ಸೀತಾರಾಮರ ಉಯ್ಯಲೋತ್ಸವ

ಕಿಕ್ಕೇರಿಯ ವಿಪ್ರ ಬಾಂಧವ ಸೇವಾ ಸಮಿತಿಯಿಂದ ಶನಿವಾರ ಶ್ರೀಸೀತಾರಾಮರ ಉಯ್ಯಲೋತ್ಸವ ಜರುಗಿತು.
ಕಿಕ್ಕೇರಿಯ ವಿಪ್ರ ಬಾಂಧವ ಸೇವಾ ಸಮಿತಿಯಿಂದ ಶನಿವಾರ ಶ್ರೀಸೀತಾರಾಮರ ಉಯ್ಯಲೋತ್ಸವ ಜರುಗಿತು.
Published on
ಕಿಕ್ಕೇರಿ: ಶ್ರೀ ಸೀತಾರಾಮರ ಉಯ್ಯಲೋತ್ಸವ ಇಲ್ಲಿನ ವಿಪ್ರ ಬಾಂಧವ ಸೇವಾ ಸಮಿತಿಯಿಂದ ಶನಿವಾರ ನೆರವೇರಿತು.
ಹೋಬಳಿಯ ವಿವಿಧೆಡೆಯಿಂದ ಅಧಿಕವಾಗಿ ಭಾಗವಹಿಸಿದ್ದ ವಿಪ್ರ ವೃಂದದವರು ಪಟ್ಟಾಭಿ ಶ್ರೀ ಸೀತಾರಾಮರ ಮೆರವಣಿಗೆಯನ್ನು ಸುಬ್ಬರಾಯ ಛತ್ರದ ಬೀದಿ ಹಾಗೂ ಬ್ರಹ್ಮೇಶ್ವರ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.
ತೊಟ್ಟಿಲು ಕಟ್ಟಿ ವಿವಿಧ ವರ್ಣದ ಸೀರೆ, ಹೂವುಗಳಿಂದ ಅಲಂಕರಿಸಲಾಗಿತ್ತು. ಸೀತಾರಾಮರ ಮೂರ್ತಿಗಳನ್ನು ತೊಟ್ಟಿಲಿನಲ್ಲಿ ಇರಿಸಿ ಜೋಗುಳ ತೂಗಲಾಯಿತು.
ಕೆ.ಬಿ. ವೆಂಕಟೇಶ್, ಅನಂತಸ್ವಾಮಿ, ರಾಮು, ಮಹಬಲರಾವ್, ಮಹಬಲಶರ್ಮ, ಗಣೇಶ್‌ರಾವ್, ಪ್ರಭಾಕರ್, ರಾಮಣ್ಣ ಮಾಸ್ಟರ್, ಚಂದ್ರಶೇಖರಯ್ಯ, ನರಸಿಂಹ, ಸೀತಾರಾಮು, ರಾಂಪ್ರಸಾದ್, ಶ್ರೀಹರಿ, ಅದಿತ್ಯ ಭಾರದ್ವಾಜ್, ಭಾಗ್ಯಮ್ಮಾ, ಹೇಮಾ, ಸುಮಾ, ಮೇಘಾಶ್ರೀ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net