ಸ್ವಾತಂತ್ರ್ಯಪೂರ್ವದ ಸರ್ಕಾರಿ ಶಾಲೆ ಉಳಿಸಿ

ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮದ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಗಣ್ಯರು ಶುಕ್ರವಾರ ಉದ್ಘಾಟಿಸಿದರು. ವೈ.ಕೆ. ತಿಮ್ಮೇಗೌಡ, ಆರ್‌ಟಿಒ ಮಲ್ಲಿಕಾರ್ಜುನ, ಡಾಲು ರವಿ, ಬಿ.ಎಂ. ಕಿರಣ್, ಶೀಳನೆರೆ ಅಂಬರೀಶ್,  ಚನ್ನಿಂಗೇಗೌಡ, ಆಶಾರಾಣಿ, ಎಂ.ಎನ್. ಯೋಗೇಶ್, ರಾಮಕೃಷ್ಣೇಗೌಡ, ಶೇಖರ್, ಜ್ಯೋತಿ ಇದ್ದರು.
ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮದ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಗಣ್ಯರು ಶುಕ್ರವಾರ ಉದ್ಘಾಟಿಸಿದರು. ವೈ.ಕೆ. ತಿಮ್ಮೇಗೌಡ, ಆರ್‌ಟಿಒ ಮಲ್ಲಿಕಾರ್ಜುನ, ಡಾಲು ರವಿ, ಬಿ.ಎಂ. ಕಿರಣ್, ಶೀಳನೆರೆ ಅಂಬರೀಶ್, ಚನ್ನಿಂಗೇಗೌಡ, ಆಶಾರಾಣಿ, ಎಂ.ಎನ್. ಯೋಗೇಶ್, ರಾಮಕೃಷ್ಣೇಗೌಡ, ಶೇಖರ್, ಜ್ಯೋತಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ ಹೇಳಿಕೆ
ಕಿಕ್ಕೇರಿ: ನಮ್ಮ ಪೂರ್ವಿಕರ ಶ್ರಮದ ಫಲವಾಗಿ ರಾಜರ ಕಾಲದಲ್ಲಿ ಸ್ಥಾಪಿತವಾಗಿರುವ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಇದು ಒಂದಾಗಿದ್ದು, ಉಳಿಸುವ ಕೆಲಸಕ್ಕೆ ಪಾಲಕರು, ಶಿಕ್ಷಕರು ಮುಂದಾಗಿ ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ ತಿಳಿಸಿದರು.
ಹೋಬಳಿಯ ಗಡಿಭಾಗದ ಮಾದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಜರುಗಿದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡುತ್ತ, ಈ ಶಾಲೆ ಉಳಿಸಲು ಹೊಸಕೋಟೆಯ ಕಾಜಿಹೊಸಹಳ್ಳಿ ನಾಗರಾಜು, ಪುಷ್ಪಾ ದಂಪತಿಯವರು ಮಕ್ಕಳ ಮನೆಗೆ ಮಕ್ಕಳನ್ನು ಕರೆತರಲು ವಾಹನವನ್ನು ಕೊಡುಗೆಯಾಗಿ ನೀಡಿರುವುದು ಇಡೀ ಸಮಾಜವೇ ಮೆಚ್ಚುವ ಕೆಲಸವಾಗಿದೆ. ವಾರ್ಷಿಕೋತ್ಸವ ಗ್ರಾಮದ ಹಬ್ಬದಂತೆ ನಡೆಯುತ್ತಿದೆ. ಆದರೆ ದಾಖಲಾತಿಗೆ ಕೊರತೆ ಇದ್ದು ಮುಂದಿನ ದಿನದಲ್ಲಿ ಪಾಲಕರು ಮೀನಾಮೇಷ ತೋರದೆ ಈ ಸರ್ಕಾರಿ ಶಾಲೆ ಪ್ರಬುದ್ಧಮಾನವಾಗಿ ಬೆಳೆಸಲು ಮುಂದಾಗಬೇಕು ಎಂದರು.
