ಸೀತಾರಾಮ ಕಲ್ಯಾಣೋತ್ಸವವ

ಕಿಕ್ಕೇರಿಯಲ್ಲಿ ವಿಪ್ರ ಬಾಂಧವ ಸೇವಾ ಸಮಿತಿ ವತಿಯಿಂದ ಶುಕ್ರವಾರ ಸೀತಾರಾಮ ಕಲ್ಯಾಣ ಮಹೋತ್ಸವದಲ್ಲಿ ವಿವಿಧ ಫಲತಾಂಬೂಲವನ್ನು ಹಿಡಿದು ಕಲ್ಯಾಣೋತ್ಸವಕ್ಕೆ ಸಾಗುತ್ತಿರುವ ವಿಪ್ರ ವೃಂದದವರು.
ಕಿಕ್ಕೇರಿಯಲ್ಲಿ ವಿಪ್ರ ಬಾಂಧವ ಸೇವಾ ಸಮಿತಿ ವತಿಯಿಂದ ಶುಕ್ರವಾರ ಸೀತಾರಾಮ ಕಲ್ಯಾಣ ಮಹೋತ್ಸವದಲ್ಲಿ ವಿವಿಧ ಫಲತಾಂಬೂಲವನ್ನು ಹಿಡಿದು ಕಲ್ಯಾಣೋತ್ಸವಕ್ಕೆ ಸಾಗುತ್ತಿರುವ ವಿಪ್ರ ವೃಂದದವರು.
Published on
ಕಿಕ್ಕೇರಿ: ಜಗದ ಕಲ್ಯಾಣ, ಶಾಂತಿ, ಸಮೃದ್ಧಿಗಾಗಿ ಇಲ್ಲಿನ ಸುಬ್ಬರಾಯ ಛತ್ರದಲ್ಲಿ ವಿಪ್ರ ಬಾಂಧವ ಸೇವಾ ಸಮಿತಿಯವರು ಶುಕ್ರವಾರ ಸೀತಾರಾಮ ಕಲ್ಯಾಣೋತ್ಸವವನ್ನು ಹಮ್ಮಿಕೊಂಡಿದ್ದರು.
ವೇದಬ್ರಹ್ಮ ಅನಿಲ್‌ಶಾಸ್ತ್ರಿ, ಗೌರಿಶಂಕರ್ ಪೌರೋಹಿತ್ವದಲ್ಲಿ ಜರುಗಿದ ಸೀತಾರಾಮ ಕಲ್ಯಾಣಕ್ಕೆ ಹೋಬಳಿಯ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು.
ಸೀತಾರಾಮರ ಮೂರ್ತಿಗಳನ್ನು ಮಂಗಳವಾದ್ಯದೊಂದಿಗೆ ಮೆರವಣಿಗೆ ಮೂಲಕ ಮದುವೆ ಮಂಟಪಕ್ಕೆ ತರಲಾಯಿತು. ವೇದಘೋಷ ಪಠಣೆ ಮಾಡಿ ಸೀತಾರಾಮರ ಮೂರ್ತಿಗಳನ್ನು ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಕಲ್ಯಾಣೋತ್ಸವದ ಸೇವಾರ್ಥದಾರರಾದ ಗೀತಾ ನಾರಾಯಣಮೂರ್ತಿ ಕುಟುಂಬದವರು ವಧು ವರರಾದ ಸೀತೆ, ರಾಮದೇವರ ಪರವಾಗಿ ವಿವಿಧ ಮಂಗಳ ಶಾಸ್ತ್ರದಲ್ಲಿ ಭಾಗಿಯಾಗಿದ್ದರು.
ಮಹಾಗಣಪತಿ ಪೂಜೆ, ಅಂಕುರಾರ್ಪಣೆ, ದೇವತಾನಾಂದಿ, ನವಗ್ರಹ ಪೂಜೆ, ಕಳಸಸ್ಥಾಪನೆಯೊಂದಿಗೆ ಮಾಂಗಲ್ಯಧಾರಣೆ ಜರುಗಿತು.
ಸಮಿತಿಯ ನಿರ್ದೇಶಕರು, ವಿಪ್ರ ವೃಂದದ ಗಣ್ಯರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net