ಅಂಬೇಡ್ಕರ್‌ನ್ನು ವಿಶ್ವಮಾನವರನ್ನಾಗಿ ನೋಡಿ

ಮಳವಳ್ಳಿ ಪಟ್ಟಣದ ವಿಶ್ವಮಾನವ ವಿಚಾರ ವೇದಿಕೆ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಮಹದೇವು, ಭರತ್ ರಾಜ್, ಚೇತನ್ ಕುಮಾರ್, ಸುರೇಶ್, ದಯಾಶಂಕರ್, ಮಲ್ಲಿಕಾರ್ಜುನಸ್ವಾಮಿ, ಚುಂಚಣ್ಣ, ಪುಟ್ಟಮಂಚಮ್ಮ, ನಾಗೇಶ್, ಲೋಕೇಶ್ ಇದ್ದರು.
ಮಳವಳ್ಳಿ ಪಟ್ಟಣದ ವಿಶ್ವಮಾನವ ವಿಚಾರ ವೇದಿಕೆ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಮಹದೇವು, ಭರತ್ ರಾಜ್, ಚೇತನ್ ಕುಮಾರ್, ಸುರೇಶ್, ದಯಾಶಂಕರ್, ಮಲ್ಲಿಕಾರ್ಜುನಸ್ವಾಮಿ, ಚುಂಚಣ್ಣ, ಪುಟ್ಟಮಂಚಮ್ಮ, ನಾಗೇಶ್, ಲೋಕೇಶ್ ಇದ್ದರು.
Published on
ಮಳವಳ್ಳಿ : ವಿಶ್ವ ಮೆಚ್ಚುವ ಸಂವಿಧಾನ ರಚನೆ ಪ್ರಮುಖ ರುವಾರಿಯಾಗಿ ಭಾರತದ ಘನತೆಯನ್ನು ಉತ್ತುಂಗಕ್ಕೆ ಎತ್ತರಿಸಿದವರು ಡಾ.ಬಿ.ಆರ್.ಅಂಬೇಡ್ಕರ್ ಎಂದು ವಿಶ್ವಮಾನವ ವಿಚಾರ ವೇದಿಕೆ ಅಧ್ಯಕ್ಷ ಮಹದೇವು ತಿಳಿಸಿದರು.
ಪಟ್ಟಣದ ವಿಶ್ವಮಾನವ ವಿಚಾರ ವೇದಿಕೆ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಾ. ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು, ದೇಶದ ನಾಗರಿಕರಿಗೆ ಹುಟ್ಟಿನಿಂದ ಸಾವಿನವರೆಗೂ ಹಕ್ಕುಗಳನ್ನ ಸ್ಥಾಪಿಸುವುದರ ಮೂಲಕ ಶ್ರೇಷ್ಠ ಸಂವಿಧಾನವನ್ನ ನೀಡಿದ ಕೀರ್ತಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಇಂತಹ ಮಹನೀಯರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.
ಅಂಬೇಡ್ಕರ್ ಅವರು ಒಂದು ಜಾತಿ, ಮತಕ್ಕೆ ಸೀಮಿತಗೊಳಿಸುವ ಜನರು, ಸಂಕುಚಿತತೆಯಿಂದ ಹೊರಬಂದು ಅವರನ್ನು ವಿಶ್ವಮಾನವರಾಗಿ ನೋಡಬೇಕೆಂದರು. ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನವನ್ನ ನೀಡುವುದರ ಮೂಲಕ ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದ ಅಂಬೇಡ್ಕರ್ ಅವರ ಪ್ರತಿಮೆ, ಪುತ್ಥಳಿ ನಿಲ್ಲಿಸಿ ಸ್ಮರಿಸಿದರೆ ಸಾಲದು. ಅವರ ಸಿದ್ಧಾಂತಗಳು ಹಾಗೂ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಅವರ ಕನಸಿನ ಭಾರತ ಕಟ್ಟುವಲ್ಲಿ ಎಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದರು.
ಕಸಾಪ ತಾಲೂಕು ಅಧ್ಯಕ್ಷ ಚೇತನ್ ಕುಮಾರ್, ವೇದಿಕೆಯ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್ ರಾಜ್, ಮಾಜಿ ಸೈನಿಕ ಸುರೇಶ್, ಪುರಸಭೆ ಮಾಜಿ ಅಧ್ಯಕ್ಷ ದಯಾಶಂಕರ್, ಯೋಗಗುರು ಮಲ್ಲಿಕಾರ್ಜುನಸ್ವಾಮಿ, ಮಹದೇವು, ಚುಂಚಣ್ಣ, ಪುಟ್ಟಮಂಚಮ್ಮ, ಎಂ.ನಾಗೇಶ್, ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net