ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದ ಮಾನಸ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸುಗ್ಗಿ ಹಬ್ಬ ಸಂಕ್ರಾಂತಿ ಸಂಭ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಂಸ್ಥೆ ಅಧ್ಯಕ್ಷ ವಿ.ಕೆ.ಜಗದೀಶ್ ಚಾಲನೆ ನೀಡಿದರು. ಮಂಜುಳಾ ಜಗದೀಶ್, ನಾಗರಾಜು, ಪಿ.ಸಿ.ಪ್ರವೀಣ್‌ಕುಮಾರ್, ಮಮತಾ, ಬಿ.ಎಂ.ಬಸವರಾಜು, ಪಲ್ಲವಿ, ರಮೇಶ್, ಕಲಾವತಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಾನಸ ವಿದ್ಯಾಸಂಸ್ಥೆ ಅಧ್ಯಕ್ಷ ವಿ.ಕೆ.ಜಗದೀಶ್ ಅಭಿಪ್ರಾಯ
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ
ಮದ್ದೂರು:ಸಂಕ್ರಾಂತಿ ಹಬ್ಬವು ಕೃಷಿ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಸಂಗಮವಾಗಿದ್ದು, ಪರಸ್ಪರ ಪ್ರೀತಿ, ಕೃತಜ್ಞತೆ ಮತ್ತು ಸಮೃದ್ಧಿಯ ಸಂದೇಶವನ್ನು ಸಾರುತ್ತದೆ ಎಂದು ಮಾನಸ ವಿದ್ಯಾಸಂಸ್ಥೆ ಅಧ್ಯಕ್ಷ ವಿ.ಕೆ.ಜಗದೀಶ್ ತಿಳಿಸಿದರು.
ತಾಲೂಕಿನ ಬೆಸಗರಹಳ್ಳಿ ಗ್ರಾಮದ ಮಾನಸ ವಿದ್ಯಾಸಂಸ್ಥೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುಗ್ಗಿ ಹಬ್ಬ ಸಂಕ್ರಾಂತಿ ಸಂಭ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಬ್ಬಗಳ ಸಾಲಿನಲ್ಲಿ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಸ್ಥಾನವಿದೆ. ಇದು ಕೇವಲ ಹಬ್ಬವಷ್ಟೇ ಅಲ್ಲ, ರೈತನ ಶ್ರಮಕ್ಕೆ ದೊರಕುವ ಪ್ರತಿಫಲವೂ ಹೌದು. ಈ ಹಬ್ಬದಲ್ಲಿ ರೈತರು ಬೆಳೆದ ಬೆಳೆಗಳನ್ನು ಕಟಾವು ಮಾಡಿ ವಿಶೇಷ ಪೂಜೆ ಸಲ್ಲಿಸಿ ಹಬ್ಬವನ್ನು ಆಚರಿಸುತ್ತಾರೆ ಎಂದರು.
ರೈತರು ಕಷ್ಟಪಟ್ಟರೆ ಮಾತ್ರ ಭೂ ಮಂಡಲದಲ್ಲಿರುವ ಸಕಲ ಜೀವರಾಶಿಗೂ ಆಹಾರ ಸಿಗುತ್ತದೆ. ರೈತರನ್ನು ಪ್ರತಿಯೊಬ್ಬರೂ ಗೌರವಿಸಬೇಕು. ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಟ್ಟು ವ್ಯಾಸಂಗ ಮಾಡಿ ಸಮಾಜದಲ್ಲಿ ಉನ್ನತ ವ್ಯಾಸಂಗ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಸುಗ್ಗಿ ಸಂಕ್ರಾಂತಿ ಹಬ್ಬದ ಅಂಗವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಉಪನ್ಯಾಸಕರು ಸಡಗರ ಸಂಭ್ರಮದಿಂದ ರಾಶಿ ಪೂಜೆ, ಗೋಪೂಜೆ ಮಾಡಿ ಎಳ್ಳುಬೆಲ್ಲ ವಿತರಿಸಲಾಯಿತು. ಹಾಗೂ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.
ಸಂಸ್ಥೆಯ ಟ್ರಸ್ಟಿ ಮಂಜುಳಾ ಜಗದೀಶ್, ಕಾರ್ಯದರ್ಶಿ ನಾಗರಾಜು, ಪ್ರಾಂಶುಪಾಲರಾದ ಪಿ.ಸಿ.ಪ್ರವೀಣ್‌ಕುಮಾರ್, ಮಮತಾ, ಮುಖ್ಯ ಶಿಕ್ಷಕರಾದ ಬಿ.ಎಂ.ಬಸವರಾಜು, ಪಲ್ಲವಿ, ಶರತ್, ರಮೇಶ್, ಕಲಾವತಿ ಇತರರು ಇದ್ದರು.