ದೇಶ ಕಂಡ ಅಪರೂಪ ಜ್ಞಾನಿ ಸರ್ ಎಂ.ವಿ

ಕಿಕ್ಕೇರಿಯಲ್ಲಿ ಸ್ಪಂದನಾ ಫೌಂಡೇಷನ್, ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಇತ್ತೀಚೆಗೆ ಸರ್ ಎಂ.ವಿಶ್ವೇಶ್ವರಯ್ಯ ಜನ್ಮ ದಿನ ಆಚರಿಸಲಾಯಿತು. ಡಾ. ಕಿಕ್ಕೇರಿ ಕೃಷ್ಣಮೂರ್ತಿ, ತ್ರಿವೇಣಿ, ಕವಿತಾ, ಮೇಘನಾ ಇದ್ದರು.
ಕಿಕ್ಕೇರಿಯಲ್ಲಿ ಸ್ಪಂದನಾ ಫೌಂಡೇಷನ್, ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಇತ್ತೀಚೆಗೆ ಸರ್ ಎಂ.ವಿಶ್ವೇಶ್ವರಯ್ಯ ಜನ್ಮ ದಿನ ಆಚರಿಸಲಾಯಿತು. ಡಾ. ಕಿಕ್ಕೇರಿ ಕೃಷ್ಣಮೂರ್ತಿ, ತ್ರಿವೇಣಿ, ಕವಿತಾ, ಮೇಘನಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಕಿಕ್ಕೇರಿ ಕೃಷ್ಣಮೂರ್ತಿ ಬಣ್ಣನೆ
ಕಿಕ್ಕೇರಿ : ನಾಡು ಕಂಡ ಅಪರೂಪದ ಜ್ಞಾನಿಯಲ್ಲಿ ಬಲು ದೊಡ್ಡ ವಿಜ್ಞಾನಿಯಾಗಿ ನಾಡಿನ ಕೀರ್ತಿ ಬೆಳಗಿ ವಿಶ್ವಮಾನ್ಯ ಮಾಡಿದವರು ಸರ್ ಎಂ.ವಿ.ವಿಶ್ವೇಶ್ವರಯ್ಯ ಎಂದು ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.
ಇಲ್ಲಿನ ಸ್ಪಂದನಾ ಫೌಂಡೇಷನ್, ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಇತ್ತೀಚೆಗೆ ಆಯೋಜಿಸಿದ್ದ ಸರ್ ಎಂ.ವಿಶ್ವೇಶ್ವರಯ್ಯ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಡಿಗೆ ಪ್ರಥಮಗಳನ್ನು ನೀಡಿದ ಅಸಾಮಾನ್ಯ ಚೇತನ ವಿಶ್ವೇಶ್ವರಯ್ಯ. ಬಡತನದಲ್ಲಿ ಹುಟ್ಟಿ ಶ್ರೇಷ್ಠ ಜ್ಞಾನಿಯಾಗಿ ಮೈಸೂರು ಸಂಸ್ಥಾನದ ದಿವಾನರಾಗಿ ನೀರು, ಬೆಳಕು, ಉದ್ಯೋಗ ನೀಡಿದ ಮಹಾನ್ ಚೇತನ. ದೇಶದಲ್ಲಿ ಪ್ರಪ್ರಥಮವಾಗಿ ಶಿವನಸಮುದ್ರದಲ್ಲಿ ವಿದ್ಯುಚ್ಛಕ್ತಿ ಕೇಂದ್ರ ಸ್ಥಾಪಿಸಿ ಬೆಂಗಳೂರಿಗೆ ಬೆಳಕು ನೀಡಿದರು. ಬೆಂಗಾಡಾಗಿದ್ದ ಮಂಡ್ಯ ಜಿಲ್ಲೆಯನ್ನು ಹಸಿರಾಗಿಸಲು ಕನ್ನಂಬಾಡಿ ಅಣೆಕಟ್ಟೆಯನ್ನು ನಿರ್ಮಿಸಿದರು. ಇವರ ಅವಧಿಯಲ್ಲಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ಸ್ಯಾಂಡಲ್ ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮೈಸೂರು ವಿಶ್ವವಿದ್ಯಾಲಯ ಮೊದಲಾದ ಸಾಮಾಜಿಕ ಕೊಡುಗೆ ನಾಡಿಗೆ ನೀಡಿ ಎಲ್ಲರ ಬದುಕಿನ ಜೀವಾತ್ಮರಾಗಿದ್ದಾರೆ ಎಂದರು.
ಟ್ರಸ್ಟ್ ಸದಸ್ಯೆ ತ್ರಿವೇಣಿ ಮಾತನಾಡಿ, ಸರ್ ಎಂವಿ ಶ್ರೇಷ್ಠ ಸಿವಿಲ್ ಇಂಜಿನಿಯರ್, ರಾಜ್ಯಶಾಸ್ತ್ರಜ್ಞ ಮತ್ತು ಆಧುನಿಕ ಮೈಸೂರಿನ ನಿರ್ಮಾತೃ ಎಂದೇ ಖ್ಯಾತರಾದವರು. ಇವರ ಹುಟ್ಟಿದ ದಿನವನ್ನು ಇಂಜಿನಿಯರ್ ದಿನವಾಗಿ ಆಚರಿಸುತ್ತಿರುವುದು ನಾಡಿಗೆ ಸಂದ ಬಲು ದೊಡ್ಡ ಗೌರವ ಆಗಿದೆ. ಇವರ ಸರಳ ಬದುಕು, ಎತ್ತರವಾದ ಚಿಂತನೆ ಭವಿಷ್ಯದ ಮಕ್ಕಳಿಗೆ ತುಂಬುವ ಕೆಲಸ ಸಾಂಕವಾಗಿ ಆಗಬೇಕಿದೆ ಎಂದು ನುಡಿದರು.
ಸರ್ ಎಂವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೀತನಮನದ ಮೂಲಕ ಸ್ಮರಿಸಲಾಯಿತು. ಕವಿತಾ, ಮೇಘನಾ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net