ಕನ್ನಡ ಶಿಕ್ಷಕ ಶಿವಬೀರಯ್ಯ ಮಾತನಾಡಿ, ಸಂಕ್ರಾಂತಿ ಹಬ್ಬವನ್ನು ರೈತರು ವರ್ಷಪೂರ್ತಿ ವ್ಯವಸಾಯ ಮಾಡಿ ಬೆಳೆದ ಬೆಳೆಗಳನ್ನು ರಾಶಿ ಹಾಕಿ ಅವುಗಳಿಗೆ ಪೂಜೆ ಸಲ್ಲಿಸಿ ಸುಗ್ಗಿ ಹಬ್ಬವಾಗಿ ಆಚರಿಸುತ್ತಾರೆ. ಈ ಹಬ್ಬದ ವಿಶೇಷವೆಂದರೆ ರೈತರಿಗೆ ವ್ಯವಸಾಯದಲ್ಲಿ ಪೂರಕವಾಗಿ ಸಹಕಾರ ನೀಡಿದ ವ್ಯವಸಾಯ ಸಲಕರಣೆಗಳು ಹಸು-ಕರು-ದನಗಳನ್ನು ಪೂಜಿಸುವುದು ಅಲ್ಲದೆ ಹಸು ದನ-ಕರುಗಳನ್ನು ಕಿಚ್ಚುಹಾಯಿಸುವುದು , ವರುಣ (ಮಳೆ), ವಾಯು (ಗಾಳಿ) ಸೂರ್ಯದೇವ (ಬಿಸಿಲು) ಇವುಗಳನ್ನು ಪೂಜಿಸಿ ಕೃತಜ್ಞತೆ ಹೇಳುವುದು ವಾಡಿಕೆ. ಇದರ ಜತೆಗೆ ಎಳ್ಳು ಬೆಲ್ಲವನ್ನು ಹಂಚಿ ಎಲ್ಲರೂ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಎಂದು ಹಾರೈಸುವುದು ಸಂಪ್ರದಾಯ ಎಂದು ಹೇಳಿದರು.