ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಭಾರತ್ ವಿಕಾಸ್ ಪರಿಷತ್ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ಪಿ.ಸ್ವಾಮಿ ಮಾತನಾಡಿದರು. ಬಿಂದಾಸ್ ಶ್ರೀನಿವಾಸ್, ಮಹದೇವು, ವಿ.ಕೆ.ರಾಧ, ಚಂದ್ರಶೇಖರ್, ಹೊನ್ನೇಗೌಡ, ತಿಪ್ಪೂರು ರಾಜೇಶ್ ಇದ್ದರು.
Published on:
Copied
Follow Us
ಮದ್ದೂರು: ವಿವಿಧ ಸಂಘಟನೆಗಳ ವತಿಯಿಂದ ಜ.1ರಂದು ಮಹಿಳೆಯರಿಗೆ ಹೊಲಿಗೆ ಮತ್ತು ಬ್ಯೂಟಿ ಪಾರ್ಲರ್ ತರಬೇತಿ ಹಾಗೂ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಭಾರತ್ ವಿಕಾಸ್ ಪರಿಷತ್ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ಪಿ.ಸ್ವಾಮಿ ತಿಳಿಸಿದರು.
ನಗರ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತ್ ವಿಕಾಸ್ ಪರಿಷತ್ ಸೇವಾ ಟ್ರಸ್ಟ್, ರೋಟರಿ ಸಂಸ್ಥೆ, ಅನನ್ಯ ಹಾರ್ಟ್ ಸಂಸ್ಥೆ, ಐಕ್ಯ ಅಲೆಯನ್ಸ್ ಸಂಸ್ಥೆ ವತಿಯಿಂದ ನಗರದ ಭಾರತ್ ವಿಕಾಸ್ ಪರಿಷತ್ ಸೇವಾ ಟ್ರಸ್ಟ್ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ಆರೋಗ್ಯ ಶಿಬಿರ ಹಾಗೂ ಮಹಿಳೆಯರಿಗೆ ಹೊಲಿಗೆ ಮತ್ತು ಬ್ಯಾಟಿ ಪಾರ್ಲರ್ ತರಬೇತಿ ಕಾರ್ಯಕ್ರಮ ಪ್ರಾರಂಭವಾಗಲಿದೆ ಎಂದರು.
ರೋಟರಿ ಅಧ್ಯಕ್ಷ ಬಿಂದಾಸ್ ಶ್ರೀನಿವಾಸ್ ಮಾತನಾಡಿ, ಮಹಿಳೆಯರಿಗೆ ಉಚಿತವಾಗಿ 2 ತಿಂಗಳು ಹೊಲಿಗೆ ಹಾಗೂ 1 ತಿಂಗಳು ಬ್ಯೂಟಿ ಪಾರ್ಲರ್ ತರಬೇತಿ ನೀಡಲಾಗುವುದು. ಉತ್ತಮ ತರಬೇತುದಾರರಿಂದ ತರಬೇತಿ ನೀಡುವ ಜತೆಗೆ ಪ್ರಮಾಣಪತ್ರವನ್ನು ನೀಡಲಾಗುವುದು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದರು.
ಆರೋಗ್ಯ ಶಿಬಿರದಲ್ಲಿ ಶ್ವಾಸಕೋಸ, ಇಸಿಜಿ, ಕಣ್ಣಿನ ತಪಾಸಣೆ, ಕ್ಯಾನ್ಸರ್, ರಕ್ತದೊತ್ತಡ, ಸಕ್ಕರೆ ರೋಗ ತಪಾಸಣೆ ಸೇರಿದಂತೆ ಇನ್ನಿತರ ರೋಗಗಳಿಗೆ ಚಿಕಿತ್ಸೆ ನೀಡಿ, ಔಷಧ ನೀಡಲಾಗುವುದು ಎಂದರು.
ಸಭೆಯಲ್ಲಿ ರೋಟರಿ ಸಂಚಾಲಕರಾದ ಮಹದೇವು, ವಿ.ಕೆ.ರಾಧಾ, ಚಂದ್ರಶೇಖರ್, ಹೊನ್ನೇಗೌಡ, ಚನ್ನಸಂದ್ರ ಮಹದೇವು, ತಿಪ್ಪೂರು ರಾಜೇಶ್, ಪ್ರವೀಣ್, ಎಸ್.ಪಿ.ದೀಪಕ್ ಇದ್ದರು.