MLA K.M. Uday performed the groundbreaking ceremony for a drainage development project in the Scheduled Caste colony of Karkahalli village. A.S. Rajiv, Harish Babu, and others were present.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
Siddaramaiah's
ಕೆ.ಎಂ.ದೊಡ್ಡಿ: ಮಾಜಿ ಸಿಎಂ ಸಿದ್ದರಾಮಯ್ಯ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದಿರುವುದು ಅಂತಿಮವಲ್ಲ. ಅಭಿಮಾನಿಗಳು, ಕಾರ್ಯಕರ್ತರು ಒತ್ತಡ ಹೇರಿದಾಗ ಸ್ಪರ್ಧೆ ಮಾಡಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ಸಮೀಪದ ಕಾರ್ಕಹಳ್ಳಿ ಗ್ರಾಮದಲ್ಲಿ ಪರಿಶಿಷ್ಠ ಜಾತಿ ಕಾಲೋನಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಬಲಿಷ್ಠ ರಾಜಕಾರಣಿಯಾಗಿದ್ದು, ಅವರು ಸಕ್ರಿಯ ರಾಜಕೀಯದಲ್ಲಿರುತ್ತಾರೆ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದರು.
ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಲ್ಲ ಎಂದಿರುವ ಅವರು ಸಕ್ರಿಯವಾಗಿ ರಾಜಕಾರಣದಲ್ಲಿ ಇರುತ್ತೇನೆ ಎಂದಿದ್ದಾರೆ. ಹೀಗಾಗಿ ಅವರ ಹೇಳಿಕೆ ಅಂತಿಮ ನಿರ್ಧಾರವಾಗಲ್ಲ. ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಬಯಸಿದರೆ ಅವರು ಸ್ಪರ್ಧೆ ಮಾಡುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಎಸ್ಸಿಯಲ್ಲಿ ಯಾವ ಹಗರಣವು ನಡೆದಿಲ್ಲ. ವಿರೋಧ ಪಕ್ಷದವರು ಸುಮ್ಮನೇ ಆರೋಪ ಮಾಡುತ್ತಿದ್ದಾರೆ. ಅವರಿಗೆ ಆರೋಪ ಮಾಡುವುದನ್ನು ಬಿಟ್ಟರೇ ಇನ್ನೇನೂ ಕೆಲಸವಿಲ್ಲ. ಹಗರಣ ನಡೆದಿದ್ದರೆ ಸೂಕ್ತ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದರು.
ಸಂಪುಟ ವಿಸ್ತರಣೆ ವಿಚಾರವಾಗಿ ಈಗಾಗಲೇ ವರಿಷ್ಠರು ಆಕಾಂಕ್ಷಿಗಳ ಪಟ್ಟಿ ಪರಿಶೀಲಿಸುತ್ತಿದ್ದು, ಅಂತಿಮವಾಗಲಿದೆ. ಬುಧವಾರ ಅಥವಾ ಗುರುವಾರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಆಗಲಿದೆ ಎಂದು ತಿಳಿಸಿದರು.
ಒಪ್ಪಂದದಂತೆ ಶಿವಪ್ಪ ರಾಜೀನಾಮೆ
ಜಿಲ್ಲಾ ಹಾಲು ಒಕ್ಕೂಟದ(ಮನ್ಮುಲ್) ಅಧ್ಯಕ್ಷರಾಗಿದ್ದ ಶಿವಕುಮಾರ್ (ಶಿವಪ್ಪ) ಈ ಹಿಂದೆ ಆಗಿದ್ದ ಅಧಿಕಾರ ಹಂಚಿಕೆ ಒಪ್ಪಂದದಂತೆ ತಮ್ಮ ಅಧಿಕಾರದ ಅವಧಿ ಮುಗಿದ ಕೂಡಲೇ ರಾಜಿನಾಮೆ ನೀಡಿದ್ದಾರೆ. ಮುಂದಿನ ಅವಧಿಗೆ ಮನ್‌ಮುಲ್ ನಿರ್ದೇಶಕ ಹರೀಶ್ ಬಾಬು ಅವರಿಗೆ ಅಧ್ಯಕ್ಷಗಿರಿ ದೊರೆಯಲಿದೆ ಎಂದರು.
ಮದ್ದೂರು ತಾಲೂಕಿನವರಾದ ಹರೀಶ್ ಬಾಬು ಅವರಿಗೆ ಅಧ್ಯಕ್ಷಗಿರಿ ನೀಡಲು ಮೊದಲೇ ಮಾತುಕತೆ ನಡೆದಿತ್ತು. ಅದರಂತೆ ನಡೆದುಕೊಳ್ಳುತ್ತಾರೆ. ಚುನಾವಣೆ ಪ್ರಕ್ರಿಯೆ ನಡೆದು ಹರೀಶ್ ಬಾಬು ಅವಿರೋಧವಾಗಿ ಆಯ್ಕೆಯಾಗುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಮುಖಂಡರಾದ ಸಚ್ಚಿನ್, ಚಿದಂಬರ ಮೂರ್ತಿ, ಪ್ರಜಾಪ್ರಿಯಾ ವೆಂಕಟೇಶ್, ಅಮೀನ್ ಶಿವಲಿಂಗಯ್ಯ, ಸಂತೋಷ್, ಅಶ್ವಥ ಸೇರಿದಂತೆ ಹಲವರು ಇದ್ದರು.