ರೋಟರಿ ಸಂಸ್ಥೆ ನೊಂದವರ ಬಾಳಿಗೆ ಆಸರೆ

ಮದ್ದೂರು ನಗರದ ಖಾಸಗಿ ಪಾರ್ಟಿ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನುಶಾ ಎಂಬ ಮಹಿಳೆಗೆ ಉಚಿತವಾಗಿ ಎಲೆಕ್ಟ್ರಿಕಲ್ ಆಟೋ ವಿತರಿಸಲಾಯಿತು. ಪ್ರೊ.ಎಲಿಜಬೆತ್ ಚರಿಯನ್, ಎಸ್.ಪಿ.ಶ್ರೀನಿವಾಸ್, ರೇಣುಕೇಶ್ವರಸ್ವಾಮಿ, ದೇವದಾಸನ್, ಶಿವಾನಂದ, ಬಿ.ಡಿ.ಹೊನ್ನೇಗೌಡ, ತಿಪ್ಪೂರು ರಾಜೇಶ್, ಅನುಪಮ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಪ್ರಾಂತಪಾಲ ಪ್ರೊ ಎಲಿಜಬೆತ್ ಚರಿಯನ್ ಹೆಳಿಕೆ
ಮದ್ದೂರು: ರೋಟರಿ ಸಂಸ್ಥೆ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೊಂದವರ ಬಾಳಿಗೆ ಆಸರೆಯಾಗಿದೆ ಎಂದು ಜಿಲ್ಲಾ ಪ್ರಾಂತಪಾಲ ಪ್ರೊ. ಎಲಿಜಬೆತ್ ಚರಿಯನ್ ತಿಳಿಸಿದರು.
ನಗರದ ಖಾಸಗಿ ಪಾರ್ಟಿ ಹಾಲ್‌ನಲ್ಲಿ ಮಂಗಳವಾರ ರಾತ್ರಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಎಲೆಕ್ಟ್ರಿಕಲ್ ಆಟೋ ಹಾಗೂ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿದರು.
ರೋಟರಿ ಸಂಸ್ಥೆ ಆರೋಗ್ಯ ಉಚಿತ ತಪಾಸಣೆ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್, ನೋಟ್‌ಬುಕ್ ಹಾಗೂ ಪಠ್ಯ ಪರಿಕರಗಳು, ವಾಟರ್ ಪಿಲ್ಟರ್‌ಗಳು, ಆರ್ಥಿಕವಾಗಿ ಹಿಂದುಳಿದವರಿಗೆ ಆಟೋಗಳು, ಹೊಲಿಗೆ ಯಂತ್ರ ವಿತರಿಸುತ್ತ ಬಂದಿದ್ದಾರೆ. ಸಮಾಜ ಕಟ್ಟ ಕಡೇಯ ವ್ಯಕ್ತಿಯನ್ನು ಸಮಾಜದ ಮುಖ್ಯವಾಹಿನಿಗೆ ತರಲು ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ ಎಂದರು.
ರೋಟರಿ ಮದ್ದೂರು ಅಧ್ಯಕ್ಷ ಬಿಂದಾಸ್ ಎಸ್.ಪಿ.ಶ್ರೀನಿವಾಸ್ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ರಿಟಲ್ ಪ್ರವೈಟ್ ಲಿಮಿಟೆಡ್‌ನ ಸಿಆರ್‌ಎಸ್ ಫಂಡ್‌ನಿಂದ ಹಾಗೂ ರೋಟರಿ ಸಹಯೋಗದೊಂದಿಗೆ
ಆರ್ಥಿಕವಾಗಿ ಹಿಂದುಳಿದರವರಿಗೆ ಅಹಾಯ ಮಾಡುತ್ತಿದ್ದಾರೆ ಎಂದರು.
ರೋಟರಿ ಪದಾಧಿಕಾರಿಳಾದ ದೇವದಾಸನ್, ಶಿವಾನಂದ್, ಬಿ.ಡಿ.ಹೊನ್ನೇಗೌಡ, ಅನುಪಮಾ, ತಿಪ್ಪೂರು ರಾಜೇಶ್, ಮಂಜುನಾಥ್ ನಾಯ್ಡು, ಪ್ರವೀಣ್, ಲೋಕೇಶ್, ಮಹೇಶ್, ದೀಪಕ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net