ತಾಲೂಕಿನಾದ್ಯಂತ ಎಸ್‌ಐಆರ್ ಪ್ರಕ್ರಿಯೆಗೆ ಚಾಲನೆ

ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದಲ್ಲಿ ಬುಧವಾರ ಸ್ಥಳೀಯ ರಾಜಕೀಯ ಮುಖಂಡರ ಸಮ್ಮುಖದಲ್ಲಿ ಬಿಎಲ್‌ಒಗಳು ಮತದಾರರಿಗೆ ಎಸ್‌ಐಆರ್ ಅರ್ಜಿ ವಿತರಣೆ ಮಾಡುವ ಕಾರ್ಯ ನಡೆಯಿತು.
ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದಲ್ಲಿ ಬುಧವಾರ ಸ್ಥಳೀಯ ರಾಜಕೀಯ ಮುಖಂಡರ ಸಮ್ಮುಖದಲ್ಲಿ ಬಿಎಲ್‌ಒಗಳು ಮತದಾರರಿಗೆ ಎಸ್‌ಐಆರ್ ಅರ್ಜಿ ವಿತರಣೆ ಮಾಡುವ ಕಾರ್ಯ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಮೊದಲ ದಿನವೇ 5200 ಅರ್ಜಿ ವಿತರಣೆ
ಮಳವಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಜೂ.30ರಿಂದ ಪ್ರಾರಂಭವಾಗಿರುವ ಚುನಾವಣಾ ಆಯೋಗದ (ಎಸ್‌ಐಆರ್) ಮತದಾರ ಪರಿಷ್ಕರಣೆ ಪ್ರಕ್ರಿಯೆ ಯಾವುದೇ ಗೊಂದಲಗಳಿಲ್ಲದೇ ಯಶಸ್ವಿಯಾಗಿ ಚಾಲನೆ ದೊರೆತಿದೆ.
ತಾಲೂಕಿನ ವ್ಯಾಪ್ತಿಯಲ್ಲಿರುವ 259 ಸಾವಿರ ಮತದಾರರ ಅಧಿಕೃತ ದೃಢಿಕರಣ ಕಾರ್ಯಕ್ಕೆ 27 ಸೂಪರ್ ವೆಸರ್ ಹಾಗೂ 272 ಬಿಎಲ್‌ಒ ಗಳ ತಂಡ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ತಾಲೂಕಿನ 39 ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ಮತ್ತು ಆರ್‌ಐ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸಹಕಾರ ಪಡೆದುಕೊಳ್ಳಲಾಗುತ್ತಿದೆ. ಜೂ.30ರಿಂದ ಜು.29ರವರೆಗೆ ಮತದಾರರ ದೃಢಿಕರಣ ಕಾರ್ಯಾಚರಣೆ ನಡೆಯಲಿದ್ದು, ಎಸ್‌ಐಆರ್ ಪ್ರಕ್ರಿಯೆ ಗೆ ಚಾಲನೆ ದೊರೆತ ಮೊದಲ ದಿನವೇ 5200 ಅರ್ಜಿಗಳನ್ನು ವಿತರಣೆ ಮಾಡಲಾಗಿದೆ. ಪ್ರತಿ ಮನೆಗಳ ಬಳಿ ಬಿಎಲ್‌ಒಗಳ ಜತೆಗೆ ಸ್ಥಳೀಯ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತ ಮುಖಂಡರುಗಳು ತೆರಳಿ ಕುಟುಂಬಗಳ ಮಾಹಿತಿಗಳನ್ನು ಸ್ಪಷ್ಟಪಡಿಸಿಕೊಂಡು ಅರ್ಜಿಗಳನ್ನು ವಿಲೆವಾರಿ ಮಾಡಲಾಗುತ್ತಿದೆ. ಯಾವುದೇ ಗೊಂದಲಗಳಿಲ್ಲದೇ ಎಸ್‌ಐಆರ್ ತಾಲೂಕಿನಾದ್ಯಂತ ಮೊದಲ ದಿನದ ಯಶಸಿನೊಡನೆ ಎರಡನೆ ದಿನ ಪ್ರಕ್ರಿಯೆ ನಡೆಯುತ್ತಿದೆ.
ಎಸ್‌ಐಆರ್ ಕಾರ್ಯಕ್ಕೆ ಪೂರ್ವಸಿದ್ಧ್ದತೆ ಹಾಗೂ ಬಿಎಲ್‌ಒಗಳು ಮತ್ತು ಮೇಲುಸ್ತುವಾರಿ ಸೂಪರ್‌ವೇಸರ್‌ಗಳಿಗೆ ಪೂರಕ ತರಬೇತಿ ನೀಡುವುದರ ಜತೆಗೆ ಎಲ್ಲ ರಾಜಕೀಯ ಪಕ್ಷಗಳ ಕಾರ್ಯಕರ್ತರ ಸಭೆಗಳನ್ನು ನಡೆಸುವ ಮೂಲಕ ಸ್ಪಷ್ಟ ಮಾಹಿತಿಯ ಜತೆಗೆ ಜಾಗೃತಿ ಮೂಡಿಸಲಾಗಿದೆ. ಈ ಹಿನ್ನೆಲೆ ಮೊದಲ ದಿನ 5200 ಅರ್ಜಿಗಳನ್ನು ವಿತರಣೆ ಮಾಡಲಾಗಿದೆ. ಈ ಪ್ರಕ್ರಿಯೆಗೆ ಜೂ.29 ಕೊನೆಯ ದಿನವಾಗಿದ್ದು, ಯಾವುದೇ ಗೊಂದಲವಿಲ್ಲಕ್ಕೆ ಒಳಗಾಗದೇ ಮತದಾರ ಪಟ್ಟಿಯಲ್ಲಿರುವ ತಾಲೂಕಿನ ಎಲ್ಲ ಮತದಾರರು ಜವಬ್ದಾರಿಯುತವಾಗಿ ಬಿಎಲ್‌ಒ ಗಳಿಗೆ ಮಾಹಿತಿ ನೀಡುವ ಮೂಲಕ ಎಸ್‌ಐಆರ್ ಯಶಸ್ವಿಗೆ ಸಹಕರಿಸುವಂತೆ ಮಳವಳ್ಳಿ ತಹಸೀಲ್ದಾರ್ ಡಾ.ಎಸ್.ವಿ.ಲೋಕೇಶ್ ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net