತಿ ವಿನ್ಯಾಸಗಳಲ್ಲಿ ನಾಗರಿಕ ಸೌಲಭ್ಯಕ್ಕಾಗಿ ಮೀಸಲಿಟ್ಟ ನಿವೇಶನಗಳು ಹಂಚಿಕೆಯಾಗಿ ಲಭ್ಯವಿರುವ ನಿವೇಶನಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿ, ನಿಗಮ ಮಂಡಳಿ, ಶೈಕ್ಷಣಿಕ ಸಂಸ್ಥೆ, ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ಹಾಗೂ ವೃದ್ಧಾಶ್ರಮ, ನೋಂದಾಯಿತ ಇತರೆ ಸಂಘ ಸಂಸ್ಥೆಗಳಿಗೆ ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಸರ್ಕಾರಿ ಕಚೇರಿ, ನಿಗಮ ಮಂಡಳಿ, ಶೈಕ್ಷಣಿಕ ಸಂಸ್ಥೆ(ಕನ್ನಡ ಮಾಧ್ಯಮಕ್ಕೆ ಮಾತ್ರ), ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ಹಾಗೂ ವೃದ್ಧಾಶ್ರಮಕ್ಕೆ ಆದ್ಯತೆ ಮೇರೆಗೆ ಸರ್ಕಾರದ ಆದೇಶದಂತೆ ಮಾರುಕಟ್ಟೆಯ ಬೆಲೆಯ ಶೇ.50ರ ದರದಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು. ಇತರೆ ಸಂಘ ಸಂಸ್ಥೆ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಸರ್ಕಾರ ನಿಗದಿಪಡಿಸಿರುವ ಮಾರುಕಟ್ಟೆ ದರದಂತೆ ಹಂಚಿಕೆ ಮಾಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸೇರಿದ ಸಂಘ ಸಂಸ್ಥೆಗಳಿಗೆ ಸರ್ಕಾರದ ನಿಯಮಗಳಂತೆ ಮೀಸಲಾತಿ ಆಧಾರದ ಮೇಲೆ ಹಂಚಿಕೆ ಮಾಡಲಾಗುವುದು.
ನಗರಾಭಿವೃದ್ಧಿ ಪ್ರಾಧಿಕಾರಗಳ ನಾಗರಿಕ ಸೌಲಭ್ಯ ನಿವೇಶನಗಳ ಹಂಚಿಕೆ ನಿಯಮಗಳು 1991 ರ ರೀತ್ಯಾ 30 ವರ್ಷದ ಗುತ್ತಿಗೆ ಒಪ್ಪಂದದ ಮೇರೆಗೆ ನಿವೇಶನ ಹಂಚಿಕೆ ಮಾಡಲಾಗುವುದು. ಆಸಕ್ತರು ಜ.24ರಂದು ಸಂಜೆ 5.30ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದು. ನಿವೇಶನಗಳ ಸ್ಥಳ, ಅಳತೆ, ಮತ್ತಿತ್ತರ ಹೆಚ್ಚಿನ ವಿವರಗಳನ್ನು ಮುಡಾದಿಂದ ಪಡೆದುಕೊಳ್ಳಬಹುದೆಂದು ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net