ಮನ್ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿ, ನಾವೆಲ್ಲರೂ ಓದಿರುವುದು ಸರ್ಕಾರಿ ಶಾಲೆ. ನೂರು ವರ್ಷದ ಶಾಲೆಗೆ ಹರುಷ ತುಂಬುವ ಕೆಲಸಕ್ಕೆ ತನ್ನ ಸಹಕಾರವಿದೆ. ಶಾಲೆ ಮುಚ್ಚದಂತೆ ನೋಡಿಕೊಳ್ಳಿ ಎಂದು ವಿನಂತಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಎಂ.ಎನ್. ಯೋಗೇಶ್ ಮಾತನಾಡಿ, ಹಳೆಯದಾಗಿದ್ದ ಶತಮಾನದ ಶಾಲೆ ಕೆಡವಲಾಗಿದೆ. ತ್ವರಿತವಾಗಿ ನೂತನ ಕಟ್ಟಡ ನಿರ್ಮಿಸಲು ಇಲಾಖೆ ಮುಂದಾಗಬೇಕಿದೆ ಎಂದು ವಿನಂತಿಸಿದರು.
ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಂ. ಕಿರಣ್ ಮಾತನಾಡಿ, ಗ್ರಾಮ ಶಿಕ್ಷಣ ಪಂಡಿತರ ತಾಣವಾಗಿತ್ತು. ಸುಶಿಕ್ಷಿತರು ಇರುವ ಗ್ರಾಮದಲ್ಲಿ ಖಾಸಗಿ ಶಾಲೆ ವ್ಯಾಮೋಹ ಬಿಡಿ. ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮದ ಮಕ್ಕಳ ಮನೆ, ಪ್ರಾಥಮಿಕ ಶಾಲೆ ಆರಂಭವಾಗಿದೆ. ಉತ್ತಮ ಶಿಕ್ಷಕರು ಇರುವಾಗ ಪ್ರತಿಷ್ಠೆಗಾಗಿ ಖಾಸಗಿ ಶಾಲೆಗೆ ಕಳುಹಿಸದಿರಿ ಎಂದು ತಿಳಿಹೇಳಿದರು.
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ. ತಿಮ್ಮೇಗೌಡ ಮಾತನಾಡಿ, ಈ ಶಾಲೆಗೆ ದಾನಿಗಳ ಕೊರತೆ ಇಲ್ಲ. ಹೊಸ ಕಟ್ಟಡವನ್ನು ನಿರ್ಮಿಸಲು ಇಲಾಖೆ ಬದ್ಧವಿದೆ. ಸರ್ಕಾರಿ ಶಾಲೆ ಬಡ, ದುರ್ಬಲ ಮಕ್ಕಳ ಭವಿಷ್ಯಕ್ಕೆ ಆಸರೆ ಎಂಬುದನ್ನು ಮರೆಯದೆ ಇರುವ ಶಾಲೆ ಉಳಿಸಿ ಎಂದು ವಿನಂತಿಸಿದರು.
ಮನ್ಮುಲ್ ನಿರ್ದೇಶಕ ಶೀಳನೆರೆ ಅಂಬರೀಶ್ ಮಾತನಾಡಿದರು. ಸಮಾರಂಭಕ್ಕೆ ಸಹಕರಿಸಿದ ದಾನಿಗಳಿಗೆ ಗೌರವಿಸಲಾಯಿತು. ಮಕ್ಕಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ರಂಜಿಸಿದರು. ಹೊಸಕೋಟೆ ನಾಗರಾಜು ಪುಷ್ಪಾ ದಂಪತಿಗಳು ಉಚಿತವಾಗಿ ನೀಡಿದ ಶಾಲಾ ವಾಹನವನ್ನು ಗಣ್ಯರ ಸಮ್ಮುಖದಲ್ಲಿ ಶಾಲೆಗೆ ಹಸ್ತಾಂತರಿಸಲಾಯಿತು.
ಸಿಆರ್‌ಪಿ ಆಶಾರಾಣಿ, ಎಸ್‌ಡಿಎಂಸಿ ಅಧ್ಯಕ್ಷ ಯೋಗೇಶ್, ಮನ್ಮುಲ್ ಮಾಜಿ ಅಧ್ಯಕ್ಷ ಚನ್ನಿಂಗೇಗೌಡ, ಕಸಾಪ ತಾ. ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ, ಮುಖಂಡರಾದ ರಾಮಕೃಷ್ಣೇಗೌಡ, ಶೇಖರ್, ಯೋಗೇಶ್, ಟೈಲರ್ ರಘು, ಮುಖ್ಯಶಿಕ್ಷಕಿ ಜ್ಯೋತಿಲಕ್ಷ್ಮೀ, ಶಿಕ್ಷಕರಾದ ದೇವರಾಜು, ನಂಜುಂಡಯ್ಯ, ರಾಜಪ್ಪ, ಪುಷ್ಪಾ, ಎಸ್‌ಡಿಎಂಸಿ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net