ನಗರದ ಕಮಲ ಮಂದಿರದಲ್ಲಿ ಮಂಥನ ಮಂಡ್ಯ ವೈಚಾರಿಕ ವೇದಿಕೆಯಿಂದ ಆಯೋಜಿಸಿದ್ದ ಆರ್‌ಎಸ್‌ಎಸ್-100 ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮಗೆ ಹಿಂದೂ ಧರ್ಮ. ಈ ನೆಲದ ಸಂಸ್ಕೃತಿ, ಆಚಾರ-ವಿಚಾರಗಳು, ಪರಂಪರೆ ಮುಖ್ಯ. ಅದೆಲ್ಲವನ್ನೂ ಬಿಜೆಪಿ ಒಪ್ಪಿಕೊಂಡಿದೆ. ಅದರಿಂದಾಗಿಯೇ ಬಿಜೆಪಿ ಆರ್‌ಎಸ್‌ಎಸ್‌ನ ಒಂದು ಭಾಗವಾಗಿದೆ. ಇದೀಗ ಜೆಡಿಎಸ್ ಕೂಡ ಹಿಂದುತ್ವವನ್ನು ಒಪ್ಪಿಕೊಂಡು ಬಂದಿರುವುದರಿಂದ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ. ಮುಂದೆ ಕಾಂಗ್ರೆಸ್ ಕೂಡ ಹಿಂದೂ ಧರ್ಮ-ಸಂಸ್ಕೃತಿಯನ್ನು ಒಪ್ಪಿ ಬಂದರೆ ಅವರನ್ನೂ ನಾವು ಮುಕ್ತವಾಗಿ ಸ್ವೀಕರಿಸುವುದಾಗಿ ಹೇಳಿದರು.