ಸರಣಿ ಕಳ್ಳತನ, ನಗದು ದೋಚಿದ ಕಳ್ಳರು

ಸರಣಿ ಕಳ್ಳತನ
ಸರಣಿ ಕಳ್ಳತನ
Published on
ಮಳವಳ್ಳಿ: ತಾಲೂಕಿನ ಮುಟ್ಟನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಎರಡು ಮನೆಗಳಲ್ಲಿ ನಗದು ದೋಚಿರುವ ಕಳ್ಳರು ಮತ್ತೆರಡು ಮನೆಗಳಲ್ಲಿ ಕಳುವಿಗೆ ಯತ್ನಿಸಿ ವಿಫಲವಾಗಿ ಪರಾರಿಯಾಗಿದ್ದಾರೆ.
ಗ್ರಾಮದ ಸುರೇಶ್ ಮನೆಯ ಬಾಗಿಲ ಚಿಲಕ ಹೊಡೆದು ಮನೆಯಲ್ಲಿದ್ದ ಕೆಲ ದಾಖಲೆ ಜತೆ ಇರಿಸಿದ್ದ ಹಣದ ಪೆಟ್ಟಿಗೆ(ಟ್ರಂಕ್)ಹೊತ್ತೊಯ್ದು ಟ್ರಂಕ್‌ನಲ್ಲಿದ್ದ 15 ಸಾವಿರ ರೂ. ಹಣ ತೆಗೆದುಕೊಂಡು ಗ್ರಾಮದ ಹೊರಭಾಗದಲ್ಲಿರುವ ದೇವಸ್ಥಾನದ ಹಿಂಭಾಗ ದಾಖಲೆ ಸಮೇತ ಪೆಟ್ಟಿಗೆ ಬಿಸಾಡಿದ್ದಾರೆ.
ಭಾಗ್ಯಮ್ಮ ಅವರ ಮನೆಯ ಕಪಾಟಿನಲ್ಲಿದ್ದ ಎರಡು ಸಾವಿರ ರೂ. ನಗದು ದೋಚಿದ್ದಾರೆ. ಗುರುಸ್ಚಾಮಿ ಮತ್ತು ಹೋಟೆಲ್ ಸ್ವಾಮಿ ಎಂಬುವರ ಮನೆಗಳಲ್ಲಿ ಕಬ್ಬಿಣದ ರಾಡ್ ಬಳಸಿ ಬಾಗಿಲು ತೆರೆಯಲು ಯತ್ನಿಸಿ ವಿಫಲವಾಗಿ ಬಿಟ್ಟು ಹೋಗಿದ್ದಾರೆ.
ಗುರವಾರ ಪೊಲೀಸರು ಗ್ರಾಮದಲ್ಲಿ ಕಳುವಾಗಿರುವ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನದಳ, ಬೆರಳಚ್ಚು ತಜ್ಞರಿಂದ ಮಾಹಿತಿ ಕಲೆಹಾಕಿದ್ದಾರೆ. ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net