ಕೆಲಸ ಪೂರ್ಣಗೊಳ್ಳಲು ಎಲ್ಲರ ಸಹಕಾರ ಮುಖ್ಯ

ಬೆಳಗೊಳ ಗ್ರಾಮದಲ್ಲಿ ಸೆಸ್ಕ್ ಉಪ ಶಾಖೆ ಕಚೇರಿ ನಿರ್ಮಾಣ ಕಾಮಗಾರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಶುಕ್ರವಾರ ಚಾಲನೆ ನೀಡಿದರು. ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್  ಮಂಜುನಾಥ ಪ್ರಸಾದ್, ಎಇ ಸಂಪತ್ ಕುಮಾರ, ಪಿಡಿಒ ಕುಳ್ಳೇಗೌಡ, ಡೇರಿ ಅಧ್ಯಕ್ಷ ಯತೀಶ್‌ಇತರರು ಇದ್ದರು.
ಬೆಳಗೊಳ ಗ್ರಾಮದಲ್ಲಿ ಸೆಸ್ಕ್ ಉಪ ಶಾಖೆ ಕಚೇರಿ ನಿರ್ಮಾಣ ಕಾಮಗಾರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಶುಕ್ರವಾರ ಚಾಲನೆ ನೀಡಿದರು. ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ ಪ್ರಸಾದ್, ಎಇ ಸಂಪತ್ ಕುಮಾರ, ಪಿಡಿಒ ಕುಳ್ಳೇಗೌಡ, ಡೇರಿ ಅಧ್ಯಕ್ಷ ಯತೀಶ್‌ಇತರರು ಇದ್ದರು.
Published on
ಕೆ.ಆರ್.ಸಾಗರ : ಯಾವುದೇ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳ್ಳಲು ಗ್ರಾಮಸ್ಥರೆಲ್ಲರ ಸಹಕಾರ ಬಹಳ ಮುಖ್ಯ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.
ಬೆಳಗೊಳ ಗ್ರಾಮದಲ್ಲಿ ಸೆಸ್ಕ್ ವತಿಯಿಂದ ಒಂದು ಕೋಟಿ ರೂ. ವೆಚ್ಚದ ಬೆಳಗೊಳ ಉಪ ಶಾಖೆ ಕಚೇರಿ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಸೆಸ್ಕ್ ಉಪ ಶಾಖೆಯ ಕಚೇರಿ ಈ ಹಿಂದೆ ಪೇಪರ್ ಮಿಲ್‌ನ ಗ್ಯಾಮ್ ಕಾರ್ಖಾನೆಯ ಒಳ ಭಾಗದಲ್ಲಿ ಇತ್ತು .ಕಾಡು ಪ್ರದೇಶದಂತೆ ಇರುವ ಈ ಜಾಗಕ್ಕೆ ಸುತ್ತಮುತ್ತಲ ಗ್ರಾಮಗಳು ಸಾರ್ವಜನಿಕರು ಹೋಗಲು ಭಯಪಡುತ್ತಿದ್ದರು. ಹಾಗಾಗಿ ಕಚೇರಿಯನ್ನು ಸಾರ್ವಜನಿಕ ಸ್ಥಳದಲ್ಲಿ ಆರಂಭಿಸಲುನಾನು ಬೆಳಗೊಳ ಗ್ರಾಮ ಪಂಚಾಯಿತಿಗೆ ಸ್ಥಳ ಕೋರಿದ್ದೆ. ಇದೀಗ ಹೊಸ ಕಟ್ಟಡ ನಿರ್ಮಿಸಲು ಸರ್ಕಾರ ಹಣ ಬಿಡುಗಡೆ ಮಾಡಿದೆ ಎಂದರು. ಗುತ್ತಿಗೆದಾರರು ತ್ವರಿತವಾಗಿ ಗುಣಮಟ್ಟದ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಮಾಡಿಕೊಡಬೇಕು ಎಂದು ಅವರು ಸೂಚಿಸಿದರು. ಈಗಾಗಲೇ ಗ್ರಾಮದಲ್ಲಿ ರಸ್ತೆ, ಚರಂಡಿ, ಪಶು ಆಸ್ಪತ್ರೆ ಕಟ್ಟಡ ನಿರ್ಮಿಸಲು ಹಣ ಬಿಡುಗಡೆಯಾಗಿ ಕಾಮಗಾರಿಯೂ ನಡೆಯುತ್ತಿದೆ. ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಸಂಪೂರ್ಣ ಸಹಕಾರ ಮಾಡುತ್ತೇನೆ ಎಂದರು.
ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ ಪ್ರಸಾದ್, ಎಇ ಸಂಪತ್ ಕುಮಾರ, ಪಿಡಿಒ ಕುಳ್ಳೇಗೌಡ, ಗ್ರಾಮದ ದೊಡ್ಡಯಜಮಾನ ಶ್ರೀನಿವಾಸ, ಚಿಕ್ಕ ಯಜಮಾನ ವಿಷಕಂಠೇಗೌಡ, ಶಿವ ಲಿಂಗೇಗೌಡ, ತಾಪಂ ಮಾಜಿ ಸದಸ್ಯ ಬಿ.ಎಂ ಸ್ವಾಮೀಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಬಿ.ವಿ.ಸುರೇಶ್, ಬಿ.ರವಿಕುಮಾರ್, ಎಂ.ಬಿ.ಕುಮಾರ್, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ರವೀಶ್, ಟಿಎಪಿಸಿಎಂಎಸ್ ನಿರ್ದೇಶಕ ನಾಗರಾಜು , ಡೇರಿ ಅಧ್ಯಕ್ಷ ಯತೀಶ್, ಮಾಜಿ ಅಧ್ಯಕ್ಷ ಬಾಬು, ಸೆಸ್ಕ್ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net