ಕೊಳ್ಳೇಗಾಲ ತಾಲೂಕಿನ ಚಿಕ್ಕಲೂರು ಗ್ರಾಮದ ಮುತ್ತುಸ್ವಾಮಿ, ರಾಜು, ಚಂದ್ರು ಮತ್ತು ಹಲಗೂರು ಹೋಬಳಿ ಮಾಸ್ಟರ್ ದೊಡ್ಡಿಯ ಮಹೇಶ್ ಬಂಧಿತ ಆರೋಪಿಗಳು. ಬೆಂಗಳೂರಿನ ಜೆ.ಪಿ.ನಗರ ನಿವಾಸಿ ಯಶೋಧಮ್ಮ ಮಾಲೀಕತ್ವದ ತೋಟದ ಮನೆಯಲ್ಲಿ ಜಮೀನು ಕೆಲಸ ಮಾಡಿಕೊಂಡಿದ್ದ ಚಂದ್ರು ಮತ್ತು ಕವಿತಾ ಅವರ ಮೇಲೆ ಮಾ.15 ರಂದು ಭಾನುವಾರ ರಾತ್ರಿ 9 ರ ಸಮಯದಲ್ಲಿ ಏಕಾಏಕಿ ದಾಳಿ ಮಾಡಿದ ಇಬ್ಬರು ದುಷ್ಕರ್ಮಿಗಳು ಮಾರಾಕಾಸ್ತ್ರಗಳನ್ನು ತೋರಿಸಿ ಚಿನ್ನದ ಅಭರಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು.