ಅಕ್ಕಿ ಗಿರಣಿ ಬೆಂಕಿಗಾಹುತಿ

ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಶುಕ್ರವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಶುಕ್ರವಾರ ರಾತ್ರಿ ಅಕ್ಕಿಗಿರಣಿಯಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸುವ ಮೂಲಕ ಆಗಬಹುದಾದ ಹೆಚ್ಚಿನ ಅನಾಹುತ ತಪ್ಪಿಸಿದ ಅಗ್ನಿಶಾಮಕದಳ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಮಿಲ್ ಮಾಲೀಕ ಹಾಗೂ ಗ್ರಾಮದ ಮುಖಂಡರು ಅಭಿನಂದಿಸಿದರು.
ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಶುಕ್ರವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಶುಕ್ರವಾರ ರಾತ್ರಿ ಅಕ್ಕಿಗಿರಣಿಯಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸುವ ಮೂಲಕ ಆಗಬಹುದಾದ ಹೆಚ್ಚಿನ ಅನಾಹುತ ತಪ್ಪಿಸಿದ ಅಗ್ನಿಶಾಮಕದಳ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಮಿಲ್ ಮಾಲೀಕ ಹಾಗೂ ಗ್ರಾಮದ ಮುಖಂಡರು ಅಭಿನಂದಿಸಿದರು.
Published on
ಮಳವಳ್ಳಿ: ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಶುಕ್ರವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಕ್ಕಿ ಗಿರಣಿಯೊಂದು ಬೆಂಕಿಗಾಹುತಿಯಾಗಿದೆ.
ಗ್ರಾಮದ ಸಯ್ಯದ್ ಮಹಮದ್ ಎಂಬುವರ ಅಕ್ಕಿಗಿರಣಿ ಬೆಂಕಿ ಅವಘಡದಿಂದ ಹಾನಿಯಾಗಿದೆ. ಗ್ರಾಮದಿಂದ ಮಂಡ್ಯಕ್ಕೆ ಸಂಪರ್ಕ ಕಲ್ಪಿಸಿ ಮುಖ್ಯರಸ್ತೆ ಬದಿಯಲ್ಲಿರುವ ರೈಸ್‌ಮಿಲ್ ಬಾಗಿಲು ಮುಚ್ಚಿದ್ದ ಸಂದರ್ಭದಲ್ಲಿ ಶುಕ್ರವಾರ ರಾತ್ರಿ ಸುಮಾರು 7ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಅಗ್ನಿಶಾಮಕ ಕಚೇರಿಗೆ ಮಾಹಿತಿ ನೀಡುವುದರ ಜತೆಗೆ ಮಾಲೀಕ ಸುತ್ತಲಿನವರ ಸಹಕಾರದಿಂದ ಬೆಂಕಿ ನಂದಿಸಲು ಪ್ರಯತ್ನ ನಡೆಸಿದ್ದಾರೆ.
ಆದರೆ ಮಿಲ್‌ನಲ್ಲಿ ಪ್ಲಾಸ್ಟಿಕ್ ಚೀಲಗಳು ಹೆಚ್ಚಾಗಿ ದಾಸ್ತಾನಿರಿಸಿದ್ದರಿಂದ ಬೆಂಕಿ ಕೆಲವೇ ಕ್ಷಣಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಆವರಿಸಿದೆ. ಅಷ್ಟರಲ್ಲಿ ಪಟ್ಟಣದಿಂದ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ಕೆನ್ನಾಲಿಗೆ ಸುತ್ತಲ ಪ್ರದೇಶವನ್ನು ಆವರಿಸುತ್ತಿರುವುದನ್ನು ಗಮನಿಸಿ ಒಂದು ವಾಹನದಿಂದ ನಿಯಂತ್ರಣ ಸಾಧ್ಯವಿಲ್ಲವೆಂಬ ನಿರ್ಧಾರಕ್ಕೆ ಬಂದರು. ಕೂಡಲೇ ತಿ. ನರಸೀಪುರದಿಂದಲೂ ಮತ್ತೆರಡು ಜಲ ವಾಹನಗಳನ್ನು ಕರೆಸಿಕೊಂಡರು. ಸುಮಾರು ಎರಡು ಗಂಟೆಗೂ ಹೆಚ್ಚುಕಾಲ ಮೂರು ಜಲವಾಹನಗಳ ಮೂವತ್ತಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುವ ಮೂಲಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಕಿ ಅವಘಡದಿಂದ ಅಕ್ಕಿಗಿರಣಿಯ ಯಂತ್ರೋಪಕರಣಗಳು ಸೇರಿದಂತೆ ಸುಮಾರು 30 ಲಕ್ಷ ರೂ. ಗೂ ಅಧಿಕ ದಾಸ್ತಾನು ಹಾನಿಯಾಗಿದೆ ಎಂದು ಮಿಲ್ ಮಾಲೀಕ ತಿಳಿಸಿದ್ದಾರೆ. ಆದರೂ ಯಾವುದೇ ಸಾವು ನೋವುಗಳಿಲ್ಲದೆ ದೊಡ್ಡಪ್ರಮಾಣದಲ್ಲಿ ಆಗಬಹುದಾದ ಅವಘಡವನ್ನು ನಿಯಂತ್ರಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದಾರೆಂದು ಮಿಲ್ ಮಾಲೀಕ ಮತ್ತು ಗ್ರಾಮದ ಮುಖಂಡರು ಪ್ರಶಂಸೆ ವ್ಯಕ್ತಪಡಿದರು.
ಇದೇ ವೇಳೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಗ್ನಿ ಶಾಮಕ ಠಾಣಾಧಿಕಾರಿ ಪಿ.ಹೇಮಂತ್ ಕುಮಾರ್ ಹಾಗೂ ಸಿಬ್ಬಂದಿ ವರ್ಗವನ್ನು ಅಭಿನಂದಿಸಲಾಯಿತು. ಶುಕ್ರವಾರ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಬೆಂಕಿ ಅವಘಡದಿಂದ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಗಿರಣಿ ಮಾಲೀಕನಿಗೆ ಸಾಂತ್ವನ ಹೇಳುವುದರ ಜತೆಗೆ ಸಂಬಂಧಪಟ್ಟ ಇಲಾಖೆಯಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